ಟ್ಯಾಂಕರ್ ನಲ್ಲಿಕುಡಿವ ನೀರು ಸರಬರಾಜು

Contributed by: giridigitalartsbirur@gmail.com|Vijaya Karnataka•
agricultural and water supply assessment in choulahiryur
ಟ್ಯಾಂಕರ್ ನಲ್ಲಿಕುಡಿವ ನೀರು ಸರಬರಾಜು

ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಮಾಹಿತಿ
ವಿಕ ಸುದ್ದಿಲೋಕ ಕಡೂರು

ತಾಲೂಕಿನ ಚೌಳಹಿರಿಯೂರು ಭಾಗದ ರೈತರಿಗೆ ನೀರಿನ ಲಭ್ಯತೆ, ಬೆಳೆಗಳ ಸ್ಥಿತಿಗತಿ ಮತ್ತು ಈಗಾಗಲೇ ರೈತರಿಗೆ ವಿತರಣೆ ಮಾಡಿರುವ ಮೇವಿನ ಕಿಟ್ ಗಳನ್ನು ಬುಧವಾರ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ, ಜಿಲ್ಲಾಪಂಚಾಯಿತಿ ಸಿಇಒ ಮೀನಾಕ್ಷಿ ಆರ್ಯ, ನಿಡುವಳ್ಳಿ ಗ್ರಾಮದಲ್ಲಿವಿಬಿ ಜಿ ರಾಮ್ ಜಿ ಯೋಜನೆಯಡಿ ಕೈಗೊಂಡಿರುವ ಕೆರೆ ನಿರ್ಮಾಣ ಕಾಮಗಾರಿಗಳನ್ನು ವೀಕ್ಷಿಸಿದರು.

ನಂತರ ಪಂಚನಹಳ್ಳಿ ಎಪಿಎಂಸಿ ಯಾರ್ಡ್ ನಲ್ಲಿಮೇವು ಬ್ಯಾಂಕ್ , ಕುಡಿಯುವ ನೀರು , ಜಾನುವಾರುಗಳಿಗೆ ಮೇವು, ಕೃಷಿ ಚಟುವಟಿಕೆ ಹಾಗೂ ಮೂಲಸೌಕರ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಅಧಿಕಾರಿಗಳ ತಂಡದೊಂದಿಗೆ ಪರಿಶೀಲಿಸಿ ಅವರು, ಮುಂದಿನ ದಿನಗಳಲ್ಲಿಮೇವಿನ ಅಭಾವ ಉಂಟಾದರೆ ಈ ವ್ಯವಸ್ಥೆಯ ಮೂಲಕ ಜಾನುವಾರುಗಳಿಗೆ ಮೇವು ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಸಖರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಾನ್ ಸಾಲೆ ಎಸ್ಟೇಟ್ ಮತ್ತು ಹೊಸೂರು ಗ್ರಾಮದಲ್ಲಿಹಾಲಿ ಇರುವ 3 ಬೋರ್ ವೆಲ್ ಗಳಲ್ಲಿನೀರಿನ ಮಟ್ಟ ಕಡಿಮೆಯಾಗಿದ್ದು, ಪ್ರಸ್ತುತ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಗ್ರಾಮಸ್ಥರಿಗೆ ಅಗತ್ಯವಿರುವಷ್ಟು ಕುಡಿಯುವ ನೀರನ್ನು ಟ್ಯಾಂಕರ್ ಮೂಲಕವೇ ಸರಬರಾಜು ಮಾಡುವಂತೆ ಪಿಡಿಒಗೆ ಸೂಚಿಸಲಾಗಿದೆ. ಅಲ್ಲದೆ, ಇಲ್ಲಿನ ಗ್ರಾಮಕ್ಕೆ ಹೊಸದಾಗಿ ಅಂಗನವಾಡಿ ಕೇಂದ್ರದ ಅವಶ್ಯಕತೆಯಿದ್ದು, ಮಂಜೂರಾತಿಗಾಗಿ ಸೂಕ್ತ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.

ಬಳಿಕ ಚೌಳಹಿರಿಯೂರು ಕೆಪಿಎಸ್ ನಲ್ಲಿಜಿಲ್ಲಾಧಿಕಾರಿ ಮತ್ತು ಜಿಪಂ ಸಿಇಒ ಅವರು ಮಧ್ಯಾಹ್ನದ ಬಿಸಿಯೂಟದ ಗುಣಮಟ್ಟವನ್ನು ಪರಿಶೀಲಿಸಿ ಮಕ್ಕಳೊಂದಿಗೆ ಊಟ ಸವಿದರು. ತಾಲೂಕು ಪಂಚಾಯಿತಿ ಇಒ ಸಿ.ಆರ್ .ಪ್ರವೀಣ್ , ಸಹಾಯಕ ನಿರ್ದೇಶಕ ಕಲ್ಲಪ್ಪ, ಪಶು ಸಹಾಯಕ ನಿರ್ದೇಶಕ ಡಾ. ಉಮೇಶ್ , ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎಇಇ ಕೆ.ಪ್ರಕಾಶ್ , ಕೃಷಿ ಸಹಾಯಕ ನಿರ್ದೇಶಕ ಲೋಕೇಶ್ , ಎಂಜಿನಿಯರ್ ಹರಿರಾಮ್ ಹಾಗೂ ಇತರರಿದ್ದರು.

11ಕೆಡಿಆರ್ 6

ಕಡೂರು ತಾಲೂಕಿನ ಚೌಳಹಿರಿಯೂರು ಕೆಪಿಎಸ್ ನಲ್ಲಿಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ, ಜಿ.ಪಂ. ಸಿಇಒ ಮೀನಾಕ್ಷಿ ಆರ್ಯ, ತಾ.ಪಂ. ಇಒ ಸಿ.ಆರ್ .ಪ್ರವೀಣ್ , ಮಧ್ಯಾಹ್ನದ ಬಿಸಿಯೂಟದ ಗುಣಮಟ್ಟವನ್ನು ಪರಿಶೀಲಿಸಿ ಮಕ್ಕಳೊಂದಿಗೆ ಊಟ ಸವಿದರು.