58 ಕೋಟಿ ರೂ. ವೆಚ್ಚದಲ್ಲಿಅತ್ಯಾಧುನಿಕ ಕೇಂದ್ರ ಬಸ್ ನಿಲ್ದಾಣ

Contributed by: bhrahmanand.arali@timesofindia.com|Vijaya Karnataka•
modern central bus terminal at a cost of 58 crores
ಚಿತ್ರ: 12ಜಿಎಲ್ ಬಿ8

***
ಕೆಕೆಆರ್ ಟಿಸಿ ಅಧ್ಯಕ್ಷ ಅರುಣಕುಮಾರ ಎಂ.ವೈ.ಪಾಟೀಲ್ ಮಾಹಿತಿ | ಅಧ್ಯಕ್ಷರಾಗಿ ಒಂದು ವರ್ಷ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿಸುದ್ದಿಗೋಷ್ಠಿ

58 ಕೋಟಿ ರೂ. ವೆಚ್ಚದಲ್ಲಿಅತ್ಯಾಧುನಿಕ ಕೇಂದ್ರ ಬಸ್ ನಿಲ್ದಾಣ

ವಿಕ ಸುದ್ದಿಲೋಕ ಕಲಬುರಗಿ

ನಗರದ ಹಳೆಯ ಕೇಂದ್ರ ಬಸ್ ನಿಲ್ದಾಣವನ್ನು ಕೆಡವಿ 58 ಕೋಟಿ ವೆಚ್ಚದಲ್ಲಿಅತ್ಯಾಧುನಿಕ ನಿಲ್ದಾಣ ನಿರ್ಮಿಸುವ ಪ್ರಸ್ತಾವನೆಯನ್ನೂ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗಿದ್ದು, ಶೀಘ್ರ ಒಪ್ಪಿಗೆ ಸಿಗಬಹುದು ಎಂದು ಕೆಕೆಆರ್ ಟಿಸಿ ಅಧ್ಯಕ್ಷ ಅರುಣಕುಮಾರ ಎಂ.ವೈ.ಪಾಟೀಲ್ ಹೇಳಿದರು.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ (ಕೆಕೆಆರ್ ಟಿಸಿ) ಅಧ್ಯಕ್ಷರಾಗಿ ಒಂದು ವರ್ಷ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿನಗರದ ಕೆಕೆಆರ್ ಟಿಸಿ ಕಚೇರಿಯಲ್ಲಿನಿಗಮದ ಸಾಧನೆ ಹಾಗೂ ಮುಂದಿನ ಅಭಿವೃದ್ಧಿ ಯೋಜನೆಗಳ ಕುರಿತು ಮಾತನಾಡಿದರು.

ಸುಮಾರು 50 ವರ್ಷಗಳಷ್ಟು ಹಳೆಯದಾದ ಕೇಂದ್ರ ಬಸ್ ನಿಲ್ದಾಣವನ್ನು ಕೆಡವಿ 58 ಕೋಟಿ ವೆಚ್ಚದಲ್ಲಿಆಧುನಿಕ ಸೌಲಭ್ಯಗಳಿರುವ ನೂತನ ಬಸ್ ನಿಲ್ದಾಣ ಪುನರ್ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಈ ಸಂಬಂಧ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇನ್ನು ನಿಗಮದ ಹಳೆಯ ಕೇಂದ್ರ ಕಚೇರಿಯ ಕಟ್ಟಡವನ್ನು ನೆಲಸಮಗೊಳಿಸಲಾಗಿದ್ದು, 18ರಿಂದ 20 ಕೋಟಿ ವೆಚ್ಚದಲ್ಲಿಹೊಸ ಕಚೇರಿ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.

ರಾಜ್ಯ ಸರಕಾರ ಹಾಗೂ ಕೆಕೆಆರ್ ಡಿಬಿ ಅನುದಾನದಡಿ 400 ಹೊಸ ಬಸ್ ಗಳನ್ನು ಖರೀದಿಸಲು ಸಿದ್ಧತೆ ನಡೆಸಲಾಗಿದ್ದು, ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಮುಂಬರುವ ಕೆಲವು ತಿಂಗಳಲ್ಲಿಹೊಸ ಬಸ್ ಗಳು ರಸ್ತೆಗಿಳಿಯಲಿವೆ. ನಿಗಮದಲ್ಲಿಖಾಲಿ ಇರುವ 3000 ಹುದ್ದೆಗಳನ್ನು ಭರ್ತಿ ಮಾಡಲು ಆರ್ಥಿಕ ಇಲಾಖೆಗೆ ಪತ್ರ ಬರೆಯಲಾಗಿದೆ. ನೇಮಕ ಪ್ರಕ್ರಿಯೆ ಶೀಘ್ರ ಆರಂಭವಾಗಲಿದೆ ಎಂದರು.

ಬಾಕ್ಸ್ ...

ವಾಡಿ, ಅಫಜಲಪುರದಲ್ಲೂಹೊಸ ಬಸ್ ನಿಲ್ದಾಣ

ವಾಡಿಯಲ್ಲಿಸಚಿವ ಪ್ರಿಯಾಂಕ್ ಖರ್ಗೆ ಅವರ ಸಹಕಾರದಿಂದ ರಿಂಗ್ ರಸ್ತೆಯಲ್ಲಿನಾಲ್ಕು ಎಕರೆ ಜಾಗ ಪಡೆದು ನೂತನ ಬಸ್ ನಿಲ್ದಾಣ ನಿರ್ಮಿಸಲಾಗುತ್ತಿದೆ. ಅಫಜಲಪುರದಲ್ಲಿಶಾಸಕ ಎಂ.ವೈ. ಪಾಟೀಲ್ ಅವರ ನೆರವಿನಿಂದ ಹಳೆಯ ಮಿನಿ ವಿಧಾನಸೌಧದ ಮೂರು ಎಕರೆಗೂ ಹೆಚ್ಚು ಜಾಗದಲ್ಲಿಹೊಸ ಬಸ್ ನಿಲ್ದಾಣ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಅರುಣಕುಮಾರ ಹೇಳಿದರು.

*

ಸ್ಯಾಟಲೈಟ್ ನಿಲ್ದಾಣಕ್ಕೆ ಪ್ರಸ್ತಾವಿತ ಸ್ಥಳಗಳು

* ಜೇವರ್ಗಿ ರಸ್ತೆ: ಬೀಜ ನಿಗಮದ ಜಾಗ

* ಆಳಂದ ರಸ್ತೆ: ಕೃಷಿ ವಿಶ್ವವಿದ್ಯಾಲಯದ ಜಾಗ

* ಹುಮನಾಬಾದ್ ರಸ್ತೆ: ಗಂಜ್ ಬಳಿ 8 ಗುಂಟೆ ಸ್ಥಳವಿದೆ

* ಗುಲ್ಬರ್ಗ ವಿಶ್ವವಿದ್ಯಾಲಯ: ಎರಡು ಎಕರೆ ಜಾಗ

***

ನಿತಿನ್ ಜನರ ನಂಬಿಕೆಗೆ ಅರ್ಹರೇ?

ಆರು ಬಾರಿ ಶಾಸಕರಾಗಿದ್ದ ಸ್ವಂತ ಅಣ್ಣ ಮಾಲೀಕಯ್ಯ ಗುತ್ತೇದಾರ್ ಅವರಿಂದ ಬೆಳೆದ ನಿತಿನ್ ಗುತ್ತೇದಾರ್ ಕೊನೆಗೆ ಅವರಲ್ಲಿಯೂ ನಂಬಿಕೆ ಇಲ್ಲದಂತೆ ಸಂಬಂಧ ಕಡೆದುಕೊಂಡಿದ್ದಾರೆ. ಇಂತವರು ಕ್ಷೇತ್ರದ ಜನರಿಗೆ ಯಾವ ಸಾಥ್ ನೀಡಲಿದ್ದಾರೆ ಎಂದು ಯೋಚನೆ ಮಾಡಬೇಕು ಎಂದು ಅರುಣಕುಮಾರ ಪಾಟೀಲ್ ಹೇಳಿದರು. ಇಲ್ಲಸಲ್ಲದ ಮಾತುಗಳನ್ನು ಆಡುವ ಮೂಲಕ ಅವರ ಸಂಸ್ಕೃತಿ ತೋರುತ್ತಿದ್ದಾರೆ. ಕೇವಲ ಪ್ರಚಾರದಲ್ಲಿಇರಬೇಕು ಎಂದು ಆರೋಪ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

*

*

ಕೋಟ್ ...

ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆ ಕಲ್ಯಾಣ ಕರ್ನಾಟಕ ಭಾಗದಲ್ಲಿಯೂ ಯಶಸ್ವಿಯಾಗಿ ಅನುಷ್ಠಾನಗೊಂಡಿದೆ. ಮಹಿಳೆಯರು ನಿಗಮದ ಬಸ್ ಗಳಲ್ಲಿಉಚಿತವಾಗಿ ಪ್ರಯಾಣಿಸುತ್ತಿದ್ದು, ಯೋಜನೆಯ ಬಗ್ಗೆ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ರಾಜ್ಯದ ಇತರ ಮೂರು ಸಾರಿಗೆ ನಿಗಮಗಳಿಗೆ ಹೋಲಿಸಿದರೆ ಕೆಕೆಆರ್ ಟಿಸಿ ಆರ್ಥಿಕವಾಗಿ ಸ್ವಲ್ಪಮಟ್ಟಿಗೆ ಸಬಲೀಕರಣಗೊಂಡಿದೆ. ಇನ್ನು ದರ ಹೆಚ್ಚಳದ ಬಳಿಕ ಅಲ್ಪ ಪ್ರಮಾಣದ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿರಬಹುದು. ಆದರೆ, ಮುಂದಿನ ದಿನಗಳಲ್ಲಿಸರಿಹೋಗಲಿದೆ.

- ಅರುಣಕುಮಾರ ಪಾಟೀಲ್ , ಅಧ್ಯಕ್ಷ, ಕೆಕೆಆರ್ ಟಿಸಿ