(ಬೆಂಗಳೂರಿಗೆ) ಗುಮಟಾಪುರದಲ್ಲಿಸೌಹಾರ್ದ ಗೊರೆ ಹಬ್ಬ

Contributed by: uttallimahesh@gmail.com|Vijaya Karnataka•
unity gora festival in gumtapura foreigners participate in the festivities
ಗುಮಟಾಪುರದಲ್ಲಿಸೌಹಾರ್ದ ಗೊರೆ ಹಬ್ಬ

-ಸಗಣಿಯಲ್ಲಿಹೊಡೆದಾಡಿ ಸಂಭ್ರಮ
-ಭಾಗಿಯಾದ ವಿದೇಶಿಗರು

ವಿಕ ಸುದ್ದಿಲೋಕ ಚಾಮರಾಜನಗರ

ಜಿಲ್ಲೆಗೆ ಸಮೀಪದಲ್ಲಿರುವ ತಮಿಳುನಾಡಿನ ತಾಳವಾಡಿ ತಾಲೂಕಿನ ಗುಮಟಾಪುರದಲ್ಲಿದೀಪಾವಳಿಯ ಬಲಿಪಾಡ್ಯಮಿಯ ಮಾರನೆಯ ದಿನ ನಡೆಯುವ ಸಗಣಿ ಎರೆಚಾಟದ ಪ್ರಸಿದ್ಧ ಗೊರೆ ಹಬ್ಬ ಬುಧವಾರ ಸಂಭ್ರಮದಿಂದ ನೆರವೇರಿತು.

ಗ್ರಾಮದ ಈ ಸೌಹಾರ್ದ ಸಾರುವ ಈ ಹಬ್ಬದಲ್ಲಿವಿದೇಶಿಗರು ಪಾಲ್ಗೊಂಡಿದ್ದರು ಎಂಬುದು ವಿಶೇಷ. ಗುಮಟಾಪುರ ಗ್ರಾಮ ತಮಿಳುನಾಡಿಗೆ ಸೇರಿದ್ದರೂ ಕನ್ನಡಿಗರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬಲಿಪಾಡ್ಯಮಿಯ ಮಾರನೇ ದಿನ ಈ ಗೊರೆ ಹಬ್ಬ ಇಲ್ಲಿತಲೆತಲಾಂತರದಿಂದಲೂ ನಡೆದು ಬಂದಿದೆ ಎಂಬುದು ವಿಶೇಷ.

ಅದರಂತೆ ಬುಧವಾರ ಗ್ರಾಮದ ಕೆರೆ ಪಕ್ಕದಲ್ಲಿರುವ ಕಾರಪ್ಪ ದೇವಸ್ಥಾನದಲ್ಲಿಪೂಜೆ ಸಲ್ಲಿಸಿ, ಕೆರೆಯಿಂದ ಕೊಂಡಕ್ಕಾರ ಎಂಬ ವೇಷ ಧರಿಸಿದ ಇಬ್ಬರನ್ನು ಕತ್ತೆಯ ಮೇಲೆ ಕೂರಿಸಿಕೊಂಡು ಸಗಣಿ ಗುಡ್ಡೆ ಹಾಕಿರುವ ಜಾಗಕ್ಕೆ ಮೆರವಣಿಗೆಯಲ್ಲಿಕರೆತರಲಾಯಿತು. ಕೊಂಡಕ್ಕಾರ ಕೃತಕ ಗಡ್ಡ ಮೀಸೆ ಧರಿಸಿ , ನಗು ತಮಾಷೆಯ ನಡುವೆ ಬೈದಾಟದೊಂದಿಗೆ ಮೆರವಣಿಗೆ ಸಾಗಿತು.

ನಂತರ ಗ್ರಾಮದಲ್ಲಿರುವ ಗೋವುಗಳಿಂದ ಕಲೆ ಹಾಕಿದ ಸಗಣಿಯನ್ನು ತಂದು ದೇವಸ್ಥಾನದ ಬಳಿ ಸುರಿದಿದ್ದರು. ಮಕ್ಕಳು ಬೇರೆ ಮನೆಗಳಿಂದ ಬೇಡಿ ತಂದ ಎಣ್ಣೆಯಿಂದ ಪೂಜೆ ಸಲ್ಲಿಸಲಾಯಿತು.

ನಂತರ ಗ್ರಾಮದ ಬೀರೇಶ್ವರ ದೇವಾಲಯದ ಸಮೀಪದಲ್ಲಿಸಗಣಿ ರಾಶಿ ಹಾಕಿರುವ ಜಾಗದಲ್ಲಿಗ್ರಾಮಸ್ಥರೆಲ್ಲಸಂಜೆ ಸೇರಿದರು. ಪುರುಷರು ಚಡ್ಡಿ ಧರಿಸಿ, ಬರಿಮೈಯಲ್ಲಿಸಗಣಿಯಲ್ಲಿಆಟವಾಡಲು ಸಿದ್ದರಾದರು. ಸಗಣಿ ರಾಶಿಗೆ ಪೂಜೆ ಸಲ್ಲಿಸಿದ ಬಳಿಕ ಸಗಣಿ ಎರಚಾಟ ಶುರುವಾಯಿತು. ದೊಡ್ಡ ದೊಡ್ಡ ಸಗಣಿ ಉಂಡೆಗಳನ್ನು ಪರಸ್ಪರ ಎರಚಾಡಿದರು. ಈ ವೇಳೆ ವಿದೇಶಿಗನು ಸಹ ಪಾಲ್ಗೊಂಡು ಸೌಹಾರ್ದ ಮೆರೆದರು. ನೂರಾರು ಮಂದಿ ಒಬ್ಬರ ಮೇಲೊಬ್ಬರು ಸæಗಣಿ ಎತ್ತಿಹಾಕುತ್ತಾ ಮೋಜು ಅನುಭವಿಸಿದರು.

ಗೊರೆಹಬ್ಬದ ಸಂದರ್ಭದಲ್ಲಿಗ್ರಾಮದ ಜನರ ಬಂಧುಗಳು, ಅಕ್ಕಪಕ್ಕದ ಗ್ರಾಮಸ್ಥರು ಸಾವಿರಾರು ಸಂಖ್ಯೆಯಲ್ಲಿನೆರೆದಿದ್ದರು.

=====

ಗೊರೆ ಹಬ್ಬದ ಹಿನ್ನೆಲೆ

ನೂರಾರು ವರ್ಷಗಳ ಹಿಂದೆ ಗುಮಟಾಪುರದಲ್ಲಿದೇವರಗುಡ್ಡನೊಬ್ಬ ಗೌಡರಮನೆಯಲ್ಲಿಕೆಲಸಕ್ಕಿರುತ್ತಾನೆ. ಆತ ಮೃತನಾದ ನಂತರ ಆತನ ಜೋಳಿಗೆಯನ್ನು ತಿಪ್ಪೆಗೆ ಎಸೆಯಲಾಗುತ್ತದೆ. ಅದಾದ ನಂತರ ಗೌಡನ ಎತ್ತಿನಗಾಡಿಯು ಮಾರ್ಗದಲ್ಲಿಸಾಗುವಾಗ ಗಾಡಿಯ ಚಕ್ರ ಆ ಜೋಳಿಗೆ ಮೇಲೆ ಹರಿಯುತ್ತದೆ. ಅಲ್ಲಿದ್ದ ಲಿಂಗರೂಪದ ಕಲ್ಲಿನಿಂದ ರಕ್ತ ಬರುತ್ತದೆ. ಅಂದು ರಾತ್ರಿ ದೇವರು ಕನಸಿನಲ್ಲಿಬಂದು ಈ ದೋಷ ಪರಿಹಾರಕ್ಕಾಗಿ ಗುಡಿ ಕಟ್ಟಿಸಬೇಕು. ದೀಪಾವಳಿ ಹಬ್ಬದ ಮರುದಿನ ಸಗಣಿ ಹಬ್ಬ ಅಚರಿಸಬೇಕು ಎಂದು ಗೌಡನಿಗೆ ಹೇಳಿತಂತೆ.

ಅದರಂತೆ ನಂತರದ ವರ್ಷದಿಂದಲೇ ಈ ಆಚರಣೆ ಶುರುವಾಯಿತು ಎಂಬ ಪ್ರತೀತಿ ಇದೆ.

=====

ಫೋಟೊಗಳಿವೆ

ಚಾಮರಾಜನಗರದ ತಾಳವಾಡಿ ಸಮೀಪವಿರುವ ಗುಮಟಾಪುರ ಗ್ರಾಮದಲ್ಲಿನಡೆದ ಗೊರೆ ಹಬ್ಬ

ಹಬ್ಬದಲ್ಲಿಭಾಗವಹಿಸಿದ್ದ ವಿದೇಶಿ ಪ್ರಜೆಗಳು

ಕತ್ತೆ ಮೇಲೆ ಕೂರಿಸಿ ಮೆರವಣಿಗೆ