ಗಮನ ಸೆಳೆದ ಸಂಗೀತ, ನೃತ್ಯ ಪ್ರದರ್ಶನವಿಕ ಸುದ್ದಿಲೋಕ ರಾಯಚೂರು
ವಿಶಾಖಪಟ್ಟಣದ ತಾರಕೇಶ್ವರ ಫೌಂಡೇಶನ್ , ರಾಯಚೂರಿನ ವಿಶ್ವ ಕುಂಡಲಿನಿ ಸಂಘ ಹಾಗೂ ಗ್ರೀನ್ ರಾಯಚೂರು ಸಂಸ್ಥೆಯಿಂದ ನಗರದ ಪಂ.ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ‘ರಾಯಚೂರು ಶಾಂಭಾಲಾ ಮಾಸ್ಟರ್ ಸಂಗೀತ್ ಸಮಾರೋಹ್ -2026’ 4ನೇ ವರ್ಷದ ವೈಭವಯುತ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಭರತನಾಟ್ಯ, ವಾದ್ಯ ಸಂಗೀತ ಸೇರಿ ನಾನಾ ಕಾರ್ಯಕ್ರಮಗಳು ಜನಮನ ಸೆಳೆದವು.
ವಿಶ್ವ ಕುಂಡಲಿನಿ ಸಂಘದ ಸಂಸ್ಥಾಪಕ ಅಧ್ಯಕ್ಷ ಜಮ್ಮುವಿನ ಸ್ವಾಮಿ ಜ್ಞಾನಪ್ರಭು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಒಟ್ಟು 3 ವೈವಿಧ್ಯಮಯ ಸಾಂಸ್ಕೃತಿಕ ಪ್ರದರ್ಶನಗಳು ಜರುಗಿದವು. ಬೆಳಗಾವಿಯ ಬಾಲಪ್ರತಿಭೆ ಅನಘಾ ಸುಖಟಣಕರ್ ಅವರ ಹಿಂದೂಸ್ತಾನಿ ಸಿತಾರ್ ವಾದನದೊಂದಿಗೆ ಸಮಾರೋಹ ಆರಂಭವಾಯಿತು. ಬಾಲಕಿಗೆ ಅವರ ತಂದೆ ಅವಧೂತ್ ಸುಖಟಣಕರ್ ತಬಲಾ ಸಾಥ್ ನೀಡಿದರು. ನಂತರ ಜಿಲ್ಲೆಯ ಸಂಗೀತ ದಿಗ್ಗಜರಾದ ಪಂಡಿತ್ ನರಸಿಂಹಲು ವಡವಾಟಿ ಅವರು ಕನ್ನಡ ಮತ್ತು ಹಿಂದಿಯ ಪ್ರಸಿದ್ಧ ಭಕ್ತಿಗೀತೆಗಳನ್ನು ಹಾಡುವ ಜತೆಗೆ ಕ್ಲಾರಿಯೋನೆಟ್ ವಾದ್ಯದ ಮೂಲಕ ಪ್ರೇಕ್ಷಕರ ಮನಸೂರೆಗೊಳಿಸಿದರು. ಹೈದರಾಬಾದ್ ನ ತಬಲಾ ವಾದಕ ಎಂ.ಎಸ್ . ಪವನ್ ಕುಮಾರ್ ಅವರು ವಡವಾಟಿ ಅವರ ಸಂಗೀತ ಕಚೇರಿಗೆ ತಬಲಾ ಸಾಥ್ ನೀಡಿದರು. ಕೊನೆಯಲ್ಲಿ, ಹೈದರಾಬಾದ್ ನ ರೇವತಿ ಕೃಷ್ಣ ಮತ್ತು ಅವರ ಶಿಷ್ಯ ವೃಂದದಿಂದ ನೀಡಿದ ಭರತನಾಟ್ಯ ಪ್ರದರ್ಶನ ಜನಮನ ರಂಜಿಸಿತು. ಕಾರ್ಯಕ್ರಮ ಸಹ ಸಂಘಟಕ ಲಾಲಜಿ ಪಟೇಲ್ , ರಮೇಶ್ ಚಂದ್ ಜೈನ್ , ಗ್ರೀನ್ ರಾಯಚೂರು ಸಂಸ್ಥೆಯ ಅಧ್ಯಕ್ಷೆ ಸರಸ್ವತಿ ಕಿಲಕಿಲೆ, ಕಾರ್ಯದರ್ಶಿ ರಾಜೇಂದ್ರ ಶಿವಾಳೆ, ವಿಜಯ್ ಸರೋದೆ, ಗಣ್ಯರಾದ ಕಮಲ್ ಕುಮಾರ್ ಜೈನ್ , ಪ್ರಲ್ಹಾದರಾವ್ ಕುಲಕರ್ಣಿ, ಪವನ್ ಕಿಶೋರ್ ಪಟೇಲ್ , ಅಜೀತ್ ಸಂಚಾಟಿ, ಶಿವಬಸಪ್ಪ ಮಾಲಿಪಾಟೀಲ್ , ರಂಗರಾವ್ ದೇಸಾಯಿ ಸೇರಿ ಇತರರು ಇದ್ದರು.
* ಆರ್ ಸಿಎಚ್ 09ಎಂಎಸ್ 01
ರಾಯಚೂರಿನ ಪಂ.ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿನಡೆದ ‘ರಾಯಚೂರು ಶಾಂಭಾಲಾ ಮಾಸ್ಟರ್ ಸಂಗೀತ್ ಸಮಾರೋಹ್ ಕಾರ್ಯಕ್ರಮ ನಡೆಯಿತು.