ತ್ರಿಶಾ ಕ್ಲಾಸಸ್ : ಸಿಎ ಇಂಟರ್ ಮಿಡಿಯೇಟ್ ಸಾಧಕರಿಗೆ ತ್ರಿಶಾ ಸನ್ಮಾನ

Contributed by: ajitha.m@timesofindia.com|Vijaya Karnataka•
trisha classes honors ca students achievements
ವಿಕ ಸುದ್ದಿಲೋಕ ಉಡುಪಿ

ತ್ರಿಶಾ ಕ್ಲಾಸಸ್ ವತಿಯಿಂದ ಸಿಎ ಇಂಟರ್ಮೀಡಿಯೇಟ್ ಪರೀಕ್ಷೆಯಲ್ಲಿಸಾಧನೆಗೈದ 45 ವಿದ್ಯಾರ್ಥಿಗಳಿಗೆ ಅಭಿನಂದನಾ ಹಾಗೂ ಸನ್ಮಾನ ಕಾರ್ಯಕ್ರಮವು ಶನಿವಾರ ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜಿನಲ್ಲಿನಡೆಯಿತು.
ಸಿಎ ಇಂಟರ್ಮೀಡಿಯೇಟ್ ಪರೀಕ್ಷೆಯ ಎರಡೂ ಗ್ರೂಪ್ ನಲ್ಲಿಉತ್ತೀರ್ಣರಾಗಿ ಅಖಿಲ ಭಾರತ ಮಟ್ಟದಲ್ಲಿ35 ನೇ ರಾರ ಯಂಕ್ ಪಡೆದ ಮೊಹಮ್ಮದ್ ರಿಝಾನ್ ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.

ತ್ರಿಶಾ ಸಂಸ್ಥೆಯ ಅಧ್ಯಕ್ಷ ಸಿಎ ಗೋಪಾಲಕೃಷ್ಣ ಭಟ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಸಿಎ ವೃತ್ತಿಯ ಮಹತ್ವ, ಅದರಲ್ಲಿರುವ ವಿವಿಧ ಅವಕಾಶಗಳು ಹಾಗೂ ವೃತ್ತಿಪರ ಕ್ಷೇತ್ರದಲ್ಲಿಯಶಸ್ಸು ಸಾಧಿಸಲು ಅಗತ್ಯವಿರುವ ನಿರಂತರ ಪರಿಶ್ರಮ, ಶಿಸ್ತು ಮತ್ತು ಬದ್ಧತೆಯ ಕುರಿತು ಮಾರ್ಗದರ್ಶನ ನೀಡಿದರು. ವಿದ್ಯಾರ್ಥಿಗಳು ತಮ್ಮ ಗುರಿಯ ಬಗ್ಗೆ ಸ್ಪಷ್ಟತೆ ಹೊಂದಿ, ಆತ್ಮವಿಶ್ವಾಸದಿಂದ ಮುನ್ನಡೆಯಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿಸಿದ್ಧಾಂತ್ ಫೌಂಡೇಶನ್ ನ ಟ್ರಸ್ಟಿ ರಾಮ್ ಪ್ರಭು, ತ್ರಿಶಾ ಕ್ಲಾಸಸ್ ನ ಶಿಕ್ಷಕ ವೃಂದ, ಶಿಕ್ಷಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಫೋಟೊ: 02ಎಎ ತ್ರಿಶಾ.