ವಿಕ ಸುದ್ದಿಲೋಕ ಬೆಳ್ತಂಗಡಿಕೃಷಿಕ ಸದಸ್ಯರ ಆರ್ಥಿಕ ಸಬಲೀಕರಣ ಹಾಗೂ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಉತ್ತೇಜನ ನೀಡುವ ಉದ್ದೇಶದಿಂದ ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ಹೊಸ ಹೆಜ್ಜೆಯೊಂದನ್ನು ಇಡುತ್ತಿದೆ. ಸಂಘದ ಬ್ರ್ಯಾಂಡ್ ನಿರ್ಮಾಣದ ಪ್ರಯತ್ನದ ಭಾಗವಾಗಿ ಸಂಪದ ಗಾಣದ ತೆಂಗಿನ ಎಣ್ಣೆ ಉತ್ಪಾದನಾ ಘಟಕ ಆರಂಭಿಸುತ್ತಿದ್ದು, ನ.14ರಂದು ನೆರಿಯ ಶಾಖೆಯಲ್ಲಿಗಾಣದ ಗಿರಣಿ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಪ್ರಕಾಶ ನಾರಾಯಣ ಕೆ. ತಿಳಿಸಿದ್ದಾರೆ.
73ನೇ ಅಖಿಲ ಭಾರತ ಸಹಕಾರಿ ಸಪ್ತಾಹದ ಸಂದರ್ಭ ಈ ಯೋಜನೆಗೆ ಚಾಲನೆ ನೀಡಲಾಗುತ್ತಿದೆ. ನ.14ರಂದು ಬೆಳಗ್ಗೆ 11.30ಕ್ಕೆ ನೆರಿಯದಲ್ಲಿರುವ ಮುಂಡಾಜೆ ಪ್ಯಾಕ್ಸ್ ಶಾಖೆಯ ಸಭಾಭವನದಲ್ಲಿಕಾರ್ಯಕ್ರಮ ನಡೆಯಲಿದೆ.
ಶಾಸಕ ಹರೀಶ್ ಪೂಂಜ ಗಾಣದ ತೆಂಗಿನ ಎಣ್ಣೆ ಗಿರಣಿ ಉದ್ಘಾಟಿಸಲಿದ್ದಾರೆ. ಮುಂಡಾಜೆ ಪ್ಯಾಕ್ಸ್ ನಿರ್ದೇಶಕ ರಾಘವ ಕಲ್ಮಂಜ ಅಧ್ಯಕ್ಷತೆ ವಹಿಸಲಿದ್ದಾರೆ.
ಗಂಡಿಬಾಗಿಲು ಸೈಂಟ್ ತೋಮಸ್ ಚರ್ಚ್ನ ಫಾ. ವಿನೋಯಿ ಮಾಳಿಕಯಿಲ್ , ಸಹಕಾರ ಸಂಘಗಳ ಸಹಾಯಕ ಉಪನಿಬಂಧಕ ಎಸ್ .ಎಂ. ರಘು, ಧರ್ಮಸ್ಥಳ ಪ್ಯಾಕ್ಸ್ ಅಧ್ಯಕ್ಷ ಪ್ರೀತಂ ಡಿ., ಬೆಳ್ತಂಗಡಿ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಚಂದ್ರಶೇಖರ ಕೆ.ಎಸ್ . ಉಪಸ್ಥಿತರಿರಲಿದ್ದಾರೆ.
ನೆರಿಯ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷೆ ಸರಸ್ವತಿ, ಗಂಡಿಬಾಗಿಲು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷೆ ಭವಾನಿ, ನೆರಿಯ ಗ್ರಾಹಕರ ಸಂಘದ ಅಧ್ಯಕ್ಷ ರಾಮ್ ಕುಮಾರ್ ಬಿ., ಸಂಪದ ರೈತ ಸೇವಾ ಕೂಟದ ಅಧ್ಯಕ್ಷ ಬಾಲಕೃಷ್ಣ ಗೌಡ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.