ವಿಕ ಸುದ್ದಿಲೋಕ ನೆಲ್ಯಾಡಿಉದನೆ ಸಂತ ತೋಮಸರ ಫೋರೋಣ ಚರ್ಚ್ನಲ್ಲಿಕೆಟೆಕಿಸಂ ಶಿಕ್ಷಕರ ದಿನಾಚರಣೆ ಸಂಭ್ರಮದಿಂದ ನಡೆಯಿತು.
ಕೆಟೆಕಿಸಂ ಶಿಕ್ಷಕರು ಮಕ್ಕಳಿಗೆ ಕ್ರೈಸ್ತ ಧಾರ್ಮಿಕ ಶಿಕ್ಷಣ ನೀಡುವ ಮೂಲಕ ಸಮಾಜದಲ್ಲಿನಂಬಿಕೆ, ಪ್ರೀತಿ, ತ್ಯಾಗ ಹಾಗೂ ನೈತಿಕ ಮೌಲ್ಯಗಳನ್ನು ಬೆಳೆಸುವಲ್ಲಿಸಲ್ಲಿಸುತ್ತಿರುವ ಅಮೂಲ್ಯ ಸೇವೆಯನ್ನು ಸ್ಮರಿಸಲಾಯಿತು. ಶಿಕ್ಷಕರ ಸಮರ್ಪಣೆ ಮತ್ತು ನಿಸ್ವಾರ್ಥ ಸೇವೆಯನ್ನು ಪ್ರಶಂಸಿಸಿ ಗೌರವ ಸಲ್ಲಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಚರ್ಚ್ನ ವಿಕಾರ್ ರೆ.ಫಾ.ಫ್ರಾನ್ಸಿಸ್ ಒಡಂಪಳ್ಳಿ ಮಾತನಾಡಿ, ಮಕ್ಕಳಲ್ಲಿಕ್ರೈಸ್ತ ಮೌಲ್ಯಗಳು, ನಂಬಿಕೆ, ಪ್ರೀತಿ ಹಾಗೂ ನೈತಿಕ ಗುಣಗಳನ್ನು ಬೆಳೆಸುವಲ್ಲಿಕೆಟೆಕಿಸಂ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಶಿಕ್ಷಕರು ಮಕ್ಕಳ ಭವಿಷ್ಯ ರೂಪಿಸುವುದರ ಜತೆಗೆ ಉತ್ತಮ ಸಂಸ್ಕಾರ ಮತ್ತು ಧಾರ್ಮಿಕ ಪ್ರಜ್ಞೆಯನ್ನು ಬೆಳೆಸುವ ಮಹತ್ತರ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ರೆ.ಫಾ.ಸೂರಜ್ ಕೋಟ್ಟಾಯಿಲ್ , ಮುಖ್ಯಗುರು ಸನ್ನಿ ಕುನ್ನತೇಲ್ , ಪಿಟಿಎ ಅಧ್ಯಕ್ಷ ಸುನಿಲ್ ಜೋಸೆಫ್ , ಟ್ರಸ್ಟಿ ಜಾನ್ಸನ್ ಎಂಬ್ರಾಂಡಿವಯಲಿಲ್ , ಕೆಟೆಕಿಸಂ ಶಿಕ್ಷಕರು ಉಪಸ್ಥಿತರಿದ್ದರು. ಸಯನ ತೋಟ್ಟುಪುರಂ ಕಾರ್ಯಕ್ರಮ ನಿರೂಪಿಸಿದರು.
ಫೋಟೋ :09ಕೆಎನ್ ಸುನಿಲ್
ಉದನೆ ಸಂತ ತೋಮಸರ ಫೋರೋಣ ಚರ್ಚ್ನಲ್ಲಿಕೆಟೆಕಿಸಂ ಶಿಕ್ಷಕರ ದಿನಾಚರಣೆ ನಡೆಯಿತು.