ವಿಕ ಸುದ್ದಿಲೋಕ ಅರಕಲಗೂಡುಸಮೀಪದ ಹೊನ್ನವಳ್ಳಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿರಾಷ್ಟ್ರೀಯ ಶಿಕ್ಷಣ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಪ್ರಾಂಶುಪಾಲ ಪ್ರದೀಪ್ ಮಾತನಾಡಿ, ‘‘ ಮೌಲಾನಾ ಅಬುಲ್ ಕಲಾಂ ಅವರು ಸ್ವಾತಂತ್ರ್ಯ ಭಾರತದ ಮೊದಲ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ ನೆನಪಿಗಾಗಿ ರಾಷ್ಟ್ರೀಯ ಶಿಕ್ಷಣ ದಿನವಾಗಿ ಆಚರಿಸಲಾಗುತ್ತದೆ,’’ ಎಂದರು.
‘‘ರಾಷ್ಟ್ರೀಯ ಶಿಕ್ಷಣ ನೀತಿ ಎಂದರೆ ದೇಶದ 14 ವರ್ಷದ ಒಳಗಿನ ಎಲ್ಲಮಕ್ಕಳಿಗೂ ಉಚಿತ ಶಿಕ್ಷಣ ನೀಡುವ ಗುರಿ ಹೊಂದಿದ್ದು, ಇಂದು ಎಲ್ಲಾ ಮಕ್ಕಳಿಗೂ ಉಚಿತ ಶಿಕ್ಷಣ ದೊರೆಯುತ್ತಿದೆ,’’ ಎಂದು ಹೇಳಿದರು.
ಸಂಪನ್ಮೂಲ ಅಧಿಕಾರಿ ಸಲ್ಲಾವುದ್ದೀನ್ , ಕೆರೆಕೋಡಿ ಶಿವಣ್ಣ ಮಾತನಾಡಿ, ಶಿಕ್ಷಣದಲ್ಲಿಸಾಧನೆ ಮಾಡಲು ಮಕ್ಕಳಲ್ಲಿಶಿಸ್ತು, ಸಂಯಮ, ಸಂಸ್ಕಾರ ಮುಖ,’’ ಎಂದರು.
ದೈಹಿಕ ಶಿಕ್ಷಣ ಶಿಕ್ಷಕ ಮಂಜುನಾಥ್ , ಸಮಾಜ ವಿಜ್ಞಾನ ಶಿಕ್ಷಕ ಮಣಿಕಂಠ, ಮಾತನಾಡಿದರು. ವಿದ್ಯಾರ್ಥಿಗಳಿಂದ ಶಿಕ್ಷಣದ ಮಹತ್ವದ ಕುರಿತ ಭಾವಚಿತ್ರ ಮತ್ತು ಭಿತ್ತಿಚಿತ್ರಗಳನ್ನು ಹಿಡಿದು ಮೆರವಣಿಗೆ ಮಾಡಲಾಯಿತು. ಶಿಕ್ಷಕರಾದ ಗೋವಿಂದರಾಜು, ಹೇಮಂತ್ ಕುಮಾರ್ , ಗುಣಶೀಲ ಬಿ.ಟಿ., ಶ್ರೂಶಷಕಿ ಪುಷ್ಪಲತಾ ಬಿ.ಕೆ. ಮತ್ತು ವಿದ್ಯಾರ್ಥಿಗಳಿದ್ದರು.