ವಿಕ ಸುದ್ದಿಲೋಕ ಮೂಲ್ಕಿಸೀಮೆಯ ಒಂಭತ್ತು ಮಾಗಣೆ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿಶನಿವಾರ ಭಾನುವಾರ ರಾತ್ರಿ ಶ್ರೀ ರಂಗಪೂಜೆ, ದೀಪಾವಳಿ ಬಲಿ ಉತ್ಸವ ನಡೆಯಿತು.
ಕ್ಷೇತ್ರದ ತಂತ್ರಿಗಳಾದ ಶಿಬರೂರು ಗೋಪಾಲಕೃಷ್ಣ ತಂತ್ರಿ, ಅರ್ಚಕರಾದ ಶ್ರೀಪತಿ ಉಪಾಧ್ಯಾಯ ಮತ್ತು ನರಸಿಂಹ ಭಟ್ ನೇತೃತ್ವದಲ್ಲಿಧಾರ್ಮಿಕ ಕಾರ್ಯಕ್ರಮ, ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು. ರಾತ್ರಿ ದೇವರಿಗೆ ರಂಗ ಪೂಜೆ, ತುಳಸಿ ಪೂಜೆ, ಬಲಿಂದ್ರ ಪೂಜೆ, ದೀಪಾವಳಿ ಬಲಿ ಉತ್ಸವ ನಡೆಯಿತು.
ಕ್ಷೇತ್ರದ ಆನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತ ಅರಸರು, ಕಾರ್ಯ ನಿರ್ವಣಾಧಿಕಾರಿ ಶ್ವೇತಾ ಪಳ್ಳಿ, ಪ್ರಸಾದ್ ಭಟ್ , ಗೋಪಾಲಕೃಷ್ಣ ಭಟ್ ,ಶ್ರೀನಾಥ್ ಭಟ್ , ಜೀರ್ಣೋದ್ಧಾರ ಸಮಿತಿಯ ಸುನಿಲ್ ಆಳ್ವ, ಅತುಲ್ ಕುಡ್ವ, ಸತೀಶ್ ಭಂಡಾರಿ, ಸಂಜೀವ ದೇವಾಡಿಗ, ಚಂದ್ರಶೇಖರ್ ಸುವರ್ಣ, ಕೃಷ್ಣ ಶೆಟ್ಟಿ, ನಾಗಸ್ವರ ವಾದಕ ನಾಗೇಶ್ ಬಪ್ಪನಾಡು, ಅಕೌಂಟೆಂಟ್ ಶಿವಶಂಕರ್ ವರ್ಮ, ಕಾರ್ತಿಕ್ ಕೋಟ್ಯಾನ್ ಉಪಸ್ಥಿತರಿದ್ದರು.
ಫೋಟೋ:09ಎಮ್ ಎಲ್ ಕೆ1
ಕ್ಯಾ: ಬಪ್ಪನಾಡು ದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿಶ್ರೀರಂಗಪೂಜೆ, ದೀಪಾವಳಿ ಬಲಿ ಉತ್ಸವ ನಡೆಯಿತು.