ಇರಾನ್

Contributed by: shree.vidya@timesofindia.com|Vijaya Karnataka•
tough decisions on american assets in iran
ಅಮೆರಿಕದ ವಿರುದ್ಧ ಇರಾನ್ ಕಿಡಿ

ಇರಾನ್ ವಿರುದ್ಧ ಅಮೆರಿಕ ಅನುಸರಿಸುತ್ತಿರುವ ಕಠಿಣ ನಿಲುವು ಮತ್ತು ಆರ್ಥಿಕ ನಿರ್ಬಂಧಗಳ ಕುರಿತು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ವಾಷಿಂಗ್ಟನ್ ನ ಅವಾಸ್ತವಿಕ ನಿರೀಕ್ಷೆಗಳು ಮತ್ತು ಭ್ರಮೆಗಳು ಅಮೆರಿಕದ ವಿದೇಶಾಂಗ ನೀತಿಗಳ ವೈಫಲ್ಯಕ್ಕೆ ಕಾರಣವಾಗಿವೆ ಎಂದು ಅವರು ಟೀಕಿಸಿದ್ದಾರೆ. ಅಮೆರಿಕದ ನಿಲುವು ಕೇವಲ ಅಮಾನವೀಯ ಮಾತ್ರವಲ್ಲದೆ, ತಪ್ಪು ಕಲ್ಪನೆಗಳನ್ನು ಆಧರಿಸಿದೆ. ಇದೇ ಕಾರಣಕ್ಕೆ ಅಮೆರಿಕದ ಕಾರ್ಯತಂತ್ರಗಳು ವಿಫಲವಾಗುತ್ತಿವೆ ಎಂದು ಅರಾಗ್ಚಿ ಅಭಿಪ್ರಾಯಪಟ್ಟಿದ್ದಾರೆ. ಮತ್ತೊಂದೆಡೆ, ಇರಾನ್ ಸಂಘರ್ಷದ ವಿಚಾರದಲ್ಲಿಅಮೆರಿಕ ಅಧ್ಯಕ್ಷ ಡೊನಾಲ್ಡ… ಟ್ರಂಪ್ ’ಮೂರನೇ ಆಯ್ಕೆ’ಯಾಗಿ ಆರ್ಥಿಕ ಒತ್ತಡವನ್ನು ಮತ್ತಷ್ಟು ತೀವ್ರಗೊಳಿಸಲು ನಿರ್ಧರಿಸಿದ್ದಾರೆ ಎಂದು ಆಕ್ಸಿಯೋಸ್ ವರದಿ ಮಾಡಿದೆ.
ಫೈಲ್ ನೇಮ್ - ಇರಾನ್