ಶಾಲೆಗಳಿಗೆ ಮಧ್ಯಾಹ್ನದ ಬಿಸಿಯೂಟ ಪೂರೈಸಲು ‘ಕ್ಲಸ್ಟರ್ ಅಡುಗೆ ಕೇಂದ್ರ’ ನಿರ್ಮಿಸುವಂತೆ ಪ್ರಾಥಮಿಕ ಶಾಲೆ ಶಿಕ್ಷಕರ ಸಂಘ ಕೋರಿದ ಹಿನ್ನೆಲೆಯಲ್ಲಿರಾಜ್ಯ ಸರಕಾರ ಈ ಯೋಜನೆಯ ಸಾಧಕ- ಬಾಧಕ ಅರಿಯಲು ಮುಂದಾಗಿದೆ. ಈ ಯೋಜನೆ ಸಮರ್ಪಕ ಅನುಷ್ಠಾನಗೊಂಡರೆ ಶಿಕ್ಷಕರಿಗೆ ಬಿಸಿಯೂಟದ ನಿರ್ವಹಣೆ ಭಾರ ಕಡಿಮೆಯಾಗುವ ನಿರೀಕ್ಷೆಯಿದೆ.
ರಾಜ್ಯದಲ್ಲಿ2002-03ರಿಂದ ಸರಕಾರಿ ಶಾಲೆಗಳ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತಿದ್ದು, ಇದರ ನಿರ್ವಹಣೆಗೆ ಶಿಕ್ಷಕರು ಸಾಹಸ ಪಡುವಂತಾಗಿದೆ. ಶಾಲೆಯ ಮುಖ್ಯಶಿಕ್ಷಕ, ಸಹ ಶಿಕ್ಷಕರು ತರಕಾರಿ, ಹಾಲು ಸೇರಿದಂತೆ ದಿನಸಿ ಸಾಮಗ್ರಿಗಳ ದಾಖಲೆ ನಿರ್ವಹಣೆಯ ಆಡಳಿತಾತ್ಮಕ ಕೆಲಸ ನಿರ್ವಹಿಸುತ್ತಿದ್ದಾರೆ. ಪಾಠ ಬೋಧನೆಯ ಸಮಯವೂ ಬಿಸಿಯೂಟ ನಿರ್ವಹಣೆಗೆ ವ್ಯಯವಾಗುತ್ತಿದೆ. ಈ ಹಿನ್ನೆಲೆಯಲ್ಲಿಸರಕಾರ ರಾಜ್ಯಾದ್ಯಂತ ಕ್ಲಸ್ಟರ್ ಅಡುಗೆ ಕೇಂದ್ರಗಳನ್ನು ನಿರ್ಮಿಸುವ ಸಾಧ್ಯತೆ ಪರಿಶೀಲನೆಗೆ ಮುಂದಾಗಿದೆ. 10 ರಿಂದ 15 ಶಾಲೆಗಳಿಗೆ ಒಂದು ಕ್ಲಸ್ಟರ್ ನಿಗದಿ ಮಾಡಿ ಅಲ್ಲಿಅತ್ಯಾಧುನಿಕ ಕೇಂದ್ರ ಸ್ಥಾಪಿಸಲು ಉದ್ದೇಶಿಸಲಾಗಿದೆ. ಇಲ್ಲಿಆಹಾರ ಸಿದ್ಧಪಡಿಸಿ ವಾಹನಗಳ ಮೂಲಕ ಆಯಾ ಶಾಲೆಗಳಿಗೆ ತಲುಪಿಸಲು ಚಿಂತನೆ ನಡೆಸಲಾಗಿದೆ. ಇದರಿಂದ ಶಿಕ್ಷಕರು ಬಿಸಿಯೂಟದ ನಿರ್ವಹಣೆ ಬದಲಿಗೆ ಸಂಪೂರ್ಣವಾಗಿ ಬೋಧನೆ ಮತ್ತು ಮಕ್ಕಳ ಶೈಕ್ಷಣಿಕ ಪ್ರಗತಿಯತ್ತ ಗಮನಹರಿಸಲು ಸಹಕಾರಿಯಾಗಲಿದೆ.
ಅಡುಗೆ ಕೇಂದ್ರಗಳಲ್ಲಿಸ್ಥಳೀಯ ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸಲು ಹಾಗೂ ಈ ಕೇಂದ್ರಗಳ ನಿರ್ವಹಣೆ ಜವಾಬ್ದಾರಿಯನ್ನು ಸ್ಥಳೀಯ ಸ್ತ್ರೀ ಶಕ್ತಿ ಸಂಘಟನೆ ಅಥವಾ ಸ್ವಸಹಾಯ ಗುಂಪುಗಳಿಗೆ ವಹಿಸುವ ಚಿಂತನೆ ಇದೆ. ಇದು ಗ್ರಾಮೀಣ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೂ ಪೂರಕವಾಗಲಿದೆ. ಒಂದೇ ಕಡೆ ವ್ಯವಸ್ಥಿತವಾಗಿ ಆಹಾರ ಸಿದ್ಧಪಡಿಸುವುದರಿಂದ ಅಡುಗೆಯ ಗುಣಮಟ್ಟ ಹಾಗೂ ನಿರ್ವಹಣೆ ಸುಧಾರಿಸುವ ನಿರೀಕ್ಷೆಯಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟರು. ಈಗಾಗಲೇ ಶಾಲೆಗಳಲ್ಲಿಕಾರ್ಯನಿರ್ವಹಿಸುತ್ತಿರುವ ಬಿಸಿಯೂಟದ ಅಡುಗೆ ಸಿಬ್ಬಂದಿಯನ್ನು ಹೊಸ ವ್ಯವಸ್ಥೆಯಲ್ಲಿಶಾಲೆಗೆ ಆಹಾರ ತಲುಪಿಸಿದ ಬಳಿಕ ಮಕ್ಕಳಿಗೆ ಊಟ ಬಡಿಸುವ ಕಾರ್ಯಕ್ಕೆ ಬಳಸಿಕೊಳ್ಳಲು ಯೋಜಿಸಲಾಗಿದೆ.
ಕ್ಲಸ್ಟರ್ ಅಡುಗೆ ಕೇಂದ್ರವೊಂದರಿಂದ 1000ದಿಂದ 1500 ವಿದ್ಯಾರ್ಥಿಗಳಿಗೆ ಊಟ ಪೂರೈಸುವ ಚಿಂತನೆಯಿದೆ. ಮೂರು ನಾಲ್ಕು ಕ್ಲಸ್ಟರ್ ಕೇಂದ್ರಗಳ ನಿರ್ವಹಣೆಯನ್ನು ಒಬ್ಬರಿಗೆ ವಹಿಸಿದರೆ ಊಟದ ಗುಣಮಟ್ಟ, ವ್ಯವಸ್ಥಿತ ನಿರ್ವಹಣೆ, ಪೂರೈಕೆ ಸವಾಲುಗಳಿವೆ. ಇವೆಲ್ಲವನ್ನೂ ಸರಿಯಾಗಿ ನಿರ್ವಹಿಸಬೇಕಿದೆ.
ಧಿಧಿಧಿಧಿ----
* ಬಾಕ್ಸ್
ಸಾಧಕ- ಬಾಧಕ ಕೋರಿದ ಸರಕಾರ
ಕ್ಲಸ್ಟರ್ ಕಿಚನ್ ಸೆಂಟರ್ ನಿರ್ವಹಣೆ, ಆಹಾರ ಪೂರೈಕೆ, ಸಾರಿಗೆ ವ್ಯವಸ್ಥೆ ಹಾಗೂ ಈ ಯೋಜನೆ ಅನುಷ್ಠಾನದಿಂದ ಉಂಟಾಗಬಹುದಾದ ಸಾಧಕ ಬಾಧಕಗಳ ಕುರಿತು ಅಭಿಪ್ರಾಯ ಸಲ್ಲಿಸುವಂತೆ ರಾಜ್ಯದ ಎಲ್ಲಾ ಜಿಲ್ಲೆಗಳ ಉಪ ನಿರ್ದೇಶಕರಿಗೆ, ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ಹಾಗೂ ಪಿಎಂ ಪೋಷಣ್ ಶಕ್ತಿ ನಿರ್ಮಾಣ ಜಿಲ್ಲಾ ಅಧಿಕಾರಿಗಳಿಗೆ ಶಿಕ್ಷಣ ಇಲಾಖೆಯ ಪಿಎಂ ಪೋಷಣ್ ಶಕ್ತಿ ನಿರ್ಮಾಣ್ ವಿಭಾಗದ ರಾಜ್ಯ ಜಂಟಿ ನಿರ್ದೇಶಕರು ಸೂಚಿಸಿದ್ದಾರೆ. ರಾಜ್ಯ ಪ್ರಾಥಮಿಕ ಶಾಲೆ ಶಿಕ್ಷಕರ ಸಂಘ ಕ್ಲಸ್ಟರ್ ಕಿಚನ್ ಸೆಂಟರ್ ಸ್ಥಾಪಿಸುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿಅಭಿಪ್ರಾಯ ಸಲ್ಲಿಸುವಂತೆ ಜಂಟಿ ನಿರ್ದೇಶಕರು ಪತ್ರದಲ್ಲಿಉಲ್ಲೇಖಿಸಿದ್ದಾರೆ.
---
* ಕೋಟ್
ಕ್ಲಸ್ಟರ್ ಅಡುಗೆ ಕೇಂದ್ರ ಸ್ಥಾಪನೆಗೆ ಸರಕಾರ ಅಭಿಪ್ರಾಯ ಕೇಳಿದೆ. ಈ ಕುರಿತ ಸಾಧಕ ಮತ್ತು ಬಾಧಕಗಳ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು.
-ಅಜೀತ್ ಮನ್ನಿಕೇರಿ, ಡಿಡಿಪಿಐ ಚಿಕ್ಕೋಡಿ
ಕ್ಲಸ್ಟರ್ ಅಡುಗೆ ಕೇಂದ್ರ ಅತ್ಯುತ್ತಮ ಕಲ್ಪನೆ. ಇದರಿಂದ ಶಿಕ್ಷಕರ ಮೇಲಿನ ಹೊರೆ ಕಡಿಮೆಯಾಗಲಿದೆ. ಗ್ರಾಮೀಣ ಮಹಿಳೆಯರಿಗೆ ಉದ್ಯೋಗಾವಕಾಶ ಸಿಗುವ ಜತೆಗೆ ಮಕ್ಕಳಿಗೆ ಗುಣಮಟ್ಟದ ಬಿಸಿಯೂಟ ದೊರೆಯಲಿದೆ.