ಚಿಕ್ಕೋಡಿ : ಕನ್ನಡ ಭಾಷೆ ಸಂವಹನದ ಮಾಧ್ಯಮವಲ್ಲ, ನಮ್ಮ ಸಂಸ್ಕೃತಿ, ಸಂಸ್ಕಾರ, ಪರಂಪರೆ ಮತ್ತು ಅಸ್ಮಿತೆಯ ಪ್ರತೀಕ ಎಂದು ಕೆಎಲ್ ಇ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ದರ್ಶನಕುಮಾರ ಬಿಳ್ಳೂರ ಹೇಳಿದರು.
ಪಟ್ಟಣದ ಕೆಎಲ್ ಇ ಎಂಜಿನಿಯರಿಂಗ್ ಕಾಲೇಜಿನ ಕನ್ನಡ ಬಳಗ ಆಯೋಜಿಸಿದ್ದ 71 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿಧ್ವಜಾರೋರಣ ನೆರವೇರಿಸಿ ಅವರು ಮಾತನಾಡಿದರು.ಉಪನ್ಯಾಸಕರಾದ ಗಂಗಾ ಅರಬಾವಿ ಮಾತನಾಡಿದರು. ಕಾರ್ಯಕ್ರಮದ ಸಂಯೋಜಕ ಡಾ. ಬಾಹುಬಲಿ ಅಕಿವಾಟೆ ಸ್ವಾಗತಿಸಿದರು. ಸೌಭಾಗ್ಯ ಕುರುಬೆಟ್ಟ ನಿರೂಪಿಸಿ, ವಂದಿಸಿದರು. ಕೆಎಲ್ ಇ ಸ್ವತಂತ್ರ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಪಿ. ವೆಂಕಟರೆಡ್ಡಿ, ಡಾ.ಕುಮಾರ ಚೌಗಲಾ, ಡಾ. ಸುನೀಲ ಹೆಬ್ಬಾಳೆ, ಡಾ. ಸುನೀಲ ಶಿಂಧೆ, ಡಾ. ಚಂದ್ರಕಾಂತ ಉಮರಾಣಿ, ಪ್ರೊ. ಸಂಗೀತಾ ವಾಟೆಗಾಂವಕರ, ಪ್ರೊ. ಪ್ರದೀಪ ಹೊದ್ಲೂರ, ಡಾ . ಅರವಿಂದ ದೇಶಿ, ಉಪನ್ಯಾಸಕ ಮಹೇಶ ಸಣ್ಣಿಯವರ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.
- 1ಸಿಕೆಡಿ1
ಚಿಕ್ಕೋಡಿ ಕೆಎಲ್ ಇ ಎಂಜಿನಿಯರಿಂಗ್ ಕಾಲೇಜಿನಲ್ಲಿ71 ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.