ಸೇವಾ ಮನೋಭಾವ ಬೆಳೆಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ

Contributed by: chowlurmaheshgowda@gmail.com|Vijaya Karnataka•
combating poverty and cultivating service mindset through education
ಸೇವಾ ಮನೋಭಾವ ಬೆಳೆಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ

ವಿಕ ಸುದ್ದಿಲೋಕ ಹೊಸದುರ್ಗ
ಬಡತನದ ಸವಾಲುಗಳನ್ನು ಮೆಟ್ಟಿನಿಂತು ಶಿಕ್ಷಣದ ಮೂಲಕ ಬದುಕು ರೂಪಿಸಿಕೊಂಡು, ಸಮಾಜದಲ್ಲಿಮಾನವೀಯತೆ, ಸಹಕಾರ ಮತ್ತು ಸೇವಾ ಮನೋಭಾವ ಬೆಳೆಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹೊಳಲ್ಕೆರೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಕೊಟ್ರಪ್ಪ ಹೇಳಿದರು.

ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ. ಮಹಾಲಿಂಗಪ್ಪ ಅವರ ವಯೋನಿವೃತ್ತಿ ಹಿನ್ನೆಲೆ ಇತ್ತೀಚೆಗೆ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿಮಾತನಾಡಿದರು.

ಪ್ರೊ. ಮಹಾಲಿಂಗಪ್ಪ ಅವರು ಬಡತನದ ನಡುವೆಯೂ ಶಿಕ್ಷಣಕ್ಕೆ ಆದ್ಯತೆ ನೀಡಿ ಸಾಧನೆ ಮಾಡಿದವರು. ತಮ್ಮ ವೃತ್ತಿಜೀವನದಲ್ಲಿವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸುವುದರ ಜತೆಗೆ ಮಾನವೀಯ ಮೌಲ್ಯಗಳಿಗೆ ಹೆಚ್ಚಿನ ಒತ್ತು ನೀಡಿದ್ದಾರೆ ಎಂದು ಸ್ಮರಿಸಿದರು.

ಪ್ರೊ. ಮಹಾಲಿಂಗಪ್ಪ ಮಾತನಾಡಿ, ಡಿ.ವಿ.ಜಿ. ಅವರ ಮಂಕುತಿಮ್ಮನ ಕಗ್ಗದ ’ಬೆಲ್ಲಸಕ್ಕರೆಯಾಗು, ದೀನದುರ್ಬಲರಿಗೆ ಎಲ್ಲರೊಳಗೊಂದಾಗು ಮಂಕುತಿಮ್ಮ’ ಎಂಬ ಸಾಲುಗಳು ಜೀವನದ ಮೌಲ್ಯವನ್ನು ಸಾರುತ್ತವೆ. ಮನುಷ್ಯ ಜೀವನದಲ್ಲಿಸರಳತೆ, ಮಾನವೀಯತೆ ಹಾಗೂ ಪರಸ್ಪರ ಸಹಕಾರದ ಗುಣಗಳು ಬಹಳ ಮುಖ್ಯ. ಶಿಕ್ಷಣವೆಂದರೆ ಕೇವಲ ಪಠ್ಯಪುಸ್ತಕದ ಜ್ಞಾನ ನೀಡುವುದಲ್ಲ, ವಿದ್ಯಾರ್ಥಿಗಳಲ್ಲಿಉತ್ತಮ ಜೀವನ ಮೌಲ್ಯಗಳನ್ನು ಬೆಳೆಸುವುದೂ ಮುಖ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿಪ್ರಾಂಶುಪಾಲರಾದ ಡಾ. ಅಶ್ವತ್ ಯಾದವ್ , ಡಾ. ಮೋಹನ್ , ವಿಶ್ರಾಂತ ಪ್ರಾಚಾರ್ಯರಾದ ಹನುಮಂತರಾಯ್ , ಜಯಪ್ಪ, ಮಂಜುನಾಥ್ , ರಾಜಪ್ಪ, ಕೊಟ್ರಪ್ಪ ಸಿ.ಕೆ., ಪ್ರಾಧ್ಯಾಪಕರಾದ ಸತೀಶ್ , ಜಯಪ್ರಕಾಶ್ , ಸವಿತಾ, ಭ್ರಮರಾಂಬ ಸೇರಿದಂತೆ ಇತರರು ಉಪಸ್ಥಿತರಿದ್ದರು.

----

ಚಿತ್ರಮಾಹಿತಿ9ಎಚ. ಎಸ್ . ಡಿ3: ಹೊಸದುರ್ಗ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ. ಮಹಾಲಿಂಗಪ್ಪ ಅವರು ವಯೋನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿಗಣ್ಯರು ಸನ್ಮಾನಿಸಿ ಗೌರವಿಸಿದರು.