*ಇನ್ನೊಂದು ಸುದ್ದಿ ಜತೆ ಬಾಕ್ಸ್ .. ಮಹದೇಶ್ವರ ಬೆಟ್ಟದಲ್ಲಿಸಡಗರದ ತೆಪ್ಪೋತ್ಸವ

Contributed by: abhilash.gowda7707@gmail.com|Vijaya Karnataka•
grand teppotsava festival celebrated at mahadeshwara betta
ವಿಕ ಸುದ್ದಿಲೋಕ ಹನೂರು

ದೀಪಾವಳಿ ಜಾತ್ರಾ ಮಹೋತ್ಸವದ ಕೊನೆಯ ದಿನವಾದ ಮಂಗಳವಾರ ತಡರಾತ್ರಿ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮಹದೇಶ್ವರ ಬೆಟ್ಟದಲ್ಲಿ ಮಲೆಮಹದೇಶ್ವರ ಸ್ವಾಮಿಯವರ ಆಕರ್ಷಕ ತೆಪ್ಪೋತ್ಸವ ಸಡಗರ, ಸಂಭ್ರಮ ಹಾಗೂ ಭಕ್ತಿಭಾವದಿಂದ ಅದ್ಧೂರಿಯಾಗಿ ನೆರವೇರಿತು.
ಸಾಲೂರು ಬೃಹನ್ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಮ್ಮುಖದಲ್ಲಿನಡೆದ ಉತ್ಸವವನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು.

ಮಹದೇಶ್ವರ ಬೆಟ್ಟದ ದೊಡ್ಡಕೆರೆಯಲ್ಲಿನಡೆದ ತೆಪ್ಪೋತ್ಸವಕ್ಕೆ ವಿಶೇಷ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಕಂಗೊಳಿಸಿದ ಕೆರೆಯ ಪರಿಸರದಲ್ಲಿತೆಪ್ಪದ ಮೇಲೆ ವಿರಾಜಮಾನರಾದ ಉತ್ಸವ ಮೂರ್ತಿಗಳ ದೃಶ್ಯ ಭಕ್ತರ ಕಣ್ಮನ ಸೆಳೆಯಿತು. ಇದೇ ವೇಳೆ ನಡೆದ ಆಕರ್ಷಕ ಸಿಡಿಮದ್ದು ಪ್ರದರ್ಶನ ಉತ್ಸವ ಗಮನ ಸೆಳೆಯಿತು.

ನಂತರ ಉತ್ಸವ ಮೂರ್ತಿಗಳನ್ನು ದೊಡ್ಡಕೆರೆಯ ಬಳಿಗೆ ತಂದು ವಿಶೇಷÜ ಪೂಜೆ ಹಾಗೂ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಬಳಿಕ ತೆಪ್ಪದಲ್ಲಿಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಕಲ್ಯಾಣಿಯಲ್ಲಿಮೂರು ಸುತ್ತು ಪ್ರದಕ್ಷಿಣೆ ಹಾಕಲಾಯಿತು. ಈ ಮೂಲಕ ದೀಪಾವಳಿ ಜಾತ್ರೆಯ ಎಲ್ಲಾಧಾರ್ಮಿಕ ಕಾರ್ಯಕ್ರಮಗಳಲ್ಲೂತೆಪ್ಪೋತ್ಸವದ ಮೂಲಕ ಭಕ್ತಿಪೂರ್ಣವಾಗಿ ಸಂಪನ್ನಗೊಂಡಿತು.

ಈ ಸಂದರ್ಭದಲ್ಲಿಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪುರುಷೋತ್ತಮ್ , ಹನೂರು ಇನ್ಸ್ ಪೆಕ್ಟರ್ ಆನಂದ್ ಮೂರ್ತಿ, ಪ್ರಾಧಿಕಾರದ ಅಧಿಕಾರಿಗಳು, ಬೇಡಗಂಪಣ ಆರ್ಚಕರು ಸಿಬ್ಬಂದಿ ಹಾಗೂ ವಿವಿಧ ಭಾಗಗಳಿಂದ ಆಗಮಿಸಿದ್ದ ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.

----

11ಎಚ್ ಎನ್ ಆರ್ 03

ಪೋಟೊ : 01

ಮಹದೇಶ್ವರ ಬೆಟ್ಟದಲ್ಲಿಮಲೆಮಹದೇಶ್ವರ ಸ್ವಾಮಿಯವರ ಆಕರ್ಷಕ ತೆಪ್ಪೋತ್ಸವ ಅದ್ಧೂರಿಯಾಗಿ ನೆರವೇರಿತು.