ಜೆಡಿಎಸ್ , ಬಿಜೆಪಿ ನಾಯಕರು ವಿಚಲಿತ ((ಚೂರುಪಾರು...))

Contributed by: purnima.muni@gmail.com|Vijaya Karnataka•
leaders of jds and bjp in a state of anxiety
ಜೆಡಿಎಸ್ , ಬಿಜೆಪಿ ನಾಯಕರು ವಿಚಲಿತ

ವಿಜಯಪುರ: ರಾಜ್ಯದಲ್ಲಿಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರದ ಜನಪರವಾದ ಯೋಜನೆಗಳು ಹಾಗೂ, ಕಾರ್ಯವೈಖರಿಯಿಂದ ಜೆಡಿಎಸ್ - ಬಿಜೆಪಿ ನಾಯಕರು ವಿಚಲಿತರಾಗಿದ್ದಾರೆ ಎಂದು ಕಾಂಗ್ರೆಸ್ ಯುವ ಮುಖಂಡ ಆರ್ . ಪ್ರದೀಪ್ ಕುಮಾರ್ ವಾಗ್ದಾಳಿ ನಡೆಸಿದರು.
ಪಟ್ಟಣದಲ್ಲಿಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರ ಗ್ಯಾರಂಟಿ ಯೋಜನೆಗಳ ಜತೆಗೆ ಹಲವಾರು ಜನಪರ ಯೋಜನೆಗಳನ್ನು ಜಾರಿಗೊಳಿಸಿದೆ. ರೈತರು, ಹಾಲು ಉತ್ಪಾದಕರ ಒತ್ತಾಯಕ್ಕೆ ಮಣಿದಿರುವ ಸರಕಾರ, ಹಾಲಿನ ದರ 8 ರೂಪಾಯಿಗೆ ಏರಿಕೆ ಮಾಡಿದೆ. ಅದರಲ್ಲಿ7 ರೂಪಾಯಿ ನೇರವಾಗಿ ರೈತರಿಗೆ ನೀಡುತ್ತಿದೆ. ರೈತರು ಕಾಂಗ್ರೆಸ್ ಪರವಾಗಿ ಹೋಗುತ್ತಾರೆ ಎನ್ನುವ ಭಯದಲ್ಲಿಈಗ ಜೆಡಿಎಸ್ -ಬಿಜೆಪಿ ಪಕ್ಷಗಳವರು ಸರಕಾರದ ವಿರುದ್ಧ ಮಾತನಾಡುತ್ತಿದ್ದಾರೆ. ಇದು ರೈತ ವಿರೋಧಿಧಿ ಧೋರಣೆಯಾಗಿದೆ ಎಂದರು.

ಜೆಡಿಎಸ್ -ಬಿಜೆಪಿಯವರು ಒಂದು ಲೀಟರ್ ಪೆಟ್ರೋಲ್ ಬೆಲೆ 110 ಕ್ಕೆ ಏರಿಕೆ ಮಾಡಿದಾಗ, ಡೀಸೆಲ್ 98ಕ್ಕೆ ಏರಿಕೆ ಮಾಡಿದಾಗ ಏಕೆ ಮಾತನಾಡುವುದಿಲ್ಲಎಂದು ಪ್ರಶ್ನಿಸಿದ ಅವರು, ರಾಜ್ಯ ಸರಕಾರ ಜಾರಿಗೊಳಿಸಿರುವ ಯೋಜನೆಗಳು ಸಮರ್ಪಕವಾಗಿ ಜನಸಾಮಾನ್ಯರಿಗೆ ತಲುಪುವಂತೆ ಸಹಕಾರ ನೀಡವುದನ್ನು ಬಿಟ್ಟು, ಕೇವಲ ರಾಜಕಾರಣ ಮಾಡುವುದಕ್ಕಾಗಿ ಜನಪರ ಯೋಜನೆಗಳನ್ನು ಬೊಟ್ಟು ಮಾಡುವುದು ಸರಿಯಲ್ಲಎಂದರು.

ಇತ್ತೀಚೆಗೆ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು, ಕೋಲಾರದಲ್ಲಿಪ್ರಚೋದನಾಕಾರಿ ಭಾಷಣ ಮಾಡಿ, ಗೂಂಡಾ ಸಂಸ್ಕತ್ರೃತಿಯನ್ನು ಪ್ರದರ್ಶಿಸುತ್ತಿದ್ದಾರೆ ಎಂದು ದೂರಿದರು.

09.ವಿಜಯಪುರ.02: ಆರ್ .ಪ್ರದೀಪ್ ಕುಮಾರ್ ಕಾಂಗ್ರೆಸ್ ಯುವ ಮುಖಂಡ.