ಕಾರ್ಕಳ: ನೂರು ದಿನಗಳ ತರಬೇತಿಗೆ ಚಾಲನೆ

Contributed by: vkkarkala@gmail.com|Vijaya Karnataka•
hundred day short term training program launch in karkala
ವಿಕ ಸುದ್ದಿಲೋಕ ಕಾರ್ಕಳ

ಮುಖ್ಯಮಂತ್ರಿಗಳ ನೂರು ದಿನಗಳ ಅಲ್ಪಾವಧಿ ತರಬೇತಿ ಕಾರ್ಯಕ್ರಮದ ಉದ್ಘಾಟನೆಯು ಕಾರ್ಕಳದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿಸೋಮವಾರ ಜರುಗಿತು.
ನಿತ್ಯಾನಂದ ಎಲೆಕ್ಟ್ರಿಕಲ್ ನ ಎಂ.ಡಿ. ನಿತ್ಯಾನಂದ ಉದ್ಘಾಟಿಸಿ, 240 ಗಂಟೆಗಳ ಎಂಎಂವಿ, ಎಂಆರ್ ಎಸಿ, ಎಲೆಕ್ಟ್ರಿಶಿಯನ್ ವಿಭಾಗಳ ಅಲ್ಪಾವಧಿ ತರಬೇತಿಗೆ ಚಾಲನೆ ನೀಡಿದರು.

ಈ ತರಬೇತಿ ಕಾರ್ಯಕ್ರಮದಲ್ಲಿಪ್ರತಿಷ್ಠಿತ ಏಳು ಕಂಪನಿಗಳಾದ ಆಭರಣ ಮೋಟರ್ , ಅರವಿಂದ ಮೋಟಾರ್ , ಕೆಏನ್ ಎನ್ ಡಿ, ಸುನಿತ ಮೋಟರ್ಸ್ , ಸಾನ್ವಿ ರೆಫ್ರಿಜರೇಶನ್ , ನಿತ್ಯಾನಂದ ಎಲೆಕ್ಟ್ರಿಕಲ್ಸ್ , ಮೆಸಿಲಿ ಅವರೊಂದಿಗೆ ಎಂಓಯು ಮಾಡಿಕೊಂಡಿದ್ದು, ಅವರ ಸಹಯೋಗದಲ್ಲಿಕೈಗಾರಿಕೆ ಹಾಗೂ ತರಬೇತಿ ಸಂಸ್ಥೆ ನೀಡುವ ತರಬೇತಿಯಲ್ಲಿರುವ ಸ್ಕಿಲ್ ಗ್ಯಾಪ್ ಅನ್ನು ಈ ಅಲ್ಪಾವಧಿ ತರಬೇತಿಯಲ್ಲಿತರಬೇತುದಾರರಿಗೆ ನೀಡಿ ಪೂರ್ಣಗೊಂಡ ನಂತರ ಎಲ್ಲತರಬೇತಿದಾರರಿಗೆ ಶೇ.100ರಷ್ಟು ಉದ್ಯೋಗ ದೊರಕಿಸುವ ಯೋಜನೆ ಇದಾಗಿದೆ. ಸರಕಾರಿ ತರಬೇತಿ ಸಂಸ್ಥೆ ಕಾರ್ಕಳ ಪ್ರಿನ್ಸಿಪಾಲ್ ಮಮತಾ ಎಲ್ .ಎಲ್ ., ತರಬೇತಿ ಅಧಿಕಾರಿ ಸಂತೋಷ್ ನಾಯಕ್ , ಸಂಸ್ಥೆಯ ಸಿಬ್ಬಂದಿಗಳು ಹಾಗೂ ತರಬೇತು ದಾರರು ಉಪಸ್ಥಿತರಿದ್ದರು.

ಫೊಟೋಕ್ಯಾಪ್ಶನ್ -ಕಾರ್ಕಳದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿಅಲ್ಪಾವಧಿ ತರಬೇತಿಗೆ ಚಾಲನೆ ನೀಡಲಾಯಿತು.

(ಫೊಟೋ:2ಕೆವಿ-ಟಿಆರ್ ಬಿ)