ಓಬವ್ವಳ ಧೈರ್ಯ, ತ್ಯಾಗ ಸ್ಫೂರ್ತಿ

Contributed by: manjunatha.kp@timesofindia.com|Vijaya Karnataka•
onake obavva the tale of bravery and womens valor
ಜಿಲ್ಲಾಡಳಿತದಿಂದ ವೀರವನಿತೆ ಒನಕೆ ಓಬವ್ವ ಜಯಂತಿ | ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ್ ಬಣ್ಣನೆ

ಓಬವ್ವಳ ಧೈರ್ಯ , ತ್ಯಾಗ ಸ್ಫೂರ್ತಿ
ವಿಕ ಸುದ್ದಿಲೋಕ ವಿಜಯಪುರ

‘‘ಕನ್ನಡ ನಾಡಿನ ಇತಿಹಾಸದಲ್ಲಿವೀರವನಿತೆ ಒನಕೆ ಓಬವ್ವಳ ಧೈರ್ಯ, ಸಾಹಸ, ಸ್ವಾಭಿಮಾನ ಹಾಗೂ ದೇಶಪ್ರೇಮಕ್ಕೆ ವಿಶಿಷ್ಟ ಸ್ಥಾನವಿದೆ. ಅಸಾಧಾರಣ ಸಮಯಪ್ರಜ್ಞೆ ಮತ್ತು ಸಾಹಸದಿಂದ ಚಿತ್ರದುರ್ಗದ ಕೋಟೆಯನ್ನು ರಕ್ಷಿಸಲು ಹೋರಾಡಿದ ಓಬವ್ವ ಅವರ ಜೀವನ ಎಲ್ಲರಿಗೂ ಪ್ರೇರಣಾದಾಯಕವಾಗಿದೆ,’’ ಎಂದು ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ್ ತಿಳಿಸಿದರು.

ನಗರದ ಕಂದಗಲ್ ಹನುಮಂತರಾಯ ರಂಗಮದಿರದಲ್ಲಿಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿಬುಧವಾರ ಆಯೋಜಿಸಿದ್ದ ವೀರವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿಮಾತನಾಡಿದ ಅವರು, ‘‘ಕನ್ನಡ ನಾಡಿನ ಇತಿಹಾಸದಲ್ಲಿಮಹಿಳಾ ಶೌರ್ಯ ಮತ್ತು ಸ್ವಾಭಿಮಾನದ ಪ್ರತೀಕವಾಗಿ ಒನಕೆ ಓಬವ್ವ ಅಜರಾಮರವಾಗಿದ್ದಾರೆ,’’ ಎಂದರು.

‘‘ಪತಿ ಊಟ ಮಾಡುತ್ತಿದ್ದ ಸಂದರ್ಭದಲ್ಲಿಅವರಿಗೆ ತೊಂದರೆಯಾಗಬಾರದೆಂಬ ಕಾಳಜಿಯಿಂದ ಕೋಟೆಯ ರಕ್ಷಣೆಯ ಹೊಣೆಯನ್ನು ತಾವೇ ವಹಿಸಿಕೊಂಡು, ಶತ್ರು ಸೈನಿಕರನ್ನು ಎದುರಿಸಿದ ಓಬವ್ವ ಅವರ ಕಾರ್ಯ, ಕರ್ತವ್ಯನಿಷ್ಠೆ ಅಸಾಧಾರಣ ಧೈರ್ಯಕ್ಕೆ ಸಾಕ್ಷಿಯಾಗಿದೆ. ನಾಡಿನ ರಕ್ಷಣೆಗೆ ಆದ್ಯತೆ ನೀಡಿದ ಅವರ ಶೌರ್ಯ, ತ್ಯಾಗ ಮತ್ತು ದೇಶಪ್ರೇಮ ಇಂದಿನ ಯುವಜನತೆಗೆ, ವಿಶೇಷವಾಗಿ ಮಹಿಳೆಯರಿಗೆ ಸ್ಫೂರ್ತಿಯಾಗಬೇಕು,’’ ಎಂದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ವಸಂತ ಹೊನಮೊಡೆ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಹೇಶ ಪೋತದಾರ, ಜಿಪಂ ಯೋಜನಾಧಿಕಾರಿ ಅಶೋಕ ಕಲಘಟಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಕ್ರೀಡಾ ಇಲಾಖೆ ಅಧಿಕಾರಿ ರಾಜಶೇಖರ ದೈವಾಡಿ, ಮುಖಂಡರಾದ ರಾಜಶೇಖರ ಕುದರಿ, ಚೆನ್ನು ಕಟ್ಟಿಮನಿ, ಅಡಿವೆಪ್ಪ ಸಾಲಗಲ, ಶೇಖ್ ಮಾಸ್ತರ್ ಮತ್ತಿತರರಿದ್ದರು.

--

ಅಚ್ಚಳಿಯದ ವೀರಗಾಥೆ

ಚಿತ್ರದುರ್ಗದ ಯಶೋಧರಮ್ಮ ಬೋರಪ್ಪ ಮಹಿಳಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಸಂಜೀವಕುಮಾರ ಪೋತೆ ಉಪನ್ಯಾಸ ನೀಡಿ, ‘‘ಚಿತ್ರದುರ್ಗದ ಪಾಳೇಗಾರರ ಆಡಳಿತದ ಅವಧಿಯಲ್ಲಿಹೈದರಾಲಿ ಕೋಟೆಯನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ. ಆಗ ಕೋಟೆಯೊಳಗೆ ಶತ್ರು ಸೈನಿಕರು ಒಳನುಸುಳಲು ಯತ್ನಿಸಿದರು. ಇದನ್ನು ಗಮನಿಸಿದ ಒನಕೆ ಓಬವ್ವ ಕೈಗೆ ಸಿಕ್ಕ ಒನಕೆಯನ್ನೇ ಆಯುಧವನ್ನಾಗಿ ಮಾಡಿಕೊಂಡು ಶತ್ರು ಸೈನಿಕರನ್ನು ಧೈರ್ಯದಿಂದ ಎದುರಿಸಿದರು,’’ ಎಂದರು.

‘‘ಸಮಯಪ್ರಜ್ಞೆ, ಸಾಹಸ ಮತ್ತು ಸ್ವಾಭಿಮಾನದಿಂದ ಕೋಟೆಯ ರಕ್ಷಣೆಗೆ ನಿಂತ ಅವರ ವೀರಗಾಥೆ ಕರ್ನಾಟಕದ ಇತಿಹಾಸದಲ್ಲಿಅಚ್ಚಳಿಯದೆ ಉಳಿದಿದೆ. ವೀರ ಮದಕರಿ ನಾಯಕನ ಆಡಳಿತದ ಕಾಲಘಟ್ಟದ ಚಿತ್ರದುರ್ಗದ ಇತಿಹಾಸದಲ್ಲಿಒನಕೆ ಓಬವ್ವ ಅವರ ಸಾಹಸಕ್ಕೆ ವಿಶೇಷ ಸ್ಥಾನವಿದೆ,’’ ಎಂದು ವಿವರಿಸಿದರು.

ಫೋಟೊ: ಓಬವ್ವ-ಬಿಜೆಪಿ11(1)

ವಿಜಯಪುರದಲ್ಲಿಜಿಲ್ಲಾಡಳಿತದಿಂದ ವೀರವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮ ಜರುಗಿತು.

ಟಾಪ್ ಗೆ ಬಳಸಿ...

ಓಬವ್ವ-ಬಿಜೆಪಿ11(2), ಓಬವ್ವ-ಬಿಜೆಪಿ11(3)

ವಿಜಯಪುರದಲ್ಲಿನಡೆದ ವೀರವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿರಂಗನಾಥ ಬತ್ತಾಸೆ ಹಾಗೂ ತಂಡ ಓಬವ್ವ ಸಾಹಸಗಾಥೆಯನ್ನು ಬಿಂಬಿಸುವ ನೃತ್ಯ ಪ್ರದರ್ಶನ ಗಮನ ಸೆಳೆಯಿತು.