ಜೆನ್ ಜಿ- ಎಮ್ .ಆರ್ .ಸಂಗೀತಾ

Contributed by: prema.venkatagiri@timesgroup.c|Vijaya Karnataka•
future india exploring development and humanity
ಭವಿಷ್ಯದ ಭಾರತವು ಎಲ್ಲೋ ಹುಟ್ಟುವಂಥದ್ದಲ್ಲ. ಅದು ನಮ್ಮ ಆಲೋಚನೆಗಳು, ಕಾರ್ಯಗಳು ಹಾಗೂ ಜವಾಬ್ದಾರಿಗಳ ಮೂಲಕ ಹುಟ್ಟುವಂತಹುದು.

ಆಕಾಶ ಮುಟ್ಟುವಂತಿರುವ ಕಟ್ಟಡಗಳು, ಕೃತಕ ಬುದ್ಧಿಮತ್ತೆಯೊಂದಿಗೆ ಹೆಚ್ಚೆ ಹಾಕುತ್ತಿರುವ ನಗರಗಳು, ಬಾಹ್ಯಾಕಾಶದತ್ತ ಸಾಗುವ ರಾಕೆಟ್ ಗಳು, ಜಗತ್ತಿನ ಎಲ್ಲೆಡೆ ತಮ್ಮ ಛಾಪು ಮೂಡಿಸುತ್ತಿರುವ ಯುವಸಮುದಾಯ ಇದು ಕೇವಲ ಕನಸಲ್ಲ. ಇದು ನಾವು ನಿರ್ಮಿಸುತ್ತಿರುವ ಭವಿಷ್ಯದ ಭಾರತ . ಆದರೆ, ನಾವಿಲ್ಲಿಪ್ರಶ್ನೆಯೊಂದನ್ನು ಕೇಳಿಕೊಳ್ಳಬೇಕಿದೆ. ತಂತ್ರಜ್ಞಾನಭರಿತ, ಆರ್ಥಿಕವಾಗಿ ಬಲಿಷ್ಠ ರಾಷ್ಟ್ರ ನಿರ್ಮಾಣ ಬಯಸುತ್ತೇವೆಯೇ ಅಥವಾ ಅಭಿವೃದ್ಧಿ ಜತೆಗೆ ಮಾನವೀಯತೆ, ಸಮಾನತೆಯ ಆಶಯಗಳನ್ನು ಎತ್ತಿಹಿಡಿಯುವ ರಾಷ್ಟ್ರ ನಿರ್ಮಾಣ ಬಯಸುತ್ತೇವೆಯೇ ಎಂಬುದು ಮುಖ್ಯ.
ಭವಿಷ್ಯದ ಭಾರತವೆಂದರೆ ಕೇವಲ ಎತ್ತರದ ಕಟ್ಟಡಗಳು, ವೇಗದ ತಂತ್ರಜ್ಞಾನವಲ್ಲ. ಎತ್ತರದ ಚಿಂತನೆಗಳು ಮತ್ತು ವಿಶಾಲ ಹೃದಯಗಳ ಭಾರತ. ಸ್ವಚ್ಛವಾದ ಪರಿಸರ, ಸುಶಿಕ್ಷಿತ ಸಮಾಜ, ಸಮಾನ ಅವಕಾಶಗಳು ಹಾಗೂ ಭ್ರಷ್ಟಾಚಾರ ಮುಕ್ತ ಭಾರತವು ಅಭಿವೃದ್ಧಿಯ ಭಾಗ. ಪ್ರಕೃತಿಯನ್ನು ಕಳೆದುಕೊಂಡು ಕಟ್ಟುವ ಭವಿಷ್ಯ ಎಂದಿಗೂ ಪರಿಪೂರ್ಣವಲ್ಲ. ಯುಸಮುದಾಯ ಜವಾಬ್ದಾರಿಯ ನಡೆ ಭಾರತದ ಭವಿಷ್ಯದ ದಿಕ್ಕು ಬದಲಿಸುತ್ತದೆ.

- ಎಂ.ಆರ್ .ಸಂಗೀತಾ, ದ್ವಿತೀಯ ಬಿಎ, ಡಿವಿಎಸ್ ಕಲಾ ಮತ್ತು ವಿಜ್ಞಾನ ಕಾಲೇಜು, ಶಿವಮೊಗ್ಗ.