ವಿಕ ಸುದ್ದಿಲೋಕ ರಾಣೇಬೆನ್ನೂರಸುಮಾರು ಎರಡು ಸಾವಿರ ವಷÜರ್ ಗಳಿಗೂ ಹೆಚ್ಚಿನ ಇತಿಹಾಸ ಹೊಂದಿರುವ ಕನ್ನಡ ಭಾಷೆ ತನ್ನದೇ ಆದ ವಿಶಿಷÜ್ಟ ಪರಂಪರೆ, ಸಾಹಿತ್ಯ ಸಂಪತ್ತು ಹಾಗೂ ಸಾಂಸ್ಕೃತಿಕ ಹಿರಿಮೆ ಹೊಂದಿದೆ. ಶ್ರೀಮಂತ ಭಾಷೆæಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಿಕೊಂಡು ಹೋಗುವ ಪ್ರಯತ್ನವನ್ನು ಮಾಡಬೇಕು ಎಂದು ತಹಸೀಲ್ದಾರ್ ಆರ್ .ಎಚ್ .ಭಾಗವಾನ್ ಹೇಳಿದರು.
ನಗರದ ಚರ್ಚ್ ರಸ್ತೆ ಶಿಕ್ಷಕರ ಸಂಘದಲ್ಲಿಭಾನುವಾರ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ, ತಾಲೂಕ ಆಡಳಿತ, ನಗರಸಭೆ,ತಾಪಂ, ಶಿಕ್ಷಣ ಇಲಾಖೆ ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ಆಶ್ರಯದಲ್ಲಿಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶ್ಯಾಮಸುಂದರ ಅಡಿಗ ಮಾತನಾಡಿ, ‘‘ಕನ್ನಡ ನಮ್ಮ ಸಂಸ್ಕೃತಿ, ಸಂಸ್ಕಾರ, ಇತಿಹಾಸ ಮತ್ತು ಬದುಕಿನ ಪ್ರತಿಬಿಂಬವಾಗಿದೆ. ನಾಡು, ನುಡಿ, ನೆಲ, ಜಲದ ಬಗ್ಗೆ ಪ್ರತಿಯೊಬ್ಬರೂ ಅಭಿಮಾನ ಹೊಂದುವುದರ ಜೊತೆಗೆ ಅವುಗಳ ಸಂರಕ್ಷಣೆಯ ಗುರುತರ ಜವಾಬ್ದಾರಿ ಹೊರಬೇಕು’’ ಎಂದರು.
ತಾಲೂಕು ಕಸಾಪ ಅಧ್ಯಕ್ಷ ಪ್ರಭಾಕರ ಶಿಗ್ಲಿಅಧ್ಯಕ್ಷತೆ ವಹಿಸಿದ್ದರು. ಪೌರಾಯುಕ್ತ ಫಕ್ಕೀರಪ್ಪ ಇಂಗಳಗಿ, ತಾಪಂ ಇಒ ಡಾ.ವೆಂಕಟೇಶ ಸಣ್ಣಬಿದರಿ, ಬಿಸಿಎಂ ಇಲಾಖೆಯ ನಿವೃತ್ತ ಜಿಲ್ಲಾಧಿಕಾರಿ ವಿ ಎಸ್ ಹಿರೇಮಠ, ಸ್ವಾಭಿಮಾನ ಕರವೇ ರಾಜ್ಯಾಧ್ಯಕ್ಷ ನಿತ್ಯಾನಂದ ಕುಂದಾಪುರ, ರೈತಮುಖಂಡ ರವೀಂದ್ರಗೌಡ ಪಾಟೀಲ, ಗಣೇಶ ಗೋಣಿಬಸಮ್ಮನವರ, ಶಿವಕುಮಾರ ಗೊರವರ, ಮಂಜಾನಾಯ್ಕ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
ಪೋಟೋ 1 ಆರ್ ಎನ್ ಆರ್ 6
ರಾಣೇಬೆನ್ನೂರಿನ ಚರ್ಚ್ ರಸ್ತೆ ಶಿಕ್ಷಕರ ಸಂಘದಲ್ಲಿಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ತಹಸೀಲ್ದಾರ್ ಆರ್ .ಎಚ್ .ಭಾಗವಾನ್ ಉದ್ಘಾಟಿಸಿದರು.