ಬೀದರ್ : ನಗರದ ಡಾ.ಚೆನ್ನಬಸವ ಪಟ್ಟದೇವರು ಜಿಲ್ಲಾರಂಗಮಂದಿರದಲ್ಲಿಜೈಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಸಮಿತಿಯ ವತಿಯಿಂದ 71ನೇ ಕನ್ನಡ ರಾಜ್ಯೋತ್ಸವದ ನಿಮಿತ್ತ ನ.20ರಂದು ಕರ್ನಾಟಕ ಜನ ಸೇವಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ನಾನಾ ಕ್ಷೇತ್ರಗಳಲ್ಲಿನಿಸ್ವಾರ್ಥ ಸೇವೆ, ಸಮಾಜಮುಖಿ ಕಾರ್ಯಗಳು, ಜನಪರ ಹೋರಾಟಗಳು ಹಾಗೂ ಗಣನೀಯ ಸಾಧನೆಗಳನ್ನು ಮಾಡಿರುವ ಅರ್ಹ ಸಾಧಕರನ್ನು ಗುರುತಿಸಿ ಜಿಲ್ಲಾಮಟ್ಟದ ಕರ್ನಾಟಕ ಜನ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲು ನಿರ್ಧರಿಸಲಾಗಿದೆ. ಅರ್ಹರು ನ.14ರ ಸಂಜೆ 5ರೊಳಗೆ ಜೈ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಕೇಂದ್ರ ಕಚೇರಿ, ಮಹಾಲಕ್ಷ್ಮೇ ಎಂಟರ್ ಪೈ್ರಸಸ್ , ಮೊದಲನೇ ಮಹಡಿ, ಗಾಂಧಿಗಂಜ್ , ಬೀದರ್ ಗೆ ಅರ್ಜಿ ಸಲ್ಲಿಸಬೇಕು. ಮಾಹಿತಿಗಾಗಿ 7676222014, 9916151213, 9449269851, 8722633378, 9121889870ಗೆ ಸಂಪರ್ಕಿಸಬೇಕು ಎಂದು ವೇದಿಕೆ ಜಿಲ್ಲಾಧ್ಯಕ್ಷ ರಮೇಶ್ ಮರ್ಜಾಪುರ ಇತರರು ತಿಳಿಸಿದ್ದಾರೆ.ಲೋಕ ಅದಾಲತ್ ಸಭೆಗೆ ಸೂಚನೆ
ಬೀದರ್ : ನಗರದ ಜಿಲ್ಲಾಕಾನೂನು ಸೇವೆಗಳ ಪ್ರಾಧಿಕಾರದ ಸಭಾಂಗಣದಲ್ಲಿಡಿ. 12ರಂದು ನಡೆಯಲಿರುವ ರಾಷ್ಟಿ್ರೕಯ ಲೋಕ ಅದಾಲತ್ ನ ಹಿನ್ನೆಲೆಯಲ್ಲಿಜಿಲ್ಲಾಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರ ಅಧ್ಯಕ್ಷತೆಯಲ್ಲಿನ.12, 16, 17, 18 ಮ ತ್ತು 19ರಂದು ನಾನಾ ಇಲಾಖೆಗಳ ಮುಖ್ಯಸ್ಥರ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಧಿಕಾರದ ಸದಸ್ಯ ಕಾರ್ಯ ದರ್ಶಿ ರಾಘವೇಂದ್ರ ಉಪಾಧ್ಯೆ ತಿಳಿಸಿದ್ದಾರೆ. ನ.16ರಂದು ಮಧ್ಯಾಹ್ನ 3ಕ್ಕೆ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು, ಜಿಪಂ ಸಿಇಒ ಮತ್ತು ಎಲ್ಲತಾಲೂಕಿನ ಇಒಗಳ ಜತೆ ಸಭೆ, ಬಿಎಸ್ ಎನ್ ಎಲ್ ಅಧಿಕಾರಿಗಳ ಸಭೆ, ಎಸ್ ಇಜೆಡ್ , ಕೆಇಬಿ ಮತ್ತು ಎಂಇಐಎಲ್ ಹಾಗೂ ಸಿಪಿಐ, ಪಿಎಸ್ ಐ ಮತ್ತು ಜೆಸ್ಕಾಂ ಅಧಿಕಾರಿಗಳ ಸಭೆ, ನಗರಸಭೆ ಆಯುಕ್ತರೊಂದಿಗೆ ಸಭೆ, ಸಂಜೆ 5.30ಕ್ಕೆ ಜಿಲ್ಲೆಯ ಎಲ್ಲಠಾಣೆಗಳ ಸಿಪಿಐ ಮತ್ತು ಪಿಎಸ್ ಐ ಅವರೊಂದಿಗೆ ಸಭೆ ನಡೆಯಲಿದ್ದಾರೆ ಎಂದು ತಿಳಿಸಿದ್ದಾರೆ. ನ.17ರಂದು ಮಧ್ಯಾಹ್ನ 2.30ಕ್ಕೆ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು, ಎಲ್ಲಹಿರಿಯ ಸಿವಿಲ್ ನ್ಯಾಯಾಧೀಶರು, ಇನ್ಸೂರೆನ್ಸ್ ಕಂಪನಿಗಳ ಮುಖ್ಯಸ್ಥರೊಂದಿಗೆ ಕ್ಲೇಮೆಂಟ್ ವಕೀಲರು ಹಾಗೂ ಇನ್ಸೂರೆನ್ಸ್ ವಕೀಲರ ಜತೆ ಸಭೆ, ಸಂಜೆ 5.30ಕ್ಕೆ ಒಂದನೇ ಹೆಚ್ಚುವರಿ ಜಿಲ್ಲಾಮತ್ತು ಸತ್ರ ನ್ಯಾಯಾಧೀಶರು, ಹಿರಿಯ ಸಿವಿಲ್ ನ್ಯಾಯಾಧೀಶರು ವಿಶೇಷ ಭೂಸ್ವಾಧೀನ, ಕೆಐಎಡಿಬಿ ಅಧಿಕಾರಿಗಳ ಸಭೆ, 18ರಂದು ಮಧ್ಯಾಹ್ನ 3ಕ್ಕೆ ಲೀಡ್ ಬ್ಯಾಂಕ್ ಮ್ಯಾನೇಜರ್ , ಬೀದರ್ ತಾಲೂಕಿನ ಎಲ್ಲಬ್ಯಾಂಕ್ ವ್ಯವಸ್ಥಾಪಕರೊಂದಿಗೆ ಸಭೆ, 19ರಂದು ಮಧ್ಯಾಹ್ನ 2.30ಕ್ಕೆ ಎಲ್ಲನ್ಯಾಯಾಧೀಶರು, ಜಿಲ್ಲೆಯ ವಕೀಲರೊಂದಿಗೆ ಸಭೆ, 19ರಂದು ಸಂಜೆ 5.30ಕ್ಕೆ ಜಿಲ್ಲೆಯ ಎಲ್ಲತಾಲೂಕುಗಳ ನ್ಯಾಯಾಧೀಶರೊಂದಿಗೆ ಸಭೆ ನಡೆಸಿ ಲೋಕ ಅದಾಲತ್ ಗೆ ಸಂಬಂಧಿಸಿದಂತೆ ಹೆಚ್ಚಿನ ಪ್ರಚಾರಕೈಗೊಳ್ಳಲು ಪೂರ್ವ ತಯಾರಿ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಬೀರಲಿಂಗೇಶ್ವರ ಪಲ್ಲಕ್ಕಿ ಉತ್ಸವ
ಬಸವಕಲ್ಯಾಣ: ತಾಲೂಕಿನ ಗೌರ ಗ್ರಾಮದ ಹೊರವಲಯದಲ್ಲಿಬೀರಲಿಂಗೇಶ್ವರ ಮತ್ತು ಮಹಾಲಿಂಗೇಶ್ವರ ಪಲ್ಲಕ್ಕಿ ಉತ್ಸವ ಡೊಳ್ಳು ಕುಣಿತದೊಂದಿಗೆ ಭವ್ಯ ಮೆರೆವಣಿಗೆ ಮಂಗಳವಾರ ಜರುಗಿತು. ಬೀರಲಿಂಗೇಶ್ವರ ಮಠದಿಂದ ಗ್ರಾಮದ ಪ್ರಮುಖ ರಸ್ತೆಗಳ ಮೂಲಕ ಹೊರಟು ಮಹಾದೇವ ಮಂದಿರದವರೆಗೆ ಮೆರವಣಿಗೆ ನಡೆಸಿದರು. ನಂತರ ವಿಶೇಷ ಪೂಜೆ ಸಲ್ಲಿಸಿದರು. ಬೀರಪ್ಪ ಮುತ್ಯಾ ಮಾತನಾಡಿ, ಮುಂದಿನ ದಿನಮಾನಗಳಲ್ಲಿಮಳೆ ಮತ್ತು ಬೆಳೆ ಚೆನ್ನಾಗಿ ಆಗಲಿದೆ ಎಂದು ನೆರದ ಭಕ್ತರಿಗೆ ತಿಳಿಸಿದರು. ಪ್ರಮುಖರಾದ ನಾಗನಾಥ ಮೇತ್ರೆ ಶಿವಪುರ ಶಿವಾಜಿ ಮೇತ್ರೆ ಗೌರ, ಮಾಳಪ್ಪ ಬೇಲೂರೆ, ಚಂದ್ರಕಾಂತ ಮೇತ್ರೆ, ಕಾಲಶಟ್ಟಿ ಮೇತ್ರೆ, ಸಿದ್ರಾಮ ದ್ಯಾಗೈ, ಬೀರು ತಾಂಬಳವಾಡಿ, ಮಹೇಶ ಮೇತ್ರೆ, ಮಲ್ಲಪ್ಪ ಮಲಶಟ್ಟಿ, ಶೇಶರಾವ ಬೇಲೂರೆ, ಮಾಳಪ್ಪ ಬೇಲೂರೆ, ಈರಪ್ಪ ಬೇಲೂರೆ, ಬೀರು ಬೇಲೂರೆ, ರಾಜು ಮೇತ್ರೆ, ಶಿವಲಿಂಗ ಮೇತ್ರೆ, ಸಿದ್ಧಲಿಂಗ ಬೇಲೂರೆ, ಪ್ರಕಾಶ ಗಟಳೆ, ದತ್ತು ಮೇತ್ರೆ, ಭೀಮಶಟ್ಟೆಪ್ಪ ಪಾಲ್ಗೊಂಡಿದ್ದರು.