(ಬೆಂಗಳೂರಿಗೆ) ಸಿದ್ದರಾಮಯ್ಯ, ನನ್ನ ನಡುವಿನ ಸ್ನೇಹದಲ್ಲಿಬಿರುಕಿಲ್ಲ

Contributed by: Beeresha M|Vijaya Karnataka•
no rift in my friendship with siddaramaiah hc mahadevapppa
ಸಿದ್ದರಾಮಯ್ಯ , ನನ್ನ ನಡುವಿನ ಸ್ನೇಹದಲ್ಲಿಬಿರುಕಿಲ್ಲ

-ಡಾ.ಎಚ್ .ಸಿ ಮಹದೇವಪ್ಪ ಸ್ಪಷ್ಟನೆ
ವಿಕ ಸುದ್ದಿಲೋಕ ಮೈಸೂರು

ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ನನ್ನ ನಡುವಿನ ಸ್ನೇಹದಲ್ಲಿಯಾವುದೇ ಬಿರುಕು ಬಿಟ್ಟಿಲ್ಲಎಂದು ಮಾಜಿ ಸಚಿವ ಎಚ್ .ಸಿ.ಮಹದೇವಪ್ಪ ತಿಳಿಸಿದ್ದಾರೆ.

ಮೈಸೂರಿನಲ್ಲಿಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘‘ ಸ್ನೇಹ ಯಾವತ್ತೂ ಸ್ನೇಹವಾಗಿಯೇ ಇರುತ್ತದೆ. ಸಿದ್ದರಾಮಯ್ಯ ಬಗ್ಗೆ ನನಗೆ ಪ್ರೀತಿ, ಗೌರವವಿದೆ. ಸಿದ್ದರಾಮಯ್ಯ ಜತೆ ಯಾವುದೇ ವೈಯಕ್ತಿಕ ಭಿನ್ನಾಭಿಪ್ರಾಯವಿಲ್ಲ. ನಾನು ಅಧಿಕಾರಕ್ಕಾಗಿ ರಾಜಕೀಯಕ್ಕೆ ಬಂದವನಲ್ಲ, ಅಧಿಕಾರ ಬೇಕಿದ್ದರೆ ಹಿಂದಿನ ಪಕ್ಷದಲ್ಲೇ ಉಳಿದುಕೊಳ್ಳಬಹುದಿತ್ತು. ಅಧಿಕಾರದ ಆಸೆಯನ್ನ ಬಿಟ್ಟು ಸಿದ್ದಾಂತಕ್ಕಾಗಿ ಈ ಪಕ್ಷಕ್ಕೆ ಬಂದಿದ್ದೇನೆ,’’ ಎಂದರು.

‘‘ಸಚಿವ ಸ್ಥಾನ ಸಿಗಲಿಲ್ಲಎಂಬ ಕಾರಣಕ್ಕೆ ಯಾವುದೇ ಅಸಮಾಧಾನವಿಲ್ಲ. ಸಚಿವ ಸ್ಥಾನ ಸಿಗದಿದ್ದರೂ ನೋವಿಲ್ಲ. ಅಧಿಕಾರಕ್ಕಿಂತ ಸಿದ್ದಾಂತ ತತ್ವಗಳಿಗೆ ಹೆಚ್ಚು ಆದ್ಯತೆ ಕೊಡುತ್ತೇನೆ,’’ ಎಂದು ತಿಳಿಸಿದರು.