* ಎರಡೆರಡು ಬಾರಿ ಅಧಿಸೂಚನೆ ಪ್ರಕಟಿಸಿದರೂ ಮುಗಿಯದ ಪ್ರಕ್ರಿಯೆ
* ಪ್ರವೇಶಾತಿ ಮುಗಿದರೂ ಆರಂಭವಾಗದ ಸಂಶೋಧನಾ ಕೋರ್ಸ್ ಗಳು* ಉದ್ಯೋಗ ಬಿಟ್ಟು ಪಿಎಚ್ ಡಿ ಕೋರ್ಸ್ ಆರಂಭಕ್ಕೆ ಕಾದುಕುಳಿತ ಅಭ್ಯರ್ಥಿಗಳು
ಶಾಂತಮೂರ್ತಿ ಬೆಂಗಳೂರು
ಘ್ಕಿsha್ಞಠಿha.aಃಠಿಜಿಞಛಿsಟ್ಛಜ್ಞಿdಜಿa.್ಚಟಞ
ಬೆಂಗಳೂರು ವಿಶ್ವವಿದ್ಯಾಲಯದ ಪಿಎಚ್ ಡಿ ಕೋರ್ಸ್ ಗಳಿಗೆ ಗ್ರಹಣ ಹಿಡಿದಿರುವುದು ಸಂಶೋಧನಾ ವಿದ್ಯಾರ್ಥಿಗಳ ತಾಳ್ಮೆಯ ಕಟ್ಟೆ ಒಡೆಯುವಂತೆ ಮಾಡಿದೆ. ಎರಡೆರಡು ಬಾರಿ ಅಧಿಸೂಚನೆ ಹೊರಡಿಸಿ, ಪ್ರವೇಶಾತಿ ಮುಗಿದರೂ ಸಂಶೋಧನಾ ಕೋರ್ಸ್ ಗಳ ಪ್ರಕ್ರಿಯೆ ವಿಳಂಬವಾಗುತ್ತಿರುವುದು ಸಂಶೋಧನಾ ಆಸಕ್ತರ ಅಸಮಾಧಾನಕ್ಕೆ ಕಾರಣವಾಗಿದೆ.
2023ರಲ್ಲಿಪಿಎಚ್ ಡಿ ಪ್ರವೇಶಕ್ಕೆ ಅಧಿಸೂಚನೆ ಹೊರಡಿಸಿದ್ದ ಬೆಂಗಳೂರು ವಿಶ್ವವಿದ್ಯಾಲಯ , ಸುಮಾರು ಮೂರು ವರ್ಷಗಳ ಬಳಿಕ 2026ರ ಫೆಬ್ರವರಿಯಲ್ಲಿಮತ್ತೊಮ್ಮೆ ಪ್ರವೇಶ ಅಧಿಸೂಚನೆ ಪ್ರಕಟಿಸಿತ್ತು. ಇದಾದ ಬಳಿಕ ನವೆಂಬರ್ ತಿಂಗಳು ಆರಂಭವಾದರೂ ಕೋರ್ಸ್ ಗಳು ಆರಂಭವಾಗಿಲ್ಲಎಂಬ ಆರೋಪ ಸಂಶೋಧನಾ ಅಭ್ಯರ್ಥಿಗಳಿಂದ ಕೇಳಿ ಬಂದಿದೆ.
‘‘36 ವಿಷಯಗಳ 384 ಸೀಟುಗಳಿಗೆ ಪರೀಕ್ಷೆ ನಡೆಸಿ ಪ್ರಕ್ರಿಯೆ ಆರಂಭಿಸಿದ್ದ ವಿವಿ, ಇದುವರೆಗೆ ಕೋರ್ಸ್ ಆರಂಭದ ಬಗ್ಗೆ ಸ್ಪಷ್ಟನೆ ನೀಡುತ್ತಿಲ್ಲ. ಇದರಿಂದಾಗಿ ಕಳೆದ 9-10 ತಿಂಗಳಿಂದ ಕಾದು ಕುಳಿತುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ,’’ ಎಂದು ಸಂಶೋಧನಾಸಕ್ತರು ಅಸಮಾಧಾನ ಹೊರಹಾಕಿದ್ದಾರೆ.
ಕೇಂದ್ರ ವಿಶ್ವವಿದ್ಯಾಲಯಗಳಲ್ಲಿವರ್ಷಕ್ಕೆ ಎರಡು ಬಾರಿ ಪಿಎಚ್ ಡಿ ಅವಕಾಶ ನೀಡಲಾಗುತ್ತಿದ್ದು, ಧಾರವಾಡ ವಿವಿಯಲ್ಲಿಪ್ರತಿ ವರ್ಷ ಪ್ರಕ್ರಿಯೆ ನಡೆಸಲಾಗುತ್ತಿದೆ. ಆದರೆ, ಬೆಂಗಳೂರು ವಿವಿಯಲ್ಲಿಮೂರು ವರ್ಷಕ್ಕೊಮ್ಮೆ ಅಧಿಸೂಚನೆ ಪ್ರಕಟಿಸಿದರೂ, ಕೋರ್ಸ್ ಆರಂಭ ಪ್ರಕ್ರಿಯೆ ವಿಳಂಬವಾಗುತ್ತಿರುವುದು ಅಭ್ಯರ್ಥಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಪ್ರತಿ ಬಾರಿ ಪಿಎಚ್ ಡಿ ಪ್ರವೇಶಾತಿ ಪ್ರಕ್ರಿಯೆ ವಿಳಂಬವಾಗುತ್ತಿರುವುದರಿಂದ ಸಂಶೋಧನಾಕಾಂಕ್ಷಿಗಳು ಕೋರ್ಸ್ ಆರಂಭ ಯಾವಾಗ ಎಂದು ಕಾದು ಕುಳಿತುಕೊಳ್ಳಬೇಕಾಗಿದೆ. ಕೋರ್ಸ್ ಅವಧಿಯಲ್ಲಿ6 ತಿಂಗಳವರೆಗೆ ಬೇರೆ ಯಾವುದೇ ಉದ್ಯೋಗ ಮಾಡಲು ಅವಕಾಶ ಇಲ್ಲದಿರುವುದರಿಂದ, ಇರುವ ಉದ್ಯೋಗವನ್ನೂ ಬಿಟ್ಟು ಕೋರ್ಸ್ ಗಾಗಿ ಕಾಯುವ ಪರಿಸ್ಥಿತಿ ಎದುರಾಗುತ್ತಿರುವುದು ಅಭ್ಯರ್ಥಿಗಳನ್ನು ಕಂಗೆಡಿಸಿದೆ. ಅಂದುಕೊಂಡಂತೆ ಎಲ್ಲಾಪ್ರಕ್ರಿಯೆ ಮುಗಿದಿದ್ದರೆ ಆರು ತಿಂಗಳ ಹಿಂದೆಯೇ ಸಂಶೋಧನಾ ಕೋರ್ಸ್ ಗಳು ಆರಂಭವಾಗಬೇಕಿತ್ತು. ಇದೀಗ, ಪ್ರವೇಶಾತಿ ಮುಗಿದು, ಶುಲ್ಕ ಪಾವತಿಯಾದರೂ ಕೋರ್ಸ್ ಶುರುವಾಗದಿರುವುದು ಅಭ್ಯರ್ಥಿಗಳು ಚಾತಕಪಕ್ಷಿಗಳಂತೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ.
ವಿಳಂಬಕ್ಕೆ ಕಾರಣವೇನು?
ಎಸ್ ಐಆರ್ ಪ್ರಕ್ರಿಯೆ, ಅಧಿಕಾರಿಗಳ ಕೊರತೆ, ಕಾಯಂ ಉಪನ್ಯಾಸಕರ ಅಭಾವದ ಜತೆಗೆ, ಕುಲಪತಿಗಳ ಬದಲಾವಣೆ ಸೇರಿದಂತೆ ಹಲವು ಬದಲಾವಣೆಗಳಿಂದ ಎರಡು ಬಾರಿ ಅಧಿಸೂಚನೆ ರದ್ದಾಗಿತ್ತು. ಬಳಿಕ, ಕುಲಪತಿ ಸ್ಥಾನಕ್ಕೆ ಹೊಸದಾಗಿ ನೇಮಕವಾದ ಪ್ರೊ.ಶಿವರಾಜ್ , ಆರು ತಿಂಗಳಿಂದ ನನೆಗುದಿಗೆ ಬಿದ್ದಿದ್ದ ಪಿಎಚ್ ಡಿ ಪ್ರವೇಶಾತಿ ಪ್ರಕ್ರಿಯೆಗೆ ಮರುಜೀವ ನೀಡಿದ್ದರು. ಸಂದರ್ಶನ, ಪ್ರವೇಶಾತಿ ಪ್ರಕ್ರಿಯೆ ನಡೆಸುವ ಮೂಲಕ ಪ್ರಕ್ರಿಯೆಗೆ ವೇಗ ನೀಡಲಾಗಿತ್ತು. ಆದರೆ, ಇದೀಗ ಕೋರ್ಸ್ ಆರಂಭ ಪ್ರಕ್ರಿಯೆ ಆಮೆಗತಿಯಲ್ಲಿಸಾಗಿದೆ.
ಕೋಟ್ ...
ಪ್ರವೇಶ ಅಧಿಸೂಚನೆ ಹೊರಡಿಸಿ, ಶುಲ್ಕ ಸ್ವೀಕರಿಸಿದ ಬಳಿಕವೂ ಮುಂದಿನ ಪ್ರಕ್ರಿಯೆಯನ್ನು ಅನಿರ್ದಿಷ್ಟವಾಗಿ ಮುಂದೂಡುವುದು ಸಮಂಜಸವಲ್ಲ. ವಿಶ್ವವಿದ್ಯಾಲಯ ಅರ್ಜಿಯ ಸ್ಥಿತಿಗತಿ ಮತ್ತು ಮುಂದಿನ ಹಂತಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡಬೇಕು. ಶೀಘ್ರವಾಗಿ ಸಂಶೋಧನಾ ಕೋರ್ಸ್ ಆರಂಭಿಸಬೇಕು.
-ಮಂಜುಳಾ, ಸಂಶೋಧನಾ ಆಕಾಂಕ್ಷಿ
ಕೋಟ್ ....
ಪಿಎಚ್ ಡಿ ಪ್ರವೇಶಾತಿ ಸೇರಿದಂತೆ ಎಲ್ಲಾಪ್ರಕ್ರಿಯೆಗಳನ್ನು ನಿಯಮಗಳ ಪ್ರಕಾರ ನಡೆಸಲಾಗಿದೆ. ಶೀಘ್ರದಲ್ಲೇ ಕೋರ್ಸ್ ಆರಂಭಿಸಲು ವಿಶ್ವವಿದ್ಯಾಲಯ ತಯಾರಿ ನಡೆಸುತ್ತಿದೆ.