ದಂಪತಿ ವಿದೇಶಕ್ಕೆ ತೆರಳಿದ್ದ ವೇಳೆ ಮನೆಯ ಕಪಾಟಿನಲ್ಲಿಇರಿಸಲಾಗಿರುವ ಸುಮಾರು 69 ಗ್ರಾಂ ಚಿನ್ನಾಭರಣ ನಾಪತ್ತೆಯಾದ ಘಟನೆ ಗುತ್ತಿಗಾರು ಕಮಿಲದಲ್ಲಿನಡೆದಿದೆ.ನಾಪತ್ತೆಯಾಗಿರುವ ಚಿನ್ನಾಭರಣದ ಬೆಲೆ ಅಂದಾಜು ಮೌಲ್ಯ 7.61 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಗುತ್ತಿಗಾರು ಗ್ರಾಮದ ಕಮಿಲ ಬಳಿಯ ತುಪ್ಪದಮನೆಯ ರಂಜಿತ್ ರಾಜ್ ಟಿ.ಡಿ. ಅವರು ಏ.26ರಂದು ವಿವಾಹವಾಗಿದ್ದು, ಮೇ 4ರಂದು ಪತ್ನಿಯೊಂದಿಗೆ ಅಬುಧಾಬಿಗೆ ತೆರಳಿದ್ದರು. ಈ ಸಂದರ್ಭ ಪತ್ನಿಯ ತವರು ಮನೆಯಲ್ಲಿನೀಡಿದ್ದ ಚಿನ್ನಾಭರಣ ಹಾಗೂ ಸುಮಾರು 6 ಸಾವಿರ ರೂ. ನಗದನ್ನು ಮನೆಯ ಕಪಾಟಿನಲ್ಲಿಇರಿಸಿ ಬೀಗ ಹಾಕಿದ್ದರು. ಅದರ ಕೀಲಿಯನ್ನು ತಾಯಿ ಜಾನಕಿ ಅವರಿಗೆ ನೀಡಿದ್ದರು. ನ.1ರಂದು ವಿದೇಶದಿಂದ ಮರಳಿದಾಗ ಕಪಾಟಿನ ಬಲಭಾಗದ ಬಾಗಿಲು ತೆರೆದಿರುವುದು ಗಮನಕ್ಕೆ ಬಂದಿದೆ. ತೆರೆದು ನೋಡಿದಾಗ ಕಪಾಟಿನಲ್ಲಿಟ್ಟಿದ್ದ ಎರಡು ಚಿನ್ನದ ಬಳೆಗಳು, ಲಕ್ಷ್ಮಿ ಪೆಂಡೆಂಟ್ ಇರುವ ನೆಕ್ಲಸ್ , ಒಂದು ಜತೆ ಜುಮುಕಿ ಹಾಗೂ ಚಿನ್ನದ ಚೈನ್ ನಾಪತ್ತೆಯಾಗಿತ್ತು. ಇವುಗಳ ಒಟ್ಟು ತೂಕ ಸುಮಾರು 69 ಗ್ರಾಂ ಆಗಿದ್ದು, ಅಂದಾಜು ಮೌಲ್ಯ 7.61 ಲಕ್ಷ ರೂ. ಎಂದು ದೂರಿನಲ್ಲಿತಿಳಿಸಲಾಗಿದೆ. ಈ ಬಗ್ಗೆ ಈ ಕುರಿತು ರಂಜಿತ್ ರಾಜ್ ಅವರು ನೀಡಿದ ದೂರಿನಂತೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.