ಮಾತೃಭಾಷೆ ಕಡೆಗಣಿಸಬೇಡಿ

Contributed by: abhijeet.dhp@gmail.com|Vijaya Karnataka•
the importance of celebrating mother language day
ರಾಜ್ಯೋತ್ಸವ ಆಚರಣೆ | ಶಾಸಕ ರಾಜುಗೌಡ ಪಾಟೀಲ ಸಲಹೆ

ಮಾತೃಭಾಷೆ ಕಡೆಗಣಿಸಬೇಡಿ
ವಿಕ ಸುದ್ದಿಲೋಕ ದೇವರಹಿಪ್ಪರ

‘‘ನಾಡು, ನುಡಿ, ಪರಂಪರೆ ಮತ್ತು ಶ್ರೀಮಂತ ಸಂಸ್ಕೃತಿಯನ್ನು ವಿಶ್ವಮಟ್ಟದಲ್ಲಿಮಾನ್ಯವಾಗಿಸಿದ ರಾಷ್ಟ್ರಕವಿ ಕುವೆಂಪು, ವರಕವಿ ದ.ರಾ. ಬೇಂದ್ರೆ ಸೇರಿದಂತೆ ಮಹಾನ್ ಚೇತನಗಳನ್ನು ನಾವೆಂದೆಂದಿಗೂ ಸ್ಮರಿಸಬೇಕು,’’ ಎಂದು ಶಾಸಕ ರಾಜಗೌಡ ಪಾಟೀಲ ಕುದರಿಸಾಲವಾಡಗಿ ಹೇಳಿದರು.

ಪಟ್ಟಣದ 1008 ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿತಾಲೂಕು ಆಡಳಿತ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿಹಮ್ಮಿಕೊಂಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿಮಾತನಾಡಿದ ಅವರು, ‘‘ಪಾಲಕರು, ಪೋಷಕರು ಹಾಗೂ ಯುವ ಸಮೂಹ ಇಂಗ್ಲಿಷ್ ವ್ಯಾಮೋಹಕ್ಕೆ ಬಲಿಯಾಗಿ ಕನ್ನಡವನ್ನು ಕಡೆಗಣಿಸಬಾರದು. ಮನೆಯಲ್ಲಿಹಾಗೂ ಸುತ್ತಮುತ್ತ ಕನ್ನಡ ಭಾಷಾಭ್ಯಾಸವನ್ನು ಮಾಡಿಸಿ, ಮಾತೃ ಭಾಷೆ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ,’’ ಎಂದರು.

ಪಪಂ ಉಪಾಧ್ಯಕ್ಷ ರಮೇಶ ಮಸಬಿನಾಳ ಹಾಗೂ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷ ರೆಹಮಾನಸಾಬ ಕನಕಲ್ , ‘‘ಕನ್ನಡ ರಾಜ್ಯೋತ್ಸವವು ಕೇವಲ ನವೆಂಬರ್ 1ರ ದಿನಾಚರಣೆಗೆ ಮಾತ್ರ ಸೀಮಿತವಾಗದೆ, ಪ್ರತಿದಿನವೂ ನಿತ್ಯೋತ್ಸವವಾಗಬೇಕು,’’ ಎಂದರು.

ಐಶ್ವರ್ಯ ಗುಡಿಮನಿ ಭರತನಾಟ್ಯ ಪ್ರದರ್ಶಿಸಿದರು. ಕನ್ನಡ ಭಾಷೆಯಲ್ಲಿ100ಕ್ಕೆ 100 ಅಂಕ ಪಡೆದ ವಿದ್ಯಾರ್ಥಿಗಳನ್ನು ಹಾಗೂ ನಾನಾ ಕ್ಷೇತ್ರದ ಸಾಧಕರನ್ನು ಗೌರವಿಸಲಾಯಿತು.

ಕಸಾಪ ತಾಲೂಕು ಅಧ್ಯಕ್ಷ ಸಿದ್ದು ಮೇಲಿನಮನಿ, ಸಮೂಹ ಸಂಪನ್ಮೂಲ ವ್ಯಕ್ತಿ ವಿಜಯಲಕ್ಷ್ಮಿ ನವಲಿ ತಾಪಂ ಇಒ ಭಾರತಿ ಚೆಲುವಯ್ಯ, ಪಪಂ ಮುಖ್ಯಾಧಿಕಾರಿ ಅಪ್ರೋಜ ಅಹ್ಮದ ಪಟೇಲ್ , ಪಿಎಸ್ ಐ ಸಚಿನ್ ಆಲಮೇಲಕರ, ಕ್ಷೇತ್ರ ಸಮನ್ವಯಾಧಿಕಾರಿ ಐ.ಸಿ. ಟಕ್ಕೆ, ಕಂದಾಯ ಶಿರಸ್ತೆದಾರ್ ಸುರೇಶ ಮ್ಯಾಗೇರಿ, ಸ.ನೌ.ತಾ. ಅಧ್ಯಕ್ಷ ಸಿ.ಬಿ.ಗಡಗಿ, ತಹಸೀಲ್ದಾರ್ -2 ಎಂ.ಜಿ.ಬಿರಾದಾರ ಇತರರಿದ್ದರು.

ಇದಕ್ಕೂ ಮೊದಲು ಕನ್ನಡಾಂಬೆಯ ಭವ್ಯ ಮೆರವಣಿಗೆ ಪಟ್ಟಣದ ಮೊಹರೆ ಹಣಮಂತರಾಯ ವೃತ್ತದಿಂದ ಆರಂಭವಾಗಿ ಪಂಚಾಚಾರ್ಯ ಕಲ್ಯಾಣ ಮಂಟಪ ತಲುಪಿತು. ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಕನ್ನಡಾಂಬೆಯ ಪರವಾಗಿ ಘೋಷಣೆ ಕೂಗುತ್ತಾ ಸಾಗಿದ್ದು ಸಾರ್ವಜನಿಕರ ಗಮನ ಸೆಳೆಯಿತು.

01ಡಿಎಚಪಿ01

ದೇವರಹಿಪ್ಪರಗಿಯಲ್ಲಿರಾಜ್ಯೋತ್ಸವ ಕಾರ್ಯಕ್ರಮವನ್ನು ಶಾಸಕ ರಾಜುಗೌಡ ಪಾಟೀಲ ಉದ್ಘಾಟಿಸಿದರು.

--

ದೇವರಹಿಪ್ಪರಗಿಯಲ್ಲಿಕನ್ನಡಾಂಬೆಯ ಭಾವಚಿತ್ರ ಮೆರವಣಿಗೆ ನಡೆಯಿತು.