ಬೆಳಗಾವಿ: ಕರಕುಶಲ ಉತ್ಪನ್ನಗಳ ರಫ್ತು ಉತ್ತೇಜನ ಮಂಡಳಿಯ ದಕ್ಷಿಣ ಪ್ರಾದೇಶಿಕ ಕಚೇರಿ ಹಾಗೂ ಇಂಡಿಯಾ ಪೋಸ್ಟ್ ಸಹಯೋಗದೊಂದಿಗೆ ‘ಸಾಂಪ್ರದಾಯಿಕ ಭಾರತೀಯ ಕರಕುಶಲ ಉತ್ಪನ್ನಗಳಿಗಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆ ಅನ್ವೇಷಣೆ ಮತ್ತು ಇಂಡಿಯಾ ಪೋಸ್ಟ್ ಮೂಲಕ ರಫ್ತು’ ಜಾಗೃತಿ ಕಾರ್ಯಕ್ರಮವನ್ನು ನ. 13ರಂದು ಬೆಳಗಾವಿಯ ಉದ್ಯಮಬಾಗದ ಜಿಲ್ಲಾವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಸಭಾಂಗಣದಲ್ಲಿಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿಕರಕುಶಲ ಕಾರ್ಮಿಕರು, ಉತ್ಪಾದಕರು, ಉದ್ಯಮಿಗಳು ಹಾಗೂ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಅಂತಾರಾಷ್ಟಿ್ರೕಯ ಮಾರುಕಟ್ಟೆಯಲ್ಲಿಲಭ್ಯವಿರುವ ಅವಕಾಶಗಳು ಹಾಗೂ ಸಾಂಪ್ರದಾಯಿಕ ಭಾರತೀಯ ಕರಕುಶಲ ಉತ್ಪನ್ನಗಳ ರಫ್ತಿಗೆ ಇರುವ ನಾನಾ ಮಾರ್ಗಗಳ ಕುರಿತು ಅರಿವು ಮೂಡಿಸಲಾಗುವುದು.