ಶಿಕ್ಷಕರಿಗೆ ಕಾರ್ಯಾಗಾರ

Contributed by: channamadegowda21@gmail.com|Vijaya Karnataka•
workshop for teachers a new path to educational development
ವಿಕ ಸುದ್ದಿಲೋಕ ಪಾಂಡವಪುರ

ಸರಕಾರದ ವ್ಯವಸ್ಥೆಗಳಲ್ಲಿಬದಲಾಗುತ್ತಿರುವ ಶಿಕ್ಷಣದ ನೀತಿ, ಬೋಧನ ಕ್ರಮಗಳ ಬಗ್ಗೆ ಶಿಕ್ಷಕರು ಅರಿವು ಮೂಡಿಸಿಕೊಳ್ಳಬೇಕು ಎಂದು ಬಿಜಿಎಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಜೆ.ಎನ್ .ರಾಮಕೃಷ್ಣೇಗೌಡ ಹೇಳಿದರು.
ಪಟ್ಟಣದ ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿಪ್ರೌಢಶಾಲೆಯ ಮುಖ್ಯ ಶಿಕ್ಷಕರು, ಸಹ ಶಿಕ್ಷಕರಿಗೆ ನಡೆದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.

‘‘ಬದಲಾಗುತ್ತಿರುವ ಪಠ್ಯಗಳು, ಬೋಧನ ಕ್ರಮಗಳ ಬಗ್ಗೆ ಶಾಲೆಯ ಶಿಕ್ಷಕರಿಗೆ ಅರಿವು ಮೂಡಿಸುವ ಉದ್ದೇಶದಿಂದ ಶಾಲೆಯಲ್ಲಿಪ್ರತಿ ತಿಂಗಳೂ ಶಿಕ್ಷಕರಿಗೆ ಕಾರ್ಯಾಗಾರ ನಡೆಸುವ ಮೂಲಕ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಶಿಕ್ಷಕರು ಇದರ ಸದ್ಭಳಕೆ ಮಾಡಿಕೊಳ್ಳಬೇಕು,’’ಎಂದು ಸಲಹೆ ನೀಡಿದರು.

‘‘ಕಲಿಕೆ ಎಂಬುದು ನಿರಂತರವಾಗಿ ಇರುತ್ತದೆ, ಶಿಕ್ಷಕರು ಕಲಿಯುವುದು ಬಹಳಷ್ಟು ಇರುತ್ತದೆ. ಅದರಲ್ಲೂಪ್ರೌಢಶಾಲೆಯ ಶಿಕ್ಷಕರು ಮಕ್ಕಳನ್ನು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ದಗೊಳಿಸುವ ಮಹತ್ತರ ಜವಾಬ್ದಾರಿ ಇರುತ್ತದೆ. ಅದಕ್ಕೆ ಶಿಕ್ಷಕರು ಸಜ್ಜಾಗಬೇಕು, ಶಿಕ್ಷಕರ ಸಹಕಾರದಿಂದ ಮಾತ್ರ ಇಂತಹ ಕಾರ್ಯಾಗಾರ ಯಶಸ್ವಿಯಾಗಲು ಸಾಧ್ಯ,’’ಎಂದರು.

ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್ .ಕೆಂಪೂಗೌಡ ಮಾತನಾಡಿ, ‘‘ಮಕ್ಕಳು ಪ್ರೌಢಶಾಲೆಯ ಹಂತದಲ್ಲಿಕಲಿಯುವ ಶಿಕ್ಷಣವೇ ಮಕ್ಕಳ ಮನಸ್ಸಿನಲ್ಲಿಬಹಳ ದಿನಗಳ ಕಾಲ ಶಾಶ್ವತವಾಗಿ ಉಳಿಯುತ್ತದೆ. ಕಲಿಕೆ ಎಂಬುದು ನಿರಂತರವಾಗಿರಬೇಕು, ಕಲಿಕೆಗೆ ಕೊನೆ ಇರುವುದಿಲ್ಲ,’’ಎಂದು ತಿಳಿಸಿದರು.

‘‘ಬಿಜಿಎಸ್ ಶಿಕ್ಷಣ ಸಂಸ್ಥೆಯೂ ಮಕ್ಕಳ ಶೈಕ್ಷಣಿಕ ಪೂರಕವಾಗಿ ಕೆಲಸ ಮಾಡುತ್ತಿದೆ. ಇದರಿಂದಾಗಿ ಗ್ರಾಮೀಣ ಪ್ರದೇಶದ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆದು ಭವಿಷ್ಯದಲ್ಲಿಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗಿದೆ,’’ಎಂದು ಬಣ್ಣಿಸಿದರು.

ಸಂಪನ್ಮೂಲ ವ್ಯಕ್ತಿ ಪ್ರಜ್ವಲ್ ಅವರು ಕಾರ್ಯಗಾರ ನಡೆಸಿದರು.

ಕಾರ್ಯಕ್ರಮದಲ್ಲಿರೈತ ಮುಖಂಡ ಶಂಕರೇಗೌಡ, ಪ್ರಾಂಶುಪಾಲ ರಘು ಸೇರಿದಂತೆ ಹಲವರು ಇದ್ದರು.

ಎಂಡಿವೈ01ಪಿಎನ್ ಡಿ6ಸಿ

ಪಾಂಡವಪುರ ಪಟ್ಟಣದ ಬಿಜಿಎಸ್ ಶಾಲೆಯಲ್ಲಿನಡೆದ ಶಿಕ್ಷಕ ಕಾರ ್ಯಗಾರವನ್ನು ಬಿಜಿಎಸ್ ಶಿಕ್ಷಣ ಸಂಸ್ಥೆ ಕಾರ ್ಯದರ್ಶಿ ಡಾ.ಜೆ.ಎನ್ .ರಾಮಕೃಷ್ಣೇಗೌಡ ಉದ್ಘಾಟಿಸಿದರು.

ಎಂಡಿವೈ01ಪಿಎನ್ ಡಿ7ಸಿ

ಪಾಂಡವಪುರ ಪಟ್ಟಣದ ಬಿಜಿಎಸ್ ಶಾಲೆಯಲ್ಲಿನಡೆದ ಶಿಕ್ಷಕ ಕಾರ ್ಯಗಾರದಲ್ಲಿಬಿಜಿಎಸ್ ಶಿಕ್ಷಣ ಸಂಸ್ಥೆ ಕಾರ ್ಯದರ್ಶಿ ಡಾ.ಜೆ.ಎನ್ .ರಾಮಕೃಷ್ಣೇಗೌಡ ಮಾತನಾಡಿದರು.