ಮಕ್ಕಳು ಉತ್ತಮ ಅಂಕ ಪಡೆದುಕೊಳ್ಳುವುದರೊಂದಿಗೆ ಸಂವಹನ ಕೌಶಲ್ಯ , ಸೃಜನಶೀಲತೆ, ಒಳ್ಳೆಯ ವ್ಯಕ್ತಿತ್ವ ಹೊಂದುವುದರಿಂದ ಅತೀ ಶೀಘ್ರದಲ್ಲಿಉದ್ಯೋಗವನ್ನು ತಮ್ಮದಾಗಿಸಿಕೊಳ್ಳಬಹುದು ಎಂದು ಮಣಿಪಾಲ ಎಂಐಟಿಯ ಅಸೋಸಿಯೇಟ್ ಡೈರೆಕ್ಟರ್ (ಅಕಾಡೆಮಿಕ್ಸ್ ) ಡಾ. ರವಿಪ್ರಕಾಶ್ ಶೆಟ್ಟಿ ಹೇಳಿದ್ದಾರೆ.ಅವರು ಶನಿವಾರ ಮಣಿಪಾಲ ಜ್ಞಾನಸುಧಾ ಪ.ಪೂ. ಕಾಲೇಜಿನಲ್ಲಿನಡೆದ ಜ್ಞಾನ ಸಂಭ್ರಮ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿಗೌರವಾನ್ವಿತ ಅತಿಥಿಯಾಗಿ ಮಾತನಾಡಿದರು.
ಶಿಸ್ತು ಇಲ್ಲದಂತಹ ವ್ಯಕ್ತಿತ್ವಕ್ಕೆ ಬದುಕಿನಲ್ಲಿಯಾವುದೇ ರೀತಿಯ ಮನ್ನಣೆ ಸಿಗುವುದಿಲ್ಲ. ನಮ್ಮಲ್ಲಿಉತ್ತಮ ನೈತಿಕತೆ, ಸರಿಯಾದ ಆಯ್ಕೆ, ಆತ್ಮವಿಶ್ವಾಸ, ಅದಕ್ಕೆ ತಕ್ಕ ಬದ್ಧತೆ ಅತೀ ಮುಖ್ಯ. ಬದುಕಿನಲ್ಲಿಸಾಧಿಸಬೇಕೆಂಬ ಛಲವಿದ್ದರೆ ಒಂದು ಅದೃಷ್ಟದ ಬಾಗಿಲು ಮುಚ್ಚಿದರೂ ಹತ್ತಾರು ಬಾಗಿಲುಗಳು ತೆರೆದುಕೊಳ್ಳುತ್ತವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಧ್ವ ವಾದಿರಾಜ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ ಮೆಂಟ್ ನ ಪ್ರಿನ್ಸಿಪಾಲ್ ಡಾ. ನಾಗರಾಜ್ ಭಟ್ ಮಾತನಾಡಿ, ಉನ್ನತ ಶಿಕ್ಷಣಕ್ಕೆ ಹೋಗುವಾಗ ಹಲವಾರು ರೀತಿಯಲ್ಲಿಶೈಕ್ಷಣಿಕ ಸವಾಲುಗಳನ್ನು ಎದುರಿಸಲು ಸಿದ್ಧರಿರಬೇಕು. ಹಾಗಿದ್ದಲ್ಲಿಮಾತ್ರ ಪ್ರಸ್ತುತ ಉದ್ಯೋಗ ಕ್ಷೇತ್ರದಲ್ಲಿಯೂ ಸಶಕ್ತವಾಗಿ ಮುಂದುವರಿಯಲು ಸಾಧ್ಯ. ಕೃತಕ ಬುದ್ಧಿಮತ್ತೆ ಇವತ್ತಿನ ಎಲ್ಲಾಬಹುಪಾಲು ಉದ್ಯೋಗವನ್ನು ಆವರಿಸಿರುವುದರಿಂದ ಅಂಕಗಳ ಜೊತೆಯಲ್ಲಿಉತ್ತಮ ಪ್ರಾವೀಣ್ಯತೆ ಹೊಂದುವುದರ ಮೂಲಕ ಕೃತಕ ಬುದ್ಧಿಮತ್ತೆಗೆ ಸಂಬಂಧಿತ ಜ್ಞಾನ, ಕೌಶಲ ಬೆಳೆಸಿಕೊಂಡಾಗ ಮಾತ್ರ ಭವಿಷ್ಯದಲ್ಲಿಉತ್ತಮ ಜೀವನ ರೂಪಿಸಿಕೊಳ್ಳಬಹುದು ಎಂದರು.
ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರಿಗೆ, ರಾಜ್ಯಮಟ್ಟದ ಕ್ರೀಡಾ ಸಾಧಕರಿಗೆ ಮತ್ತು ದ್ವಿತೀಯ ಪಿಯುಸಿ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಮಣಿಪಾಲ ಜ್ಞಾನಸುಧಾ ಕಾಲೇಜಿನ ಉಪಪ್ರಾಂಶಪಾಲರುಗಳಾದ ರವಿ ಜಿ. ಮತ್ತು ಹೇಮಂತ, ವಿದ್ಯಾರ್ಥಿ ನಾಯಕರುಗಳಾದ ಪ್ರಥಮ್ ಭಂಡಾರಿ ಮತ್ತು ಸ್ಮತಿ ಶೆಟ್ಟಿ ಉಪಸ್ಥಿತರಿದ್ದರು.
ಕಾಲೇಜಿನ ಪ್ರಿನ್ಸಿಪಾಲ್ ಗಣೇಶ ಶೆಟ್ಟಿ ಸ್ವಾಗತಿಸಿದರು. ಗಣಿತಶಾಸ್ತ್ರ ಉಪನ್ಯಾಸಕಿ ಕುಮಾರಿ ನಕ್ಷಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.