ವಿಕ ಸುದ್ದಿಲೋಕ ಭದ್ರಾವತಿವಿಐಎಸ್ ಎಲ್ ಕಾರ್ಖಾನೆಯಲ್ಲಿಕೇಂದ್ರ ವಿಜಿಲೆನ್ಸ್ ಆಯೋಗ ಹಾಗೂ ಕಾರ್ಪೊರೇಟ್ ವಿಜಿಲೆನ್ಸ್ ಸೆಲ್ ನ ನಿರ್ದೇಶನದಂತೆ ‘ಸಮೃದ್ಧಿಗಾಗಿ ಪ್ರಾಮಾಣಿಕತೆ ’ ಧ್ಯೇಯವಾಕ್ಯದಡಿ ವಿಜಿಲೆನ್ಸ್ ಜಾಗೃತಿ ಸಪ್ತಾಹ-2026 ಆಚರಿಸಲಾಯಿತು.
ಇಸ್ಪಾತ್ ಭವನದ ಮುಂಭಾಗದಲ್ಲಿನಡೆದ ಉದ್ಘಾಟನಾ ಸಮಾರಂಭದಲ್ಲಿರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಮಂತ್ರಿ ಹಾಗೂ ಕೇಂದ್ರ ವಿಜಿಲೆನ್ಸ್ ಆಯುಕ್ತರಿಂದ ಬಂದ ಸಂದೇಶಗಳನ್ನು ಕ್ರಮವಾಗಿ ಮಹಾಪ್ರಬಂಧಕ ಎಲ್ . ಸುಂದರ ವಡಿವೇಲು, ಸಹಾಯಕ ಮಹಾಪ್ರಬಂಧಕ ವಿಕಾಸ್ ಬಸೇರ್ , ಮಹಾಪ್ರಬಂಧಕರಾದ ರಘುನಾಥ್ ಅಷ್ಟಪುತ್ರೆ ಹಾಗೂ ಅನಿಲ್ ರೆಡ್ಡಿ ವಾಚಿಸಿದರು.
ಪ್ರಭಾರ ಕಾರ್ಯಪಾಲಕ ನಿರ್ದೇಶಕ ಬಿ.ವಿಶ್ವನಾಥ್ ಅವರು ಸಮೃದ್ಧ ರಾಷ್ಟ್ರ ನಿರ್ಮಾಣದಲ್ಲಿಪ್ರಾಮಾಣಿಕತೆ ಮತ್ತು ಸಮಗ್ರತೆಯ ಮಹತ್ವವನ್ನು ಹೇಳಿದರು. ಮುಖ್ಯ ಮಹಾಪ್ರಬಂಧಕ ಪ್ರಮೋದ್ ಕುಮಾರ್ ಸಿಂಗ್ , ಅಧಿಕಾರಿಗಳ ಸಂಘದ ಅಧ್ಯಕ್ಷ ಅಜಯ್ ಡಿ. ಸೋಂಕುವಾರ್ ಹಾಗೂ ಕಾರ್ಮಿಕರ ಸಂಘದ ಅಧ್ಯಕ್ಷ ಅಮೃತ್ ಕುಮಾರ್ ಅವರು ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ಸರ್ ಎಂ. ವಿಶ್ವೇಶ್ವರಯ್ಯ ಅವರ ಭಾವಚಿತ್ರಗಳಿಗೆ ಗೌರವ ನಮನ ಸಲ್ಲಿಸಿದರು.
ವಿಜಿಲೆನ್ಸ್ ಪ್ರತಿಜ್ಞೆಯನ್ನು ಅಧಿಕಾರಿಗಳಾದ ಇಳಯರಾಜ, ಧನಲಕ್ಷ್ಮಿ ಹಾಗೂ ರವಿಕಿರಣ್ ಉಪಾಧ್ಯ ಬೋಧಿಸಿದರು.
ಉದ್ಯೋಗಿಗಳಿಗಾಗಿ ಪೋಸ್ಟರ್ ವಿನ್ಯಾಸ, ಪ್ರಬಂಧ ಬರವಣಿಗೆ, ರಂಗೋಲಿ ಹಾಗೂ ರಸಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳಿಗಾಗಿ ಚಿತ್ರ ಬಿಡಿಸುವುದು, ಪ್ರಬಂಧ ಬರವಣಿಗೆ, ಭಾಷಣ ಹಾಗೂ ರಸಪ್ರಶ್ನೆ ಸ್ಪರ್ಧೆಗಳನ್ನು ನಡೆಸಲಾಯಿತು. ಭದ್ರಾ ಅತಿಥಿ ಗೃಹದಲ್ಲಿಸಮಾರೋಪ ಸಮಾರಂಭ ನಡೆಯಿತು.