ಹುಬ್ಬಳ್ಳಿ: ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ಗೋಕುಲ ರಸ್ತೆ ಹೊಸೂರುನಲ್ಲಿಇರುವ ಎಂ.ಎಂ.ಜೋಶಿ ನೇತ್ರ ವಿಜ್ಞಾನ ಸಂಸ್ಥೆ ವತಿಯಿಂದ ನ.15ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ಸಮಗ್ರ ನೇತ್ರ ಉಚಿತ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ.ಶಿಬಿರದಲ್ಲಿ40 ವರ್ಷ ಮೇಲ್ಪಟ್ಟ ಎಲ್ಲರಿಗೂ ಸಮಗ್ರ ನೇತ್ರ ಉಚಿತ ತಪಾಸಣೆ, ಡಯಾಬಿಟಿಕ್ ರೆಟಿನೋಪಥಿ, ಅಕ್ಷಿಪಟಲ ತಜ್ಞರಿಂದ ತಪಾಸಣೆ ಹಾಗೂ ಸಲಹೆ, ಮಧುಮೇಹಿಗಳಲ್ಲಿನೇತ್ರ ಆರೈಕೆ ಕುರಿತು ಸಲಹೆ ನೀಡಲಾಗುವುದು. ಮಾಹಿತಿಗೆ 9980831493, 0836- 2228222 ಸಂಖ್ಯೆಗೆ ಸಂಪರ್ಕಿಸಬೇಕು ಎಂದು ಪ್ರಕಟಣೆ ತಿಳಿಸಿದೆ.