New Advanced Proton Beam Therapy Center In Assam Lpg Price Hike Significant Growth In Upi Transactions
ಡೈಜೆಸ್ಟ್
Contributed by: Panchami M S|Vijaya Karnataka•
ಕ್ಯಾನ್ಸರ್ ಚಿಕಿತ್ಸೆಗೆ ಪ್ರೋಟಾನ್
ಅಸ್ಸಾಂ ಸರಕಾರವು ಗುವಾಹಟಿಯಲ್ಲಿದೇಶದ ಮೊದಲ ಸರಕಾರಿ ‘ಪ್ರೋಟಾನ್ ಬೀಮ್ ಥೆರಪಿ ಸೆಂಟರ್ ’ ಸ್ಥಾಪಿಸಲು 600 ಕೋಟಿ ರೂ. ಒಪ್ಪಂದಕ್ಕೆ ಸಹಿ ಹಾಕಿದೆ. ಐಬಿಎ ಸಂಸ್ಥೆ ಹಾಗೂ ವಿಶ್ವಬ್ಯಾಂಕ್ ನೆರವಿನೊಂದಿಗೆ ಈ ಸುಧಾರಿತ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ನಿರ್ಮಾಣವಾಗಲಿದೆ. ತಂತ್ರಜ್ಞಾನವು ಆರೋಗ್ಯಕರ ಜೀವಕೋಶಗಳಿಗೆ ಹಾನಿಯಾಗದಂತೆ ಕ್ಯಾನ್ಸರ್ ಕೋಶಗಳನ್ನು ನಿಖರವಾಗಿ ನಾಶಪಡಿಸಲಿದ್ದು, ವಿಶೇಷವಾಗಿ ಮಕ್ಕಳು, ಮೆದುಳು ಹಾಗೂ ಬೆನ್ನುಹುರಿಯ ಕ್ಯಾನ್ಸರ್ ಪೀಡಿತರಿಗೆ ಹೆಚ್ಚು ವರದಾನವಾಗಲಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ತಿಳಿಸಿದ್ದಾರೆ.==
ವಾಣಿಜ್ಯ ಎಲ್ ಪಿಜಿ ಬೆಲೆ ಏರಿಕೆ
ನವೆಂಬರ್ 1ರಿಂದ ಅನ್ವಯವಾಗುವಂತೆ ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು 10 ರೂಪಾಯಿಯಷ್ಟು ಹೆಚ್ಚಿಸಲಾಗಿದ್ದು, ವಿಮಾನ ಇಂಧನ ದರ ಲೀಟರ್ ಗೆ 1.37 ರೂಪಾಯಿಯಷ್ಟು ಏರಿಕೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಬೆಲೆ ಹಾಗೂ ರೂಪಾಯಿ-ಡಾಲರ್ ವಿನಿಮಯ ದರದ ಆಧಾರದ ಮೇಲೆ ಈ ಪರಿಷ್ಕರಣೆ ನಡೆಸಲಾಗಿದ್ದು, ಮನೆಗಳಿಗೆ ಬಳಸುವ ಗೃಹಬಳಕೆಯ ಎಲ್ ಪಿಜಿ ಸಿಲಿಂಡರ್ ದರ ಹಾಗೂ ಪೆಟ್ರೋಲ್ -ಡೀಸೆಲ್ ಬೆಲೆಯಲ್ಲಿಯಾವುದೇ ಬದಲಾವಣೆ ಮಾಡಿಲ್ಲಎಂದು ತೈಲ ಕಂಪನಿಗಳು ಸ್ಪಷ್ಟಪಡಿಸಿವೆ.
==
ಯುಪಿಐ ವಹಿವಾಟು ಹೆಚ್ಚಳ
ಅಕ್ಟೋಬರ್ ತಿಂಗಳಿನಲ್ಲಿ31.53 ಲಕ್ಷ ಕೋಟಿ ರೂಪಾಯಿ ಮೌಲ್ಯದ ಯುಪಿಐ ಡಿಜಿಟಲ್ ವಹಿವಾಟುಗಳು ನಡೆದಿವೆ ಎಂದು ಎನ್ ಪಿಸಿಐ ವರದಿ ತಿಳಿಸಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ವಹಿವಾಟು ಮೌಲ್ಯದಲ್ಲಿಶೇ. 16 ಮತ್ತು ಪ್ರಮಾಣದಲ್ಲಿಶೇ. 23ರಷ್ಟು ಏರಿಕೆಯಾಗಿದೆ. ಪ್ರತಿದಿನ ಸರಾಸರಿ 82.2 ಕೋಟಿ ವಹಿವಾಟುಗಳು ನಡೆದಿದ್ದು, ದಿನವೊಂದಕ್ಕೆ 1.01 ಲಕ್ಷ ಕೋಟಿ ರೂ.ಗಿಂತಲೂ ಹೆಚ್ಚು ಮೊತ್ತ ರವಾನೆಯಾಗಿದೆ. ಇದರೊಂದಿಗೆ ಪ್ರಮುಖ ವ್ಯಾಪಾರಿಗಳ ಮೇಲಿನ ಎಂಡಿಆರ್ ಶುಲ್ಕ ಜಾರಿಯನ್ನು ಹಬ್ಬದ ಹಿನ್ನೆಲೆಯಲ್ಲಿತಾತ್ಕಾಲಿಕವಾಗಿ ಮುಂದೂಡಲಾಗಿದೆ.
==
ಜಪಾನ್ ನಲ್ಲಿಭೂಕಂಪ
ಜಪಾನ್ ನ ಶಿಮಾ ಪ್ರದೇಶದಲ್ಲಿಭಾನುವಾರ ಮುಂಜಾನೆ ರಿಕ್ಟರ್ ಮಾಪಕದಲ್ಲಿ6.0 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಭೂಮಿಯ 352 ಕಿ.ಮೀ ಆಳದಲ್ಲಿಕಂಪನ ಉಂಟಾಗಿದ್ದು, ಫುಕುಶಿಮಾ ಸೇರಿದಂತೆ ಹಲವು ಭಾಗಗಳಲ್ಲಿನಡುಕ ಉಂಟಾಗಿದೆ ಎಂದು ಜಪಾನ್ ಹವಾಮಾನ ಇಲಾಖೆ ತಿಳಿಸಿದೆ. ಘಟನೆಯಲ್ಲಿಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿಗೆ ಹಾನಿಯಾದ ತಕ್ಷಣದ ವರದಿಗಳು ಬಂದಿಲ್ಲಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
==
ವಿದೇಶಿ ಶಿಕ್ಷಣ ಕುಸಿತ
ಅಮೆರಿಕದಲ್ಲಿವ್ಯಾಸಂಗ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಯಲ್ಲಿಶೇ. 13.5ರಷ್ಟು ಇಳಿಕೆಯಾಗಿದೆ. ಅಮೆರಿಕದ ಹೋಮ್ ಲ್ಯಾಂಡ್ ಸೆಕ್ಯೂರಿಟಿ ಇಲಾಖೆ ನೀಡಿರುವ ಅಧಿಧಿಕೃತ ಮಾಹಿತಿಯ ಪ್ರಕಾರ, ಪ್ರಸಕ್ತ ವರ್ಷ ಸಕ್ರಿಯ ವಿದ್ಯಾರ್ಥಿಗಳ ಸಂಖ್ಯೆ 3.16 ಲಕ್ಷಕ್ಕೆ ಕುಸಿದಿದೆ. ಮುಖ್ಯವಾಗಿ ಸ್ನಾತಕೋತ್ತರ ಕೋರ್ಸ್ ಗಳಿಗೆ ಸೇರುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಯಲ್ಲಿಶೇ. 20ರಷ್ಟು ಇಳಿಕೆ ಕಂಡುಬಂದಿದೆ. ಕಠಿಣ ವೀಸಾ ಕ್ರಮಗಳೇ ಈ ಕುಸಿತಕ್ಕೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗಿದೆ.