ಅಧಿಕಾರಿ, ಮುಖ್ಯಗುರುಗಳಿಗೆ ಅಗ್ನಿಪರೀಕ್ಷೆ ? | ಸ್ಥಾನ ಉಳಿಸಿಕೊಳ್ಳಲು ಹರಸಾಹಸಪಿ.ವೀರಣ್ಣ ಹೂವಿನಹಡಗಲಿ
ಡಿಸೆಂಬರ್ ಬಂದರೆ ಸಾಕು ಪ್ರೌಢಶಾಲೆಗಳ ಮುಖ್ಯಶಿಕ್ಷಕರು, ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಗಳ ಕನವರಿಕೆ ಶುರುವಾಗುತ್ತದೆ. ಪಠ್ಯಕ್ರಮ ಪೂರ್ಣಗೊಳಿಸುವುದು ಮತ್ತು ಪುನರಾರ್ತನೆ ಮಾಡುವುದು, ಪರೀಕ್ಷೆ ಸಿದ್ಧತೆಗೆ ಮಕ್ಕಳನ್ನು ಅಣಿಗೊಳಿಸುವ ತರಾತುರಿ ನಡೆಯುತ್ತದೆ.
ಎಸ್ಸೆಸ್ಸೆಲ್ಸಿ ಪರೀಕ್ಷೆ ಕೇವಲ ಮಕ್ಕಳಿಗಷ್ಟೇ ಸೀಮಿತವಾಗಿರುವುದಿಲ್ಲ. ವಿಷಯ ಶಿಕ್ಷಕರು, ಮುಖ್ಯಗುರು, ಬಿಇಒ ಹಾಗೂ ಸಂಬಂಧಿಸಿದ ಮೇಲಧಿಕಾರಿಗಳಿಗೂ ಅಗ್ನಿ ಪರೀಕ್ಷೆಯಾಗಿರುತ್ತದೆ. ಒಂದು ಕಡೆ ಸರಕಾರದ ಚಿತ್ತ ಫಲಿತಾಂಶದ ಮೇಲೆಯೇ ಹರಿಯುತ್ತದೆ. ಕೆಲ ವರ್ಷಗಳ ಹಿಂದೆ ಫಲಿತಾಂಶ ಕುಸಿದ ಪರಿಣಾಮ ವಿಜಯನಗರ ಜಿಲ್ಲೆಯ ಉಪನಿರ್ದೇಶಕರೇ ಸಿಎಂ ಕೋಪಕ್ಕೆ ಬಲಿಯಾದ ಉದಾಹರಣೆಯಿದೆ. ಇದರ ಮಾರನೇ ವರ್ಷವೇ ಕಲ್ಯಾಣ ಕರ್ನಾಟಕ ಭಾಗದಲ್ಲಿವಿಜಯನಗರ ಜಿಲ್ಲೆಅದರಲ್ಲೂಹೂವಿನಹಡಗಲಿ ತಾಲೂಕು ಕಳೆದೆರಡು ಸಾಲಿನಲ್ಲಿಉತ್ತಮ ಫಲಿತಾಂಶ ನೀಡಿ ಶಹಬ್ಬಾಷ್ ಗಿರಿ ಪಡೆದಿದ್ದು, ಈ ಬಾರಿ ಅದಕ್ಕಿಂತ ಉತ್ತಮ ಪಡಿಸಿಕೊಳ್ಳುವುದು ಅಧಿಕಾರಿಗಳು, ಮುಖ್ಯಗುರುಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಆದೇಶ ರವಾನೆ:
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಈಗಾಗಲೇ 2026-27ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ 1 ಹಾಗೂ 2 ರ ಅಂತಿಮ ವೇಳಾ ಪಟ್ಟಿ ಪ್ರಕಟಿಸಿದೆ. ಮೊದಲ ಪರೀಕ್ಷೆ ಮಾ.22ರಿಂದ ಏ.5ರ ವರೆಗೆ ನಡೆಯುತ್ತದೆ. ಶಾಲಾ ಶಿಕ್ಷಣ ಇಲಾಖೆ ಈಗಾಗಲೇ ಎಚ್ಚೆತ್ತುಕೊಂಡಿದ್ದು, ಜಿಲ್ಲೆಯ ಎಲ್ಲತಾಲೂಕುಗಳ ಸರಕಾರಿ, ಅನುದಾನಿತ, ಅನುದಾನ ರಹಿತ, ಮೊರಾರ್ಜಿ ದೇಸಾಯಿ ವಸತಿ ಪ್ರೌಢಶಾಲೆಗಳಲ್ಲಿಬೆಳಗಿನ ವಿಶೇಷ ತರಗತಿ ಜತೆಗೆ ಸಂಜೆ ಗುಂಪು ಅಧ್ಯಯನ ನಡೆಸಬೇಕೆಂದು ಇಲಾಖೆ ಉಪನಿರ್ದೇಶಕರ ಕಚೇರಿಯಿಂದ ಆದೇಶ ರವಾನೆಯಾಗಿದೆ.
ಜಾಗೃತಿ ಮೂಡಿಸಲು ಸೂಚನೆ:
ಪರೀಕ್ಷೆಗೆ ಮಕ್ಕಳನ್ನು ಅಣಿಗೊಳಿಸಲು ಡಿಸೆಂಬರ್ ಕೊನೆಗೆ ಎಲ್ಲಪಠ್ಯಕ್ರಮ ಪೂರ್ಣಗೊಳಿಸಬೇಕು. ಕಲಿಕೆಯಲ್ಲಿಹಿಂದುಳಿದ ವಿದ್ಯಾರ್ಥಿಗಳ ಕಡೆ ವಿಶೇಷ ಗಮನಹರಿಸಬೇಕು. ವಿದ್ಯಾರ್ಥಿಗಳ ಕಲಿಕಾ ಕೊರತೆ ನೀಗಿಸುವ ಮೂಲಕ ಅವರ ಪರೀಕ್ಷಾ ಸಾಮಾರ್ಥ್ಯ ಹೆಚ್ಚಿಸಬೇಕು. ಸತತ ಗೈರಾಗುತ್ತಿರುವ ಮಕ್ಕಳ ಮನೆಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸುವಂತೆ ಸೂಚಿಸಲಾಗಿದೆ.
ಸರಣಿ ಪರೀಕ್ಷೆಗಳು:
ಜಿಲ್ಲಾದ್ಯಂತ ಜನವರಿಯಲ್ಲಿಮೂರು ಸರಣಿ ಪರೀಕ್ಷೆ ನಡೆಸುವುದಲ್ಲದೇ, ಜಿಪಂ ಸಿಇಒ ಮೌಖಿಕ ಆದೇಶದಂತೆ ನವೆಂಬರ್ ಹಾಗೂ ಡಿಸೆಂಬರ್ ನಲ್ಲಿಪ್ರತಿ 15 ದಿನಗಳಿಗೊಮ್ಮೆ ಎಲ್ಲವಿಷಯಗಳಿಗೂ 20 ಅಂಕಗಳ ಪರೀಕ್ಷೆಗಳನ್ನು ನಡೆಸುವಂತೆ ಸಂಬಂಧಿಸಿದ ಮುಖ್ಯಗುರುಗಳಿಗೆ ತಿಳಿಸಲಾಗಿದೆ.
ಬಾಕ್ಸ್ -
ನಿಗಾವಹಿಸುವುದೇ ಕಷ್ಟ
ವಿಷಯವಾರು ಫಲಿತಾಂಶ ಸುಧಾರಣೆ ಹಾಗೂ ಪರೀಕ್ಷೆ ಸಿದ್ಧತೆ ಮೇಲೆ ಅಗತ್ಯ ಕ್ರಮ ಕೈಗೊಳ್ಳುವುದು ಇಲಾಖೆ ಮೇಲಿನ ಜವಾಬ್ದಾರಿಯಾಗಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ನಿಗಾವಹಿಸುವುದು ವಿಷಯವಾರು ಶಿಕ್ಷಕರ ಮುಂದಿರುವ ಸವಾಲಾಗಿದೆ. ಇದಕ್ಕಾಗಿ ಸಂಬಂಧಿಸಿದ ಅಧಿಕಾರಿಗಳು ಈಗಾಗಲೇ ಮೇಲಿಂದ ಮೇಲೆ ತಾಲೂಕುವಾರು ಪ್ರಗತಿ ಪರಿಶೀಲನೆ ಸಭೆ, ಕಾರ್ಯಕ್ರಮ ಏರ್ಪಡಿಸಿ ಮುಖ್ಯಗುರುಗಳು, 10ನೇ ತರಗತಿ ವರ್ಗ ಶಿಕ್ಷಕರು, ಸಹ ಶಿಕ್ಷಕರಿಗೆ ನಾನಾ ತರಬೇತಿ ನೀಡುತ್ತಿದ್ದಾರೆ. ಇದು ಶಾಲೆಗಳ ಮುಖ್ಯಗುರು ಮತ್ತು 10ನೇ ವಿಷಯ ಶಿಕ್ಷಕರನ್ನು ನಿದ್ದೆಗೆಡಿಸಿದ್ದು, ಯುದ್ಧಕ್ಕೆ ಸಿದ್ಧರಾಗುವ ಸೈನಿಕರಂತೆ ಈಗಿಂದಲೇ ಮಕ್ಕಳನ್ನು ಅಣಿಗೊಳಿಸಲು ಸಜ್ಜಾಗಿದ್ದಾರೆ.
ಬಾಕ್ಸ್ -
ಫಲಿತಾಂಶ ಸುಧಾರಣೆಯ ಸವಾಲು
ಜಿಲ್ಲೆಯ ಹೂವಿನಹಡಗಲಿ ತಾಲೂಕು ಕಲ್ಯಾಣ ಕರ್ನಾಟಕ ಭಾಗದಲ್ಲಿ2025, 2026ನೇ ಸಾಲಿನಲ್ಲಿಸತತವಾಗಿ ಮೊದಲ ಸ್ಥಾನ ಪಡೆದಿದೆ. ಇದು ಅಧಿಕಾರಿಗಳ ಜವಾಬ್ದಾರಿ ಹೆಚ್ಚಿಸಿದೆ. ಹೀಗಾಗಿ, ಇಲ್ಲಿನ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಮುಖ್ಯಗುರುಗಳು, ವಿಷಯ ಶಿಕ್ಷಕರಿಗೆ ಪ್ರಸ್ತುತ ವರ್ಷವೂ ಕೂಡ ಫಲಿತಾಂಶವನ್ನು ಇನ್ನೂ ಉತ್ತಮಪಡಿಸಿಕೊಳ್ಳಬೇಕೆಂಬ ಸವಾಲು ಎದುರಾಗಿದೆ.
ಕೋಟ್ -
ವಿಷಯ ಶಿಕ್ಷಕರಿಗೆ ಕಾರ್ಯಾಗಾರ, ಬೆಳಗ್ಗೆ , ಸಂಜೆ ಗುಂಪು ಅಧ್ಯಯನ, ಕಲಿಕೆಯಲ್ಲಿಹಿಂದುಳಿದ ಮಕ್ಕಳಿಗೆ ಮಾದರಿ ಪ್ರಶ್ನೆ ಪತ್ರಿಕೆಗಳ ಮೂಲಕ ಅಭ್ಯಾಸ ಮಾಡಿಸುವುದು ಸೇರಿ ಅಗತ್ಯ ಕ್ರಮವಹಿಸಲಾಗಿದೆ. ಜತೆಗೆ ಮಂಡಳಿಯಿಂದ ರೂಪಿತವಾದ ಎಲ್ಲವಿಷಯಗಳ 4 ಮಾದರಿ ಪ್ರಶ್ನೆ ಪತ್ರಿಕೆ ಬಿಡಿಸಲು ಸೂಚಿಸಲಾಗಿದೆ. ಈ ಬಾರಿಯೂ ವಿಭಾಗ ಮಟ್ಟದಲ್ಲಿತಾಲೂಕು ಮೊದಲ ಸ್ಥಾನದಲ್ಲಿಬರಲು ಶಕ್ತಿ ಮೀರಿ ಪ್ರಯತ್ನಿಸಲಾಗುತ್ತಿದೆ.