ರೈತರಿಂದ ಪತ್ರ ಚಳವಳಿ

Contributed by: vksrpatna@gmail.com|Vijaya Karnataka•
farmers protest for sugarcane price fixation
ವಿಕ ಸುದ್ದಿಲೋಕ ಶ್ರೀರಂಗಪಟ್ಟಣ

ಟನ್ ಕಬ್ಬಿಗೆ 5500 ರೂ. ಬೆಲೆ ನಿಗದಿ ಮಾಡುವಂತೆ ಒತ್ತಾಯಿಸಿ ಭೂಮಿತಾಯಿ ಹೋರಾಟ ಸಮಿತಿ ಕಾರ್ಯಕರ್ತರು ಶ್ರೀರಂಗಪಟ್ಟಣದಲ್ಲಿಗುರುವಾರ ಪತ್ರ ಚಳವಳಿ ನಡೆಸಿದರು.
ಪಟ್ಟಣದ ಪೋಸ್ಟ್ ಆಫೀಸ್ ಬಳಿ ಜಮಾವಣೆಗೊಂಡ ಪ್ರತಿಭಟನಕಾರರು ಮುಖ್ಯಮಂತ್ರಿ, ಜಿಲ್ಲಾಉಸ್ತುವಾರಿ ಮಂತ್ರಿ, ಕೃಷಿ ಮಂತ್ರಿ, ಜಿಲ್ಲೆಯ ಶಾಸಕರಿಗೆ ಪತ್ರ ಕಳುಹಿಸುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.

ರೈತ ನಾಯಕ ಕೆ.ಎಸ್ . ನಂಜಂಡೇಗೌಡ ಮಾತನಾಡಿ, ‘‘ರಾಜ್ಯದಲ್ಲಿಕಬ್ಬು ಬೆಳೆಗಾರರು ಬೀದಿಗೆ ಬಂದು ಹೋರಾಟ ಮಾಡುತ್ತಿದ್ದಾರೆ. ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರ ಪರಸ್ಪರ ಪ್ರತ್ಯಾರೋಪ ಮಾಡುತ್ತಿವೆ. ರೈತರಿಗೆ ಯಾವ ಸರಕಾರಗಳು ಸ್ಪಂದಿಸುತ್ತಿಲ್ಲ. ಪರಸ್ಪರ ಎರಡೂ ಸರಕಾರಗಳು ರೈತರಿಗೆ ಅನ್ಯಾಯ ಮಾಡುತ್ತಿವೆ,’’ ಎಂದು ದೂರಿದರು.

‘‘ಬೆಳಗಾವಿಯ ಜಿಲ್ಲಾಉಸ್ತುವಾರಿ ಮಂತ್ರಿ ಹಾಗೂ ಅಲ್ಲಿನ ಜಿಲ್ಲಾಧಿಕಾರಿ ಆ ಜಿಲ್ಲೆಯ ಕಬ್ಬಿಗೆ ಕಡುಗೂಲಿ ಹಾಗೂ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡುವ ಬಾಡಿಗೆ ಹಣ ಕಳೆದು ಟನ್ ಕಬ್ಬಿಗೆ 3600 ಬೆಲೆ ನಿಗಧಿ ಮಾಡಿದ್ದಾರೆ. ಮಂಡ್ಯ ಜಿಲ್ಲೆಯ ಜಿಲ್ಲಾಉಸ್ತುವಾರಿ ಮಂತ್ರಿಗಳು ಇದುವರೆಗೆ ಸಭೆ ನಡೆಸಿಲ್ಲ. ಮಂಡ್ಯ ಜಿಲ್ಲೆಯ ರೈತರ ಸಭೆ ನಡೆಸಬೇಕು. ಕಬ್ಬಿಗೆ ಬೆಲೆ ನಿಗಧಿ ಮಾಡಬೇಕು,’’ ಎಂದು ಒತ್ತಾಯಿಸಿದರು.

ಸಮಿತಿ ಅಧ್ಯಕ್ಷ ಬಿ.ಸಿ ಕೃಷ್ನೇಗೌಡ ಮಾತನಾಡಿ, ‘‘æೕಂದ್ರ ಸರಕಾರ ಹಾಗೂ ರಾಜ್ಯ ಸರಕಾರಗಳು ಕಬ್ಬಿಗೆ ಬೆಂಬಲ ಬೆಲೆ ನಿಗಧಿ ಮಾಡುವಲ್ಲಿತಾರತಮ್ಯ ಮಾಡುತ್ತಿವೆ ಒಂದೊಂದು ಜಿಲ್ಲೆಯಲ್ಲಿಕಬ್ಬಿಗೆ ನೀಡುತ್ತಿರುಗವ ದರದಲ್ಲಿವ್ಯತ್ಯಾಸವಿದೆ. ಏಕರೂಪದ ಬೆಲೆ ನಿಗಧಿ ಮಾಡಬೇಕು ರೈತರ ನೆರವಿಗೆ ಸರಕಾರ ಧಾವಿಸಬೇಕು,’’ ಎಂದು ಆಗ್ರಹಿಸಿದರು. ಹುಂಡವಾಡಿ ಮಹದೇವು,ರಾಂಪುರ ಮಹದೇವು, ರಾಮಕೃಷ್ಣ, ಕೆಂಪೇಗೌಡ, ನಿಂಗೇಗೌಡ ಸೇರಿದಂತೆ ನಾನಾ ಗ್ರಾಮಗಳ ರೈತರು ಹಾಜರಿದ್ದರು.

ಚಿತ್ರಶೀರ್ಷಿಕೆ.

ಎಂಡಿವೈ12ಎಸ್ ಆರ್ ಪಿ2.