ಪ್ರವೇಶ ದ್ವಾರದಲ್ಲೇ ನಿಂತ ರಾಜಹಂಸ

Contributed by: mahanteshsangam31@gmail.com|Vijaya Karnataka•
congestion at the entrance issues at rajahamsa bus station
ಕಿರಿದಾದ ಬಸ್ ನಿಲ್ದಾಣ | 10 ನಿಮಿಷ ಒಂದೇ ಕಡೆ ನಿಂತ್ ಬಸ್

ಪ್ರವೇಶ ದ್ವಾರದಲ್ಲೇ ನಿಂತ ರಾಜಹಂಸ
ವಿಕ ಸುದ್ದಿಲೋಕ ಬಸವನಬಾಗೇವಾಡಿ

ಕಿರಿದಾದ ಬಸ್ ನಿಲ್ದಾಣ ಹಿನ್ನೆಲೆಯಲ್ಲಿಬಸ್ ಗಳ ನಿಲುಗಡೆಗೆ ಸಾರಿಗೆ ಅಧಿಕಾರಿಗಳು ಪರ್ಯಾಯ ಕ್ರಮ ಕೈಗೊಂಡರೂ ಸಮಸ್ಯೆ ಬಗೆಹರಿಯುವಂತೆ ಕಾಣುತ್ತಿಲ್ಲ.

ಹೌದು, ಇಲ್ಲಿನ ಬಸ್ ನಿಲ್ದಾಣದ ಪ್ರವೇಶ ದ್ವಾರ ಬಳಿಯಿಂದ ವಿಜಯಪುರ ಮಾರ್ಗದೆಡೆಗೆ ಬಸ್ ಗಳನ್ನು ಓಡಿಸಲು ಸಾರಿಗೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದರು. ಆದರೆ, ಗುರುವಾರ ವಿಜಯಪುರ ಮಾರ್ಗದೆಡೆಗೆ ಚಲಿಸುವ ರಾಜಹಂಸ ಬಸ್ ಪ್ರಯಾಣಿಕರ ಜನದಟ್ಟಣೆ ಹಾಗೂ ಇಕ್ಕಟ್ಟಾದ ಬಸ್ ನಿಲುಗಡೆ ಸ್ಥಳದ ಪರಿಣಾಮ 10 ನಿಮಿಷ ಪ್ರವೇಶದ ಮುಖ್ಯ ರಸ್ತೆಯಲ್ಲಿನಿಂತು, ಹಿಂದೆ ಬರುವ ಬಸ್ ಗಳು ನಿಲ್ದಾಣ ಪ್ರವೇಶ ಮಾಡದಂತೆ ತಡೆಯೊಡ್ಡಿತು. ಈ ಕಾರಣದಿಂದ ಇನ್ನೊಂದು ಬಸ್ ನಿಲ್ದಾಣದೊಳಗೆ ಹೋಗದೇ ನೇರವಾಗಿ ವಿಜಯಪುರಕ್ಕೆ ತೆರಳಿತು. ಇಕ್ಕಟ್ಟಾದ ನಿಲ್ದಾಣದ ಪರಿಣಾಮ ಪ್ರಯಾಣಿಕರಿಗೆ ಆಗುತ್ತಿರುವ ಕಿರಿಕಿರಿ ಮಾತ್ರ ತಪ್ಪುತ್ತಿಲ್ಲ.

ಜಾಗ ವಿಸ್ತಾರಕ್ಕೆ ಆಗ್ರಹ:

ಬಸ್ ನಿಲ್ದಾಣದ ಮುಖ್ಯ ಪ್ರವೇಶ ದ್ವಾರದಲ್ಲಿಹಿಂದೆ ಮತ್ತು ಮುಂದೆ ಉದ್ಯಾನ ಇರುವುದರಿಂದ ಬಸ್ ಗಳು ಹಾಗೂ ಪ್ರಯಾಣಿಕರು ನಿಲ್ಲಲು ಜಾಗ ತೀರ ಇಕ್ಕಟ್ಟಾಗಿದೆ. ಇದನ್ನು ಅಧಿಕಾರಿಗಳು ಹೀಗೆಯೇ ಬಿಟ್ಟರೆ ಅಪಾಯ ನಿಶ್ಚಿತವೆಂದು ಪ್ರಯಾಣಿಕರು ಸಂಕಷ್ಟ ಹೊರ ಹಾಕಿದ್ದಾರೆ.

---

ಬಸವನಬಾಗೇವಾಡಿ ಬಸ್ ನಿಲ್ದಾಣಕ್ಕೆ ಶೀಘ್ರ ಭೇಟಿ ನೀಡಿ ಇಕ್ಕಟ್ಟಾದ ಜಾಗವನ್ನು ವಿಸ್ತಾರ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು.

-ಮಲ್ಲಿಕಾರ್ಜುನ ಬಿರಾದಾರ

ಅಭಿಯಂತರರು, ಸಾರಿಗೆ ಇಲಾಖೆ, ವಿಜಯಪುರ

11ನವೆಂಬರ್ 3 ಫೋಟೊ (ಬಸ್ )

ಬಸವನಬಾಗೇವಾಡಿ ಬಸ್ ನಿಲ್ದಾಣದ ಪ್ರವೇಶ ದ್ವಾರದಲ್ಲಿನಿಂತಿರುವ ರಾಜಹಂಸ ಬಸ್ .