ದುರ್ಬಲರಿಗೆ ಸಹಾಯ ಮಾಡಿ

Contributed by: praveendalabhanjan91@gmail.com|Vijaya Karnataka•
encourage helping the weak
ದುರ್ಬಲರಿಗೆ ಸಹಾಯ ಮಾಡಿ

ವಿಕ ಸುದ್ದಿಲೋಕ ಗಂಗಾವತಿ
ಸಮಾಜದಲ್ಲಿರುವ ದುರ್ಬಲರಿಗೆ ಸಹಾಯ ಮಾಡಬೇಕು ಎಂದು ವಕ್ತಾರ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ನಗರದಲ್ಲಿಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ( ಎಬಿವಿಪಿ ) ಗಂಗಾವತಿ ಘಟಕದಿಂದ ನಡೆದ ಶೋಭಾಯಾತ್ರೆ ಕಾರ್ಯಕ್ರಮದಲ್ಲಿಮಾತನಾಡಿದರು.

ರಾಷ್ಟ್ರ ಸೇವೆ ಕೇವಲ ಗಡಿ ಕಾಯುವುದಲ್ಲ. ಪ್ರಾಮಾಣಿಕವಾಗಿ ವಿದ್ಯಾಭ್ಯಾಸ, ಉತ್ತಮ ನಾಗರಿಕನಾಗುವುದು, ಕಾನೂನು ಪಾಲಿಸುವುದು,

ಪರಿಸರ ರಕ್ಷಿಸುವುದು, ಸಮಾಜದಲ್ಲಿರುವ ದುರ್ಬಲರಿಗೆ ಸಹಾಯ ಮಾಡುವುದು, ಭ್ರಷ್ಟಾಚಾರ ವಿರೋಧಿಸುವುದು ರಾಷ್ಟ್ರ ಸೇವೆ ಎಂದರು.

ಶೋಭಾಯಾತ್ರೆಗೆ ಕಲ್ಮಠ ಶ್ರೀಗಳು ಚಾಲನೆ ನೀಡಿದರು. ವಿಭಾಗ ಸಂಘಟನಾ ಕಾರ್ಯದರ್ಶಿ ಸಚಿನ್ ಕುಳಗೇರಿ, ಎಬಿವಿಪಿ ಸೇವಾ ರಾಜ್ಯ ಸಂಚಾಲಕರು ಅಭಿಷೇಕ್ ಹಿರೇಮಠ್ ,

ನಗರ ಅಧ್ಯಕ್ಷೆ ಅರ್ಚನಾ, ನಗರ ಕಾರ್ಯದರ್ಶಿ ಈಶ್ವರ್ ಇದ್ದರು.

=============

05 ಜಿವಿಟಿ 10

ಗಂಗಾವತಿಯಲ್ಲಿನಡೆದ ರಾಷ್ಟ್ರಗೀತೆ ವಂದೇ ಮಾತರಂ ರಚನೆಯ 150ನೇ ವರ್ಷಾಚರಣೆ ಕಾರ್ಯಕ್ರಮ ನಡೆಯಿತು.