ದೀಪಾವಳಿ ಕಳೆದರೂ ಕೈ ಸಿಗಲಿಲ್ಲವೇತನ !

Contributed by: Vijaykumar.belde@timesofindia.com|Vijaya Karnataka•
diwali has passed still no salary for 8 months
ಚಿತ್ರ:11ಬಿಕೆ5

ಬಾಕಿ ವೇತನ ನೀಡುವಂತೆ ಒತ್ತಾಯಿಸಿ, ಭಾಲ್ಕಿ ತಾಲೂಕಿನ ನೀಲಮಹಳ್ಳಿ ತಾಂಡಾ ಹತ್ತಿರದ ಶುದ್ಧ ಕುಡಿಯುವ ನೀರಿನ ಘಟಕ ಎದುರು ಧರಣಿ ನಿರತ ಹೊರಗುತ್ತಿಗೆ ನೌಕರರು.
8 ತಿಂಗಳಿಂದ ಬಾರದ ಮಹಾನಗರ ಪಾಲಿಕೆ ಹೊರಗುತ್ತಿಗೆ ನೌಕರರ ಬಾಕಿ ವೇತನ * ಅಧಿಕಾರಿಗಳ ಭರವಸೆಗೆ ಹಿಂಪಡೆದ ಪ್ರತಿಭಟನೆ (ಕಿಕ್ಕರ್ )

ದೀಪಾವಳಿ ಕಳೆದರೂ ಕೈ ಸಿಗಲಿಲ್ಲವೇತನ !

ವಿಜಯಕುಮಾರ ಬೆಲ್ದೆ ಬೀದರ್

vಜ್ಜಿayk್ಠಞa್ಟ.ಚಿಛ್ಝಿdಛಿಃಠಿಜಿಞಛಿsಟ್ಛಜ್ಞಿdಜಿa.್ಚಟಞ

ನಗರಕ್ಕೆ ನಿರಂತರ ಕುಡಿಯುವ ನೀರು ಸರಬರಾಜು ಯೋಜನೆ (24/7) ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ 54 ಸಿಬ್ಬಂದಿಗೆ ಕಳೆದ 8 ತಿಂಗಳಿಂದಲೂ ಸಂಬಳ ಇಲ್ಲ. ಇದರಿಂದ ಜೀವನ ನಡೆಸುವುದು ದುಸ್ತರವಾಗಿದೆ.

ದಸರಾ ಹಬ್ಬ ಕಳೆದು ಈಗ ದೀಪಾವಳಿ ಮುಗಿದರೂ ನೌಕರರ ಕೈಗೆ ವೇತನ ಸಿಕ್ಕಿಲ್ಲ. ಇದರಿಂದ ಕುಟುಂಬಗಳಲ್ಲಿಕತ್ತಲು ಆವರಿಸಿದೆ. 24/7 ನೀರು ಸರಬರಾಜು ಯೋಜನೆ ಯಶಸ್ವಿಗೊಳಿಸುವ ಹೊರಗುತ್ತಿಗೆ ಸಿಬ್ಬಂದಿ ಈಗ ತೀವ್ರ ಸಂಕಷ್ಟದಲ್ಲಿದ್ದಾರೆ. ಕಳೆದ 8 ತಿಂಗಳಿಂದ ಯಾವುದೇ ವೇತನ ಪಾವತಿಯಾಗಿಲ್ಲ. ಈ ಕಾರ್ಮಿಕರ ಮತ್ತು ಅವರ ಕುಟುಂಬಗಳ ಬದುಕು ಬೀದಿಗೆ ಬಿದ್ದಿದೆ. ಕಳೆದ 8 ತಿಂಗಳಿಂದ ನಯಾಪೈಸೆ ವೇತನ ಸಿಗದೆ ಸಿಬ್ಬಂದಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸಿಬ್ಬಂದಿಯ ಗೋಳು ಹಾಗೂ ಅಳಲು ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಕಿವಿಗೆ ಬೀಳದಿರುವುದು ವಿಪರ್ಯಾಸದ ಸಂಗತಿ. ಜನರಿಗೆ ನೀರು ಒದಗಿಸುವ ನೌಕರರು ಹಬ್ಬದ ಸಂಭ್ರಮದಿಂದ ವಂಚಿತರಾಗಿದ್ದಾರೆ. ಪಾಲಿಕೆಯಲ್ಲಿಖಾಲಿ ಇರುವ ಹೊರಗುತ್ತಿಗೆ ಆಧಾರದ ಮೇಲೆ ನೀರು ಸರಬರಾಜು ಎಂಜಿನಿಯರ್ /ಸಹಾಯಕ, ಸಹಾಯಕ ಪ್ರಯೋಗಾಲಯ ತಂತ್ರಜ್ಞ, ಫಿಟ್ಟರ್ /ಎಲೆಕ್ಟ್ರಿಷಿಯನ್ , ಪಂಪ್ ಆಪರೇಟರ್ , ವಾಲ್ ್ವಮ್ಯಾನ್ , ಡಿಇಒ ಹಾಗೂ ಬಿಲ್ ಕಲೆಕ್ಟರ್ ಸಿಬ್ಬಂದಿಗಳಿಗೆ ಸಮರ್ಪಕ ಸಂಬಳವಿಲ್ಲದೆ ಸಂಕಷ್ಟ ಎದುರಿಸುವಂತಾಗಿದೆ. ಮಾರ್ಚ್ನಿಂದ ಅಕ್ಟೋಬರ್ ವರೆಗೆ ಸಿಬ್ಬಂದಿಗೆ ವೇತನವೇ ಮಾಡಿಲ್ಲ.

** ಬಾಕ್ಸ್ --

ಪಾಲಿಕೆಯಲ್ಲಿಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವವರ ವಿವರ

ಹುದ್ದೆ ಗುತ್ತಿಗೆ ನೌಕರರು

ನೀರು ಸರಬರಾಜು ಎಂಜಿನಿಯರ್ 03

ಸಹಾಯಕ ಪ್ರಯೋಗಾಲಯ ತಂತ್ರಜ್ಞ 02

ಫಿಟ್ಟರ್ /ಎಲೆಕ್ಟ್ರಿಷಿಯನ್ 03

ಪಂಪ್ ಆಪರೇಟರ್ 18

ವಾಲ್ ್ವಮ್ಯಾನ್ 15

ಡೇಟಾ ಎಂಟ್ರಿ ಆಪರೇಟರ್ 02

ಬಿಲ್ ಕಲೆಕ್ಟರ್ 11

ಒಟ್ಟು 54

**ಬಾಕ್ಸ್ ---

ಅಧಿಕಾರಿಗಳ ಭರವಸೆಗೆ ಕೈಬಿಟ್ಟ ಪ್ರತಿಭಟನೆ

ವೇತನ ಸಿಗದೆ ತೀವ್ರ ಸಂಕಷ್ಟದಲ್ಲಿದ್ದ ಪಾಲಿಕೆಯ 24/7 ಕುಡಿಯುವ ನೀರು ಸರಬರಾಜು ಹೊರಗುತ್ತಿಗೆ ಸಿಬ್ಬಂದಿ ನಡೆಸುತ್ತಿದ್ದ ಪ್ರತಿಭಟನೆಗೆ ಸಂಬಂಧಪಟ್ಟ ಅಧಿಕಾರಿಗಳ ಭರವಸೆಯ ಬಳಿಕ ತಾತ್ಕಾಲಿಕ ತೆರೆಬಿದ್ದಿದೆ. ಹಬ್ಬದ ಹೊತ್ತಿನಲ್ಲೂವೇತನವಿಲ್ಲದೆ ಪರದಾಡುತ್ತಿದ್ದ ಸಿಬ್ಬಂದಿ ಆಕ್ರೋಶ ಹೊರಹಾಕಿದ ಹಿನ್ನೆಲೆಯಲ್ಲಿಆಡಳಿತ ಯಂತ್ರ ಎಚ್ಚೆತ್ತುಕೊಂಡು ವೇತನ ಪಾವತಿಗೆ ಮುಂದಾ ಗಿದೆ. ಬಾಕಿ ವೇತನ ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಹಿರಿಯ ಅಧಿಕಾರಿಗಳು ನೀಡಿದ ಮೌಖಿಕ ಭರವಸೆ ನೀಡಿದ್ದು, ಸಾರ್ವಜನಿಕರಿಗೆ ನೀರು ಸರಬರಾಜು ವ್ಯತ್ಯಯವಾಗದಂತೆ ಸಿಬ್ಬಂದಿ ಹೋರಾಟ ತಾತ್ಕಾಲಿಕವಾಗಿ ಕೈಬಿಟ್ಟಿದ್ದಾರೆ.

**ಕೋಟ್ ...

ಪಾಲಿಕೆಯ 24/7 ಕುಡಿಯುವ ನೀರು ಸರಬರಾಜು ಹೊರಗುತ್ತಿಗೆ ಸಿಬ್ಬಂದಿ ವೇತನಕ್ಕೆ ಅಗತ್ಯ ಕ್ರಮಕೈಗೊಳ್ಳಲಾಗಿದೆ. ಮುಂಬರುವ ಎರಡ್ಮೂರು ದಿನಗಳಲ್ಲಿಸಿಬ್ಬಂದಿಗಳ ಕೈಸೇರಲಿದೆ. ಆರ್ಥಿಕ ಸಮಸ್ಯೆ ಇಲ್ಲ. ತಾಂತ್ರಿಕ ದೋಷದಿಂದ ವಿಳಂಬವಾಗಿದೆ.

-ಸುರೇಖಾ, ಪ್ರಭಾರಿ ಆಯುಕ್ತ, ಮಹಾನಗರ ಪಾಲಿಕೆ

**ಕೋp

ದಸರಾ ಹಬ್ಬ ಸಾಲ ಮಾಡಿ ಕಳೆದೆವು. ಈಗ ದೀಪಾವಳಿಯಾದರೂ ಕೈಗೆ ಹಣ ಸಿಗುತ್ತದೆ ಎಂದುಕೊಂಡಿದ್ದೆವು. ಆದರೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ನಮ್ಮ ಬದುಕಿನಲ್ಲಿಬೆಳಕು ಮೂಡಲೇ ಇಲ್ಲ. ಹಬ್ಬದ ದಿನವೂ ಕೆಲಸ ಮಾಡಬೇಕಾದ ಅನಿವಾರ್ಯತೆಯಿದೆ. ಆದರೆ, ಹೊಟ್ಟೆಗೆ ಹಿಟ್ಟಿಲ್ಲ.

-ನೊಂದ, ಹೊರಗುತ್ತಿಗೆ ನೌಕರರ ಅಳಲು