ಕಬ್ಬಿಗೆ 3600 ರೂ. ದರ ನೀಡಿ

Contributed by: utkolekar@gmail.com|Vijaya Karnataka•
farmers protest for sugarcane price in bhima river area
ಭೀಮಾ ತೀರದ ಸಕ್ಕರೆ ಕಾರ್ಖಾನೆಗಳ ವಿರುದ್ಧ ರೈತರ ಆಕ್ರೋಶ

ಕಬ್ಬಿಗೆ 3600 ರೂ. ದರ ನೀಡಿ
ವಿಕ ಸುದ್ದಿಲೋಕ ಇಂಡಿ

ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಯ ಕೆಲ ತಾಲೂಕಿನ ಕಾರ್ಖಾನೆಗಳು ಕಬ್ಬಿಗೆ ದರ ನಿಗದಿ ಮಾಡಿದ್ದು, ಭೀಮಾ ತೀರದ ಸಕ್ಕರೆ ಕಾರ್ಖಾನೆಗಳು ಇದುವರೆಗೆ ಕಬ್ಬಿನ ದರ ನಿಗದಿ ಮಾಡಿಲ್ಲಎಂದು ಆರೋಪಿಸಿ ರೈತರು ಆಡಳಿತ ಸೌಧ ಎದುರು ಪ್ರತಿಭಟನೆ ನಡೆಸಿ ಕಂದಾಯ ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.

ರೈತ ಮುಖಂಡ ಬಾಳು ಮುಳಜಿ ಮಾತನಾಡಿ, ‘‘ಭೀಮಾ ತೀರದ ಕಾರ್ಖಾನೆಗಳು ಕಬ್ಬಿಗೆ 3600 ರೂ. ಬೆಂಬಲ ಬೆಲೆ ನೀಡಬೇಕು. ಕೂಡಲೇ ಜಿಲ್ಲಾಧಿಕಾರಿಗಳು ಮಧ್ಯಸ್ಥಿಕೆ ವಹಿಸಿ ಬೆಲೆ ನಿಗದಿಗೆ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ದರ ನಿಗದಿಪಡಿಸದಿದ್ದರೆ ಇಂಡಿ ತಾಲೂಕಿನ ಮರಗೂರದ ಭೀಮಾಶಂಕರ ಸಕ್ಕರೆ ಕಾರ್ಖಾನೆ , ಹಿರೇಬೆವನೂರದ ಇಂಡಿಯನ್ ಕೇನ್ ಪವರ ಲಿಮಿಟೆಡ್ ಮತ್ತು ನಾದದ ಜಮಖಂಡಿ ಶುಗರ್ಸ್ ಯುನಿಟ್ 2 ಸಕ್ಕರೆ ಕಾರ್ಖಾನೆಗಳಿಗೆ ಬೀಗ ಹಾಕಿ ಹೋರಾಟ ಮಾಡುತ್ತೇವೆ. ಝಳಕಿ ರಾಷ್ಟ್ರೀಯ ಹೆದ್ದಾರಿ, ಹಿರೇಬೇವನೂರ ಮತ್ತು ನಾದ ರಾಜ್ಯ ಹೆದ್ದಾರಿ ಸಂಚಾರ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು’’ ಎಂದರು.

ಪ್ರತಿಭಟನೆಯಲ್ಲಿಪ್ರಶಾಂತ ಲಾಳಸಂಗಿ, ಅಪ್ಪು ಮಸಳಿ, ಶ್ರೀಶೈಲ ಮುಜಗಾರ, ಸುನೀಲ ಕೋಳಿ, ಮಾಳಪ್ಪ ಬಳಗಾರ, ಸಾಗರ ಪ್ರಧಾನಿ, ಮಾಯಪ್ಪ ರೂಗಿ, ಮಲ್ಲುಬಳ್ಳಾರಿ ಮತ್ತಿತರರಿದ್ದರು.

ಫೋಟೋ- 11 ಇಂಡಿ 05

ಭೀಮಾ ತೀರದ ಸಕ್ಕರೆ ಕಾರ್ಖಾನೆಗಳು ಕಬ್ಬಿಗೆ 3600 ರೂ. ದರ ನಿಗದಿಪಡಿಸಬೇಕು ಎಂದು ಆಗ್ರಹಿಸಿ ರೈತ ಮುಖಂಡರು ಎಸಿಗೆ ಮನವಿ ಸಲ್ಲಿಸಿದರು.