ಇಂಟ್ರೊ: ದೀಪಗಳ ಜೊತೆ ಸುವಾಸನೆಯೊಂದಿಗೆ ಹಬ್ಬವನ್ನು ಬರಮಾಡಿಕೊಳ್ಳಲು ಕ್ಯಾಂಡಲ್ ಗಳು ಸಜ್ಜಾಗಿವೆ.ಶುಭಾ ವಿಕಾಸ್
ಕತ್ತಲ ಪರದೆ ಸರಿಸಿ ಬೆಳಕಿನ ನಸುನಗೆ ಚೆಲ್ಲುವ ದೀಪಾವಳಿ ಹಬ್ಬದ ಬೆಳಗಿಗೆ ಎದುರು ನೋಡುವ ಈ ಸಮಯವಿದು. ಈ ಹೊತ್ತಲ್ಲಿಮೂಡಣದ ರಂಗುಗಳನ್ನು ತನ್ನಲ್ಲಿಕರಗಿಸಿಕೊಂಡು ಧರೆಗಿಳಿದು ಬಂದಂತೆ ವರ್ಣರಂಜಿತ ದೀಪಾವಳಿ ಕ್ಯಾಂಡಲ್ ಗಳು ಮನೆಮನ ಬೆಳಗಲು ಸಜ್ಜಾಗಿವೆ. ಹಸಿರು, ಗುಲಾಬಿ, ಹಳದಿ ಹಾಗೂ ಮಿನುಗುವ ಚಿನ್ನದ ಬಣ್ಣಗಳಲ್ಲಿಸಿಂಗಾರಗೊಂಡು ಸುವಾಸಿತವಾಗಿಯೂ ಸಡಗರವನ್ನು ಇಮ್ಮಡಿಸಲು ಹೊರಟಿವೆ. ಹಬ್ಬದ ದಿನ ಹಚ್ಚಿದ ಮೇಣದ ಬತ್ತಿಯಿಂದ ಹೊರಹೊಮ್ಮುವ ಪರಿಮಳದ ತೆಳು ಅಲೆಗಳು ಗಾಳಿಯಲ್ಲಿತೇಲಿ ಬರುವಾಗ ಮನದ ಮೂಲೆಯಲ್ಲಿಕೂತಿದ್ದ ಹಳೆಯ ನೆನಪುಗಳು ಜೀವಂತವಾಗುತ್ತವೆ. ದಿನದ ಇಡೀ ಓಡಾಟದ ಆಯಾಸ, ಚಿಂತೆಗಳು ಆ ಸುವಾಸನೆಯಲ್ಲಿಕರಗಿ ಮಾಯವಾಗುತ್ತವೆ. ಮನೆಯ ಪ್ರತಿ ಮೂಲೆಯೂ ಒಂದು ಅಧ್ಯಾತ್ಮಿಕ ಹಾಗೂ ಪ್ರಶಾಂತ ಲೋಕವಾಗಿ ಬದಲಾಗುತ್ತದೆ.
ಹಬ್ಬದ ಸಡಗರವನ್ನು ಹೆಚ್ಚಿಸಲು ಇತ್ತೀಚೆಗೆ ವಿಭಿನ್ನ ವಿನ್ಯಾಸ, ಬಣ್ಣ, ಅಲಂಕಾರದ ಜೊತೆ ಚೇತೋಹಾರಿ ಸುಗಂಧ ಒಳಗೊಂಡ ಮೇಣದ ಬತ್ತಿಗಳು ಗಮನ ಸೆಳೆಯುತ್ತಿದ್ದು, ಪರಿಸರಸ್ನೇಹಿಯಾಗಿಯೂ ಸೆಳೆಯುತ್ತಿವೆ. ನೈಸರ್ಗಿಕ ಸೋಯಾ ವ್ಯಾP್ಸ… ಮತ್ತು ಸಸ್ಯಾಧಾರಿತ ಹತ್ತಿಯ ಬತ್ತಿಗಳನ್ನು ಒಳಗೊಂಡ ಅಲಂಕಾರಿಕ ಕ್ಯಾಂಡಲ್ ಗಳತ್ತ ನೋಟ ಇಲ್ಲಿದೆ.
ಫ್ಲೋರಲ್ ಶೈಲಿ: ಹಬ್ಬದ ಅಲಂಕಾರದಲ್ಲಿಹೂವುಗಳಿಗೆ ವಿಶೇಷ ಸ್ಥಾನವಿದೆ. ಹೂವುಗಳನ್ನಿಡುವ ಸಾಂಪ್ರದಾಯಿಕ ಶೈಲಿಗೆ ಪರ್ಯಾಯವಾಗಿ, ಈಗ ಕಮಲದ ಆಕಾರದ ಮೇಣದಬತ್ತಿಗಳು ಟ್ರೆಂಡ್ ನಲ್ಲಿವೆ. ಕಮಲವು ಲಕ್ಷ್ಮಿ ದೇವಿಯ ಸಂಕೇತವಾಗಿರುವುದರಿಂದ, ಇವು ದೀಪಾವಳಿ ಪೂಜೆ ಮತ್ತು ಪೂಜಾ ಕೊಠಡಿಯ ಅಲಂಕಾರಕ್ಕೆ ಅತ್ಯಂತ ಸೂಕ್ತ. ಚಿನ್ನದ ಬಣ್ಣದ ಅಂಚುಗಳು ಮತ್ತು ಆಂಬರ್ ವುಡ್ ನಂತಹ ಹಿತಕರ ಸುಗಂಧ ಹೊಂದಿರುವ ಈ ಕ್ಯಾಂಡಲ್ ಗಳನ್ನು ಉರಿಸದಿದ್ದರೂ ಗೃಹಾಲಂಕಾರ ವಸ್ತುವಾಗಿ ಬಳಸಬಹುದು.
ಹಿತ್ತಾಳೆ ಬೌಲ್ : ಸಾಂಪ್ರದಾಯಿಕ ಶೈಲಿಯ ಮನೆಗಳಿಗೆ ರಾಯಲ್ ಹಾಗೂ ಆ್ಯಂಟಿಕ್ ಲುಕ್ ನೀಡಲು ಹಿತ್ತಾಳೆ ಬೌಲ್ ನಲ್ಲಿಸಿದ್ಧಪಡಿಸಿದ ಮೇಣದಬತ್ತಿಗಳು ಉತ್ತಮ ಆಯ್ಕೆ. ಮೇಣ ಖಾಲಿಯಾದ ನಂತರವೂ ಈ ಹಿತ್ತಾಳೆ ಬೌಲ್ ಗಳನ್ನು ಟೀ-ಲೈಟ್ ಇಡಲು ಅಥವಾ ಅಲಂಕಾರಿಕ ವಸ್ತುಗಳನ್ನು ಇಡಲು ಮರುಬಳಕೆ ಮಾಡಬಹುದು.
ಅಲಂಕಾರಿಕ ವ್ಯಾP್ಸ… ಆರ್ಟ್ : ಇತ್ತೀಚೆಗೆ ಹೆಚ್ಚು ಜನಪ್ರಿಯವಾಗುತ್ತಿರುವ ನವೀನ ಟ್ರೆಂಡ್ ಎಂದರೆ ಮೇಣದಬತ್ತಿಗಳನ್ನು ಸಣ್ಣ ಶಿಲ್ಪಕಲೆಗಳಂತೆ ವಿನ್ಯಾಸಗೊಳಿಸುವುದು. ಗೋಳಾಕಾರ, ಕೆತ್ತನೆ ಮಾಡಿದ ಹೂವುಗಳು ಮತ್ತು ಜ್ಯಾಮಿತೀಯ ಆಕಾರಗಳಲ್ಲಿಲಭ್ಯವಿರುವ ಈ ಕ್ಯಾಂಡಲ್ ಗಳನ್ನು ಉರಿಸುವುದಕ್ಕಿಂತ ಹೆಚ್ಚಾಗಿ ಟೇಬಲ್ , ಶೆಲ್ ್ಫ ಅಥವಾ ಕನ್ಸೋಲ್ ಮೇಲೆ ಅಲಂಕಾರಿಕ ವಸ್ತುವಾಗಿ ಇಡಲು ಜನರು ಇಷ್ಟಪಡುತ್ತಾರೆ.
ಸುಗಂಧಿತ ಮಿನಿ ಟೀ-ಲೈಟ್ ಗಳು: ಗುಲಾಬಿ, ಶ್ರೀಗಂಧ ಅಥವಾ ಮಲ್ಲಿಗೆಯಂತಹ ಸೌಮ್ಯ ಸುಗಂಧವಿರುವ ಮಿನಿ ಟೀ-ಲೈಟ್ ಗಳು ಮನೆಯ ವಾತಾವರಣವನ್ನೇ ಬದಲಾಯಿಸುತ್ತವೆ. ದೀಪಾವಳಿ ಕೂಟಗಳಲ್ಲಿಊಟದ ಮೇಜಿನ ಅಲಂಕಾರಕ್ಕೆ ಮತ್ತು ಆಗಮಿಸುವ ಅತಿಥಿಗಳಿಗೆ ಸಣ್ಣ ಉಡುಗೊರೆಯಾಗಿ ನೀಡಲು ಇವು ಅತ್ಯುತ್ತಮ.
ಬಾಕ್ಸ್
ಮನಸ್ಸಿಗೆ ಮುದ
ಸಾಂಪ್ರದಾಯಿಕ ದೀಪಗಳ ಬೆಳಕಿನ ಜೊತೆಗೆ ಕ್ಯಾಂಡಲ್ ಗಳ ನೈಸರ್ಗಿಕ ಸುಗಂಧ ಸಮ್ಮಿಳಿತಗೊಂಡಾಗ ಇಡೀ ಮನೆಯಲ್ಲಿಧನಾತ್ಮಕ ಶಕ್ತಿ ಮತ್ತು ಪ್ರಶಾಂತತೆ ಆವರಿಸುತ್ತದೆ. ಇವುಗಳನ್ನು ಉರಿಸದಿದ್ದರೂ ಮನೆಯ ಅಲಂಕಾರಕ್ಕೆ ಬಳಸಬಹುದು. ಉಡುಗೊರೆಯಾಗಿಯೂ ನೀಡಬಹುದು. ಶಾಂತ ಮತ್ತು ಹಿತಕರ ವಾತಾವರಣ ನೀಡುವ ಗ್ಲಾಸ್ ಜಾರ್ ಕ್ಯಾಂಡಲ್ ಗಳು ಬೇಡಿಕೆ ಹೆಚ್ಚಿಸಿಕೊಂಡಿವೆ. ಮಲಗುವ ಕೋಣೆ ಅಥವಾ ಪೂಜಾ ಕೊಠಡಿಯಲ್ಲಿಬಳಸಲು ಶ್ರೀಗಂಧ, ಮಲ್ಲಿಗೆ ಅಥವಾ ಲ್ಯಾವೆಂಡರ್ ಸುವಾಸನೆಯ ಜಾರ್ ಕ್ಯಾಂಡಲ್ ಗಳು ಅತ್ಯುತ್ತಮ. ಸ್ಟಡಿ ಟೇಬಲ್ ಅಂದಗೊಳಿಸಲು ಸೋಯಾ ವ್ಯಾP್ಸ… ಕ್ಯಾಂಡಲ್ ಸೂಕ್ತ. ಹಬ್ಬದ ವಿವಿಧ ಸಮಯಕ್ಕೆ ಸೂಕ್ತವಾದ ಸುವಾಸನೆಗಳ ಕ್ಯಾಂಡಲ್ ಗಳಿವೆ. ಬೆಳಗಿನ ಪೂಜೆ ಮತ್ತು ಸಿದ್ಧತೆ, ರಾತ್ರಿಯ ಶಾಂತ ಕ್ಷಣಗಳಿಗೆ ಪೂರಕ ಕ್ಯಾಂಡಲ್ ಗಳು ಲಭ್ಯ.