*ಅಂತರ್ಜಲ ಮಟ್ಟದಲ್ಲಿಕುಸಿತ | ಅಮ್ಮತ್ತಿ ರೈತ ಸಂಘ ಆತಂಕವಿಕ ಸುದ್ದಿಲೋಕ ಮಡಿಕೇರಿ
ಕೊಡಗಿನಲ್ಲಿಕೃಷಿ ಭೂಮಿಗಳ ಮಾರಾಟ ಮತ್ತು ಕೃಷಿ ಪದ್ಧತಿಗೆ ವಿರುದ್ಧವಾಗಿ ಕಟ್ಟಡಗಳ ನಿರ್ಮಾಣ ಹೆಚ್ಚುತ್ತಿರುವುದರಿಂದ ಜಿಲ್ಲೆಯ ಭೌಗೋಳಿಕ ಸ್ವರೂಪ ಹಾಗೂ ಹಸಿರು ಪರಿಸರಕ್ಕೆ ಧಕ್ಕೆಯಾಗುತ್ತಿದೆ ಎಂದು ಅಮ್ಮತ್ತಿ ರೈತ ಸಂಘ ಆತಂಕ ವ್ಯಕ್ತಪಡಿಸಿದೆ.
ನಗರದ ಪತ್ರಿಕಾ ಭವನದಲ್ಲಿನಡೆದ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಸಂಘದ ಗೌರವಾಧ್ಯಕ್ಷ ಕಾವಡಿಚಂಡ ಯು. ಗಣಪತಿ, ‘‘ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳವರು ಕೊಡಗಿನಲ್ಲಿಕೃಷಿ ಭೂಮಿಗಳನ್ನು ಖರೀದಿಸಿ ಮನಬಂದಂತೆ ಕಟ್ಟಡಗಳನ್ನು ನಿರ್ಮಿಸುತ್ತಿರುವುದು ಜಿಲ್ಲೆಯ ಕೃಷಿ ಸಂಸ್ಕೃತಿಗೆ ವಿರುದ್ಧವಾಗಿದೆ,’’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘‘ಗದ್ದೆ ಬಯಲುಗಳಲ್ಲಿಭತ್ತದ ಕೃಷಿ ನಡೆಯುತ್ತಿದ್ದ ಸಂದರ್ಭದಲ್ಲಿಅಂತರ್ಜಲ ಮಟ್ಟ ಉತ್ತಮವಾಗಿತ್ತು. ಆದರೆ ಕೃಷಿ ಭೂಮಿಗಳನ್ನು ಕಟ್ಟಡ ನಿರ್ಮಾಣಕ್ಕೆ ಬಳಸುತ್ತಿರುವುದರಿಂದ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಇದರ ಪರಿಣಾಮವಾಗಿ ಜಿಲ್ಲೆಯ ಹಲವು ಭಾಗಗಳಲ್ಲಿಕುಡಿಯುವ ನೀರಿನ ಸಮಸ್ಯೆಯೂ ಕಾಣಿಸಿಕೊಳ್ಳುತ್ತಿದೆ,’’ ಎಂದು ಎಚ್ಚರಿಸಿದರು.
‘‘1952ರಿಂದ 1956ರವರೆಗೆ ಪ್ರತ್ಯೇಕ ’ಸಿ’ ರಾಜ್ಯವಾಗಿದ್ದ ಕೊಡಗು ಸುಂದರ ನಾಡಾಗಿತ್ತು. ಬಳಿಕ ಕರ್ನಾಟಕದೊಂದಿಗೆ ವಿಲೀನಗೊಂಡ ನಂತರ ಹೊರಭಾಗದವರು ಜಮೀನುಗಳನ್ನು ಖರೀದಿಸಿ ನಡೆಸುತ್ತಿರುವ ಚಟುವಟಿಕೆಗಳಿಂದ ಕೊಡಗಿನ ನೈಸರ್ಗಿಕ ಸೌಂದರ್ಯ ಹಾಗೂ ಸ್ಥಳೀಯ ಸಂಸ್ಕೃತಿಗೆ ಧಕ್ಕೆಯಾಗಿದೆ,’’ ಎಂದು ಬೇಸರ ವ್ಯಕ್ತಪಡಿಸಿದರು.
‘‘ಕೃಷಿ ಭೂಮಿಗಳ ಪರಿವರ್ತನೆಯಿಂದ ಜಮೀನುಗಳು ಬರಡಾಗುತ್ತಿದ್ದು, ಇದೇ ಪರಿಸ್ಥಿತಿ ಮುಂದುವರಿದರೆ ಜಲಸಂಕಷ್ಟ ಮತ್ತಷ್ಟು ತೀವ್ರವಾಗಲಿದೆ. ಆದ್ದರಿಂದ ಸ್ಥಳೀಯರು ತಮ್ಮ ಜಮೀನುಗಳನ್ನು ಪರಭಾರೆ ಮಾಡುವ ಮುನ್ನ ಎಚ್ಚರಿಕೆ ವಹಿಸಬೇಕು,’’ ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿಸಂಘದ ಅಧ್ಯಕ್ಷ ಕೇಚಂಡ ಕುಶಾಲಪ್ಪ, ಕಾರ್ಯದರ್ಶಿ ಮನೆಯಪಂಡ ಜಿ.ಪೊನ್ನಪ್ಪ ಹಾಗೂ ಖಜಾಂಚಿ ಪಟ್ಟಡ ಬಿ.ಅರುಣ್ ಚಂಗಪ್ಪ ಉಪಸ್ಥಿತರಿದ್ದರು.
ಕೃಷಿ ಪಂಪ್ ಸೆಟ್ ಗಳಿಗೆ
ವಿದ್ಯುತ್ ವಿನಾಯಿತಿ ನೀಡಿ
ಕೊಡಗಿನ ಬೆಳೆಗಾರರು ಕೃಷಿ ಚಟುವಟಿಕೆಗಳಿಗೆ ಬಳಸುವ 10 ಎಚ್ ಪಿ ಸಾಮರ್ಥ್ಯದವರೆಗಿನ ಮೋಟಾರ್ ಪಂಪ್ ಗಳಿಗೆ ವಿದ್ಯುತ್ ಬಿಲ್ ನಲ್ಲಿರಿಯಾಯಿತಿ ನೀಡಬೇಕು ಎಂದು ಅಮ್ಮತ್ತಿ ರೈತ ಸಂಘದ ಗೌರವಾಧ್ಯಕ್ಷ ಕಾವಡಿಚಂಡ ಯು. ಗಣಪತಿ ಸರಕಾರವನ್ನು ಒತ್ತಾಯಿಸಿದ್ದಾರೆ.
‘‘ಹಿಂದಿನ ಸರಕಾರದ ಅವಧಿಯಲ್ಲಿಈ ಕುರಿತು ಪ್ರಸ್ತಾಪವಾಗಿದ್ದರೂ ಪ್ರಸ್ತುತ ಸರಕಾರದ ಅವಧಿಯಲ್ಲಿಪಂಚ ಗ್ಯಾರಂಟಿಗಳ ಹೊರತಾಗಿ ಕೃಷಿಕರ ಸಮಸ್ಯೆಗಳಿಗೆ ಆದ್ಯತೆ ಸಿಗುತ್ತಿಲ್ಲ,’’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘‘ಹಲವು ಆರ್ ಟಿಸಿಗಳಲ್ಲಿನಮೂದಾಗಿರುವ ವ್ಯಕ್ತಿಗಳು ಜೀವಂತವಾಗಿದ್ದಾರೆಯೇ ಅಥವಾ ಮೃತಪಟ್ಟಿದ್ದಾರೆಯೇ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ನಾಲ್ಕೆ ೖದು ದಶಕಗಳ ಹಿಂದೆ ಮೃತಪಟ್ಟವರ ಮರಣ ಪ್ರಮಾಣಪತ್ರಗಳು ಲಭ್ಯವಿಲ್ಲದಿರುವುದರಿಂದ ಕಂದಾಯ ದಾಖಲೆಗಳಲ್ಲಿನ ಲೋಪದೋಷಗಳನ್ನು ಸರಿಪಡಿಸಲು ತೊಂದರೆಯಾಗುತ್ತಿದೆ. ಈ ಸಮಸ್ಯೆ ಪರಿಹಾರಕ್ಕೆ ಸರಕಾರ ಅಗತ್ಯ ಕ್ರಮ ಕೈಗೊಳ್ಳಬೇಕು,’’ ಎಂದು ಆಗ್ರಹಿಸಿದರು.
*ಫೋಟೊ ಇದೆ
ಮಡಿಕೇರಿಯಲ್ಲಿನಡೆದ ಸುದ್ದಿಗೋಷ್ಠಿಯಲ್ಲಿಅಮ್ಮತ್ತಿ ರೈತ ಸಂಘದ ಪ್ರಮುಖರು ಮಾತನಾಡಿದರು.