ಗಾಂಧಿಗಂಜ್ ನಲ್ಲಿಮುಹೂರ್ತ ವ್ಯಾಪಾರಕ್ಕೆ ಚಾಲನೆ

Contributed by: Vijaykumar.belde@timesofindia.com|Vijaya Karnataka•
inauguration of post diwali muhurt trading in gandhiganj
ಚಿತ್ರ:11ಬಿಡಿಆರ್ 8

ಬೀದರ್ ನ ಗಾಂಧಿಗಂಜ್ ನಲ್ಲಿದೀಪಾವಳಿ ನಂತರದ ಮುಹೂರ್ತ ವ್ಯಾಪಾರ ಚಾಲನೆ ಕಾರ್ಯಕ್ರಮ ನಡೆಯಿತು
ಗಾಂಧಿಗಂಜ್ ನಲ್ಲಿಮುಹೂರ್ತ ವ್ಯಾಪಾರಕ್ಕೆ ಚಾಲನೆ

ವಿಕ ಸುದ್ದಿಲೋಕ ಬೀದರ್

ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ನಗರದ ಗಾಂಧಿಗಂಜ್ ನಲ್ಲಿದೀಪಾವಳಿ ನಂತರದ ವ್ಯಾಪಾರ- ವಹಿವಾಟಿನ ಪುನರಾರಂಭದ ಅಂಗವಾಗಿ ಮುಹೂರ್ತ ವ್ಯಾಪಾರಕ್ಕೆ ಬುಧವಾರ ಚಾಲನೆ ನೀಡಲಾಯಿತು.

ಶ್ರೀ ಓಂಬಾಲಾಜಿ ಟ್ರೇಡಿಂಗ್ ಕಂಪನಿಯ ಆವರಣದಲ್ಲಿಬಸವಣ್ಣನವರು ಹಾಗೂ ಸರ್ವ ಧರ್ಮ ಗುರುಗಳನ್ನು ಸ್ಮರಿಸಿ, ವಿಶೇಷ ಪೂಜೆ ಸಲ್ಲಿಸಲಾಯಿತು. ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು ಮಹೂರ್ತ ವ್ಯಾಪಾರಕ್ಕೆ ಚಾಲನೆ ನೀಡಿದರು. ದುಡಿಯುವುದಷ್ಟೇ ಅಲ್ಲ; ವ್ಯಕ್ತಿಯ ದೈಹಿಕ, ಮಾನಸಿಕ, ಭಾವನಾತ್ಮಕ ಬೆಳವಣಿಗೆ ಜತೆಗೆ ಅಭಿವೃದ್ಧಿಗೆ ಪೂರಕವಾಗುವ ಕೆಲಸವೇ ನಿಜವಾದ ಕಾಯಕ ಎಂದು ಹೇಳಿದರು.

ದಿ ಗ್ರೇನ್ ಆ್ಯಂಡ್ ಸೀಡ್ಸ್ ಮರ್ಚಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಬಸವರಾಜ ಧನ್ನೂರ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ವರ್ಷ ಮಳೆ ಇಲ್ಲದ ಕಾರಣ ಬರ ಪರಿಸ್ಥಿತಿ ಉಂಟಾಗಿದೆ. ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಇದರ ಮಧ್ಯೆಯೂ ರೈತರು ತಮ್ಮ ಹೊಲದಲ್ಲಿಬೆಳೆದ ಅಲ್ಪ ಸ್ವಲ್ಪ ಸೋಯಾಬೀನ್ ,ಉದ್ದು, ಹೆಸರು ಬೆಳೆಗಳನ್ನು ಮಾರಾಟಕ್ಕಾಗಿ ಮಾರುಕಟ್ಟೆಗೆ ತರುತ್ತಿರುವುದು ಸಮಾಧಾನಕರ ಸಂಗತಿ ಎಂದು ಹೇಳಿದರು. ಓಂ ಬಾಲಾಜಿ ಟ್ರೇಡಿಂಗ್ ಕಂಪನಿಯ ಮಾಲೀಕ ಬಾಲಾಜಿ, ಶಿವಾಜಿ ಅವರು ಪೂಜ್ಯರು ಹಾಗೂ ಗಣ್ಯರನ್ನು ಸನ್ಮಾನಿಸಿದರು. ಎಪಿಎಂಸಿ ಕಾರ್ಯದರ್ಶಿ ಸಂತೋಷ್ ಮುದ್ದಾ, ನಾಗಶೆಟ್ಟಿ ದಾಡಗಿ, ಭಗವಂತ ಔದತ್ತಪುರ, ಅಶೋಕ್ ರೇಜಂತಲ್ , ಶಾಮರಾವ್ ಸುಲಗುಂಟೆ, ಸೋಮನಾಥ ಗಂಗಶೆಟ್ಟಿ, ರಾಜಕುಮಾರ ಬಿರಾದಾರ,ಅಣ್ಣಾರಾವ್ ಮೊಗಶೆಟ್ಟಿ, ವಿಶ್ವನಾಥ ಕಾಜಿ, ಶಂಕರ ಗುನ್ನಳ್ಳಿ, ರಾಜಕುಮಾರ ಬಗದಲ್ , ಪ್ರಕಾಶ್ ಗೌಡಪ್ಪನೋರ, ಸುರೇಶ್ ಸ್ವಾಮಿ, ನಾಗಶೆಟ್ಟೆಪ್ಪ ಕಾರಾಮುಂಗಿ,ರಾಜಕುಮಾರ ಬಸವಣ್ಣನವರ್ , ಅಸೋಸಿಯೇಷನ್ ಪದಾಧಿಕಾರಿಗಳು ರೈತರು, ವ್ಯಾಪಾರಸ್ಥರು, ಮುನೀಮರು ಹಾಗೂ ಕೂಲಿ ಕಾರ್ಮಿಕರು ಪಾಲ್ಗೊಂಡಿದ್ದರು.