ತನಿಖೆಗೆ ಮಧ್ಯಂತರ ತಡೆ; ಮಾಜಿ ಆಯುಕ್ತಗೆ ತಾತ್ಕಾಲಿಕ ರಿಲೀಫ್ ತನಿಖೆಗೆ ಮಧ್ಯಂತರ ತಡೆ -

Contributed by: shreekanta.akki@timesofindia.com|Vijaya Karnataka•
temporary stay on 843 crore rupee misappropriation case
ಫಾಲೋ- ಅಪ್

..............
ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ 8.43 ಕೋಟಿ ರೂ. ದುರ್ಬಳಕೆ ಹಗರಣ

ತನಿಖೆಗೆ ಮಧ್ಯಂತರ ತಡೆ; ಮಾಜಿ ಆಯುಕ್ತಗೆ ತಾತ್ಕಾಲಿಕ ರಿಲೀಫ್

ವಿಕ ಸುದ್ದಿಲೋಕ ಕೊಪ್ಪಳ

ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿಬೆಳಕಿಗೆ ಬಂದ 8.43 ಕೋಟಿ ರೂ. ದುರ್ಬಳಕೆ ಹಾಗೂ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಗೆ ಧಾರವಾಡ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದ್ದು ಪ್ರಕರಣದ ಪ್ರಮುಖ ಆರೋಪಿ ಮಾಜಿ ಆಯುಕ್ತ ಆರ್ .ಯೋಗಾನಂದ್ ಅವರಿಗೆ ತಾತ್ಕಾಲಿಕ ಮುಕ್ತಿ ಸಿಕ್ಕಂತಾಗಿದೆ.

ಅವರು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯ ವಿಚಾರಣೆ ನ.6ರಂದು ನಡೆದಿದ್ದು, ಮುಂದಿನ ವಿಚಾರಣೆಯವರೆಗೆ ಅವರ ವಿರುದ್ಧದ ತನಿಖಾ ಪ್ರಕ್ರಿಯೆಗೆ ತಡೆ ನೀಡಲಾಗಿದೆ. ಬಡ ಹಾಗೂ ಮಧ್ಯಮ ವರ್ಗದವರಿಗೆ ನಿವೇಶನ ಕೊಡಿಸುವುದಾಗಿ ನಂಬಿಸಿ ಪ್ರಾಧಿಕಾರದ ಅನಧಿಕೃತ ಖಾತೆಗೆ ಹಣ ಜಮೆ ಮಾಡಿಸಿಕೊಂಡಿರುವುದು, ಅಧಿಕೃತ ಖಾತೆಯಿಂದ ಅನಧಿಕೃತ ಖಾತೆಗೆ 5 ಕೋಟಿ ರೂ.ಗಳಿಗೂ ಹೆಚ್ಚು ಹಣ ವರ್ಗಾಯಿಸಿರುವುದು ಪ್ರಕರಣದ ಪ್ರಮುಖ ಆರೋಪಗಳಾಗಿವೆ. ‘ನಿವೇಶನ: 8.43 ಕೋಟಿ ರೂ.ವಂಚನೆ’ ವಿಶೇಷ ವರದಿ, ಆ.16ರಂದು ‘ವಿಜಯ ಕರ್ನಾಟಕ’ದಲ್ಲಿಮೊದಲ ಬಾರಿ ಪ್ರಕಟವಾಗಿತ್ತು.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಕೊಪ್ಪಳ ನಗರ ಠಾಣೆ ಪೊಲೀಸರು ಪ್ರಾಧಿಕಾರದ ಹೊರಗುತ್ತಿಗೆ ನೌಕರ ರವೀಂದ್ರಕುಮಾರ್ , ಆತನ ಪತ್ನಿ ರಮಾ ಹಾಗೂ ಸಹೋದರ ಅನಿಲ್ ಕುಮಾರ್ ಅವರನ್ನು ಬಂಧಿಸಿದ್ದರು. ಯೋಗಾನಂದ್ ಬಂಧನಕ್ಕಾಗಿ ಪೊಲೀಸರು ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳಿಗೆ ತೆರಳಿದ್ದರು. ಅವರು ದೇಶ ಬಿಟ್ಟು ತೆರಳದಂತೆ ಲುಕ್ ಔಟ್ ನೋಟಿಸ್ ಕೂಡ ಜಾರಿಗೊಳಿಸಲಾಗಿತ್ತು. ಅವರು ಈ ನಡುವೆ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಇತ್ತೀಚೆಗೆ ತಿರಸ್ಕರಿಸಿತ್ತು.

ಯೋಗಾನಂದ್ ಪರ ವಕೀಲರು, ‘‘ಎಫ್ ಐಆರ್ ನಲ್ಲಿಅವರ ಹೆಸರು ಇಲ್ಲ. ಹಣದ ವರ್ಗಾವಣೆ ರವೀಂದ್ರಕುಮಾರ್ ಕುಟುಂಬದ ಖಾತೆಗಳಿಗೆ ನಡೆದಿದ್ದು, ಅರ್ಜಿದಾರರ ಖಾತೆಗೆ ಯಾವುದೇ ಹಣ ಜಮೆಯಾಗಿಲ್ಲ. ಘಟನೆ 2026ರಲ್ಲಿನಡೆದಿದ್ದರೆ, ಯೋಗಾನಂದ್ ಅವರನ್ನು 2025ರಲ್ಲೇ ವರ್ಗಾಯಿಸಲಾಗಿತ್ತು,’’ ಎಂದು ವಾದಿಸಿದ್ದಾರೆ. ವಾದ ಆಲಿಸಿದ ನ್ಯಾಯಾಲಯ ಪ್ರಕರಣದ ತನಿಖೆಗೆ ಮಧ್ಯಂತರ ತಡೆ ನೀಡಿದೆ. ಇದು ಕೇವಲ ಮಧ್ಯಂತರ ತಡೆಯಾಗಿದ್ದು, ಯೋಗಾನಂದ್ ಅವರಿಗೆ ಪ್ರಕರಣದಿಂದ ಸಂಪೂರ್ಣ ಮುಕ್ತಿ ದೊರೆತಿಲ್ಲ. ಸರೋಜಮ್ಮ ಬಡಾವಣೆಯಲ್ಲಿ63 ಜನರಿಗೆ ಅನಧಿಕೃತವಾಗಿ ನಿವೇಶನ ಹಂಚಿಕೆ ಮಾಡಿದ ಆರೋಪದಲ್ಲಿಯೂ ಅವರ ಪಾತ್ರದ ದಾಖಲೆಗಳನ್ನು ಪೊಲೀಸರು ಸಿದ್ಧಪಡಿಸುತ್ತಿದ್ದಾರೆ.

................

ಕೋಟ್ ...

ಅಕ್ರಮದ ವಿವರಗಳನ್ನು ಕೋರ್ಟ್ ಗೆ ಸಲ್ಲಿಸಿ ಸ್ಟೇ ತೆರವುಗೊಳಿಸಲಾಗುವುದು. ವಂಚಿಸಿದವರನ್ನು ಸುಮ್ಮನೆ ಬಿಡುವುದಿಲ್ಲ.

- ಡಾ.ಸುರೇಶ ಇಟ್ನಾಳ್ ಜಿಲ್ಲಾಧಿಕಾರಿ, ಕೊಪ್ಪಳ

................

ಯೋಗಾನಂದ್ ಅವರ ಪಾತ್ರವನ್ನು ಹೈಕೋರ್ಟ್ ಗೆ ಮನವರಿಕೆ ಮಾಡಿ, ತನಿಖೆಯ ಮೇಲಿನ ತಡೆ ತೆರವುಗೊಳಿಸಲು ಸಿದ್ಧತೆ ನಡೆದಿದೆ.

- ಸಾಹಿಲ್ ಬಾಗ್ಲಾಎಸ್ಪಿ, ಕೊಪ್ಪಳ