ಕಡಂಗದಲ್ಲಿಸಿಎನ್ ಸಿ ಮಾನವ ಸರಪಳಿ

Contributed by: nasirmnkodagu@gmail.com|Vijaya Karnataka•
a campaign to provide constitutional relief for kodavas


ಕಡಂಗದಲ್ಲಿಸಿಎನ್ ಸಿ ಮಾನವ ಸರಪಳಿ
*ಕೊಡವರಿಗೆ ಸಂವಿಧಾನಾತ್ಮಕ ಪರಿಹಾರ ನೀಡಿ: ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ನಾಚಪ್ಪ

ವಿಕ ಸುದ್ದಿಲೋಕ ಮಡಿಕೇರಿ:

ಕೊಡವರ ವಿಶಿಷ್ಟ ಜನಾಂಗೀಯ ಗುರುತು, ಪಾರಂಪರಿಕ ಮಾತೃಭೂಮಿ, ಭಾಷೆ, ಸಂಸ್ಕೃತಿ, ಭೂಮಿ ಹಾಗೂ ರಾಜಕೀಯ ಹಕ್ಕುಗಳ ರಕ್ಷಣೆಗಾಗಿ ಸಂವಿಧಾನಾತ್ಮಕ ಪರಿಹಾರ ಒದಗಿಸಬೇಕು ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್ .ಯು. ನಾಚಪ್ಪ ಆಗ್ರಹಿಸಿದರು.

ಕಡಂಗದಲ್ಲಿಬುಧವಾರ ನಡೆದ 9ನೇ ಕೊಡವ ಜನಜಾಗೃತಿ ಸಾರ್ವಜನಿಕ ಸಂಪರ್ಕ ಮಾನವ ಸರಪಳಿ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ‘‘ಕೊಡವರ ಸಮಸ್ಯೆಗಳನ್ನು ಸ್ಥೂಲ ಮಟ್ಟದ ವಿಶ್ಲೇಷಣೆಯ ಬದಲಾಗಿ ಸೂಕ್ಷ್ಮ ಮಟ್ಟದ ವಿಶ್ಲೇಷಣೆಯ ಮೂಲಕ ಪರಿಗಣಿಸಬೇಕು. ಅಲ್ಪಸಂಖ್ಯಾತ, ಸೂಕ್ಷ್ಮ ಹಾಗೂ ಆದಿಮಸಂಜಾತ ಕೊಡವರ ವಿಶಿಷ್ಟ ಜನಾಂಗೀಯ ಹಿನ್ನೆಲೆ, ಇತಿಹಾಸ ಮತ್ತು ಸಂಕಷ್ಟಗಳನ್ನು ಪ್ರತ್ಯೇಕವಾಗಿ ಗುರುತಿಸಿದಾಗ ಮಾತ್ರ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ನ್ಯಾಯಯುತ ಪರಿಹಾರ ದೊರೆಯಲು ಸಾಧ್ಯ’’ ಎಂದರು.

‘‘1956ರಲ್ಲಿಕೊಡಗು ಸಿ-ವರ್ಗದ ರಾಜ್ಯದ ಸ್ಥಾನಮಾನ ಕಳೆದುಕೊಂಡು ಕರ್ನಾಟಕದಲ್ಲಿವಿಲೀನಗೊಂಡಿದ್ದು, 1941ರ ನಂತರ ಜನಗಣತಿಯಲ್ಲಿಕೊಡವರ ಪ್ರತ್ಯೇಕ ಜನಾಂಗೀಯ ಗುರುತು ಕಳೆದುಹೋಗಿದೆ. ಇದರಿಂದ ಕೊಡವರು ಜನಗಣತಿ ಗುರುತು, ಪಾರಂಪರಿಕ ಮಾತೃಭೂಮಿ ಮತ್ತು ವಂಶಪಾರಂಪರಿಕ ಆಸ್ತಿಗಳ ನಷ್ಟ ಸೇರಿದಂತೆ ತ್ರಿವಳಿ ಸಂಕಷ್ಟ ಎದುರಿಸುತ್ತಿದ್ದಾರೆ. ಕೊಡವರು ಜಾತಿ ಅಥವಾ ಧರ್ಮವಲ್ಲ, ಅವರಿಗೆ ಜಾತಿ, ಉಪಜಾತಿ ಹಾಗೂ ಒಳಪಂಗಡಗಳಿಲ್ಲ’’ ಎಂದು ಪ್ರತಿಪಾದಿಸಿದರು.

ಕೊಡವಲ್ಯಾಂಡ್ ಸ್ವಾಯತ್ತತೆಗೆ ಆಗ್ರಹ: ‘‘ಸಂವಿಧಾನದ 244, 371ನೇ ವಿಧಿಗಳು ಹಾಗೂ ಐದನೇ ಮತ್ತು ಆರನೇ ಅನುಸೂಚಿಗಳ ಆಶಯದಡಿ ಕೊಡವಲ್ಯಾಂಡ್ ಗೆ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಮತ್ತು ಸ್ವಯಂ ಆಡಳಿತದ ವ್ಯವಸ್ಥೆ ಕಲ್ಪಿಸಬೇಕು. ಡಾರ್ಜಿಲಿಂಗ್ ಗೋರ್ಖಾಲ್ಯಾಂಡ್ , ಲಡಾಖ್ ಹಾಗೂ ಈಶಾನ್ಯ ಭಾರತದ ಸ್ವಾಯತ್ತ ಮಂಡಳಿಗಳ ಮಾದರಿಯಲ್ಲಿಕೊಡವರ ಪಾರಂಪರಿಕ ಮಾತೃಭೂಮಿಗೆ ವಿಶೇಷ ರಕ್ಷಣೆ ನೀಡಬೇಕು’’ ಎಂದು ಒತ್ತಾಯಿಸಿದರು.

‘‘ಸಂವಿಧಾನದ 29 ಮತ್ತು 30ನೇ ವಿಧಿಗಳಡಿ ಕೊಡವ ಭಾಷೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಸಂರಕ್ಷಿಸಬೇಕು. ಕೊಡವ ತಕ್ ್ಕ ಭಾಷೆಯನ್ನು 8ನೇ ಅನುಸೂಚಿಗೆ ಸೇರಿಸಬೇಕು. ಕೊಡವರ ಸಾಂಪ್ರದಾಯಿಕ ಬಂದೂಕು ಸಂಸ್ಕಾರಕ್ಕೆ 25 ಮತ್ತು 26ನೇ ವಿಧಿಗಳಡಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ರಕ್ಷಣೆ ನೀಡಬೇಕು’’ ಎಂದು ಆಗ್ರಹಿಸಿದರು.

ಪ್ರತ್ಯೇಕ ಗುರುತಿಸುವಿಕೆಗೆ ಒತ್ತಾಯ: ‘‘2027ರ ರಾಷ್ಟಿ್ರೕಯ ಜನಗಣತಿ ಹಾಗೂ ಜಾತಿ ಗಣತಿಯಲ್ಲಿಕೊಡವರನ್ನು ವಿಶಿಷ್ಟ ಜನಾಂಗೀಯ ಸಮುದಾಯವಾಗಿ ಪ್ರತ್ಯೇಕವಾಗಿ ದಾಖಲಿಸಬೇಕು. ಕೊಡವರ ಆಧ್ಯಾತ್ಮಿಕ ನೆಲೆಗಳಾದ ಮಂದ್ , ದೇವಬನ, ಪವಿತ್ರ ತೀರ್ಥಕ್ಷೇತ್ರ ತಲಕಾವೇರಿ ಹಾಗೂ ಕೊಡವ ಸಾಂಸ್ಕೃತಿಕ ತಾಣಗಳಿಗೆ ವಿಶೇಷ ಮಾನ್ಯತೆ ನೀಡಬೇಕು’’ ಎಂದರು.

‘‘ಕೊಡವ ಪ್ರದೇಶದಲ್ಲಿಭೂ ಪರಿವರ್ತನೆ, ಬೃಹತ್ ರೆಸಾರ್ಟ್ ಗಳು, ಟೌನ್ ಶಿಪ್ ಗಳು ಹಾಗೂ ಲೇಔಟ್ ಗಳ ನಿರ್ಮಾಣದಿಂದ ಪರಿಸರ, ಕೃಷಿಭೂಮಿ, ಕಾಫಿ ತೋಟಗಳು ಮತ್ತು ಕಾವೇರಿ ನದಿಯ ಜಲಮೂಲಗಳಿಗೆ ಹಾನಿಯಾಗುತ್ತಿದೆ’’ ಎಂದು ಆತಂಕ ವ್ಯಕ್ತಪಡಿಸಿದ ಅವರು, ‘‘ಕೊಡಗಿನ ನೈಸರ್ಗಿಕ ಸಂಪನ್ಮೂಲಗಳು ಮತ್ತು ಜೀವವೈವಿಧ್ಯತೆಯನ್ನು ರಕ್ಷಿಸಲು ವಾಣಿಜ್ಯ ಉದ್ದೇಶದ ಭೂ ಪರಿವರ್ತನೆ ನಿಯಂತ್ರಿಸಬೇಕು’’ ಎಂದು ಒತ್ತಾಯಿಸಿದರು.

ದೇವಟ್ ಪರಂಬು ಕೊಡವ ನರಮೇಧದ ಸ್ಥಳದಲ್ಲಿಅಂತಾರಾಷ್ಟಿ್ರೕಯ ಸ್ಮಾರಕ ನಿರ್ಮಾಣ, ಕಾವೇರಿ ನದಿಯ ನೀರಿನ ಹಕ್ಕುಗಳ ರಕ್ಷಣೆ, ಕೊಡವ ಪ್ರದೇಶಕ್ಕೆ ಇನ್ನರ್ ಲೈನ್ ಪರ್ಮಿಟ್ ಮಾದರಿಯ ರಕ್ಷಣೆ ಹಾಗೂ ಪಾರಂಪರಿಕ ಭೂಮಿಯ ಹಕ್ಕುಗಳ ಮರುಸ್ಥಾಪನೆ ಸೇರಿದಂತೆ ಹತ್ತು ಪ್ರಮುಖ ಸಂವಿಧಾನಿಕ ಹಕ್ಕೊತ್ತಾಯಗಳನ್ನು ಮಂಡಿಸಿದರು.

ಕುಲ್ಲಚಂಡ ಸರೋಜ, ಚೆರಿಯಂಡ ಪೂಜಾ, ಕೋಡಿರ ವಿನೋದ್ ನಾಣಯ್ಯ, ಬೇಪಡಿಯಂಡ ದಿನು, ಪಟ್ರಪಂಡ ರಮೇಶ್ ಬೋಪಯ್ಯ, ಬೇಪಡಿಯಂಡ ಬಿದ್ದಪ್ಪ, ಬಲ್ಲಚಂಡ ಸುನಿಲ್ ಬಿದ್ದಪ್ಪ, ಬಲ್ಲಟಿಕಾಳಂಡ ರಾಯ್ ಮಂದಣ್ಣ್ಚ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಫೋಟೊ: ಎಂಡಿಕೆ11ಎನ್ - ಸಿಎನ್ ಸಿ

ಕ್ಯಾಪ್ಷನ್ : ಕಡಂಗದಲ್ಲಿಸಿಎನ್ ಸಿ ವತಿಯಿಂದ ಮಾನವ ಸರಪಳಿ ನಿರ್ಮಿಸಿ ಹಕ್ಕೊತ್ತಾಯಗಳನ್ನು ಮಂಡಿಸಲಾಯಿತು.