ಹಾವೇರಿ: ಪಜಾ, ಪಪಂ ದೌರ್ಜನ್ಯ ತಡೆ ನಿಯಂತ್ರಣ ಹಾಗೂ ಉಪ ವಿಭಾಗ ಮಟ್ಟದ ಜಾಗೃತಿ ಸಮಿತಿಗೆ ಅಧಿಕಾರೇತರ ಸದಸ್ಯರ ನಾಮನಿರ್ದೇಶನ ಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಉಪ ವಿಭಾಗ ಮಟ್ಟದ ಎಲ್ಲತಾಲೂಕಿನ ಪಜಾ, ಪಪಂಕ್ಕೆ ಸೇರಿದ ಎರಡು ಜನ ಅಧಿಕಾರೇತರ ಸದಸ್ಯರು ಹಾಗೂ ಇತರೆ ವರ್ಗದ ಸರಕಾರೇತರ ಸಂಘದ ಸಂಸ್ಥೆಗಳೊಂದಗೆ ಎರಡು (ಎನ್ ಜಿಒ) ಜನ ಅಧಿಕಾರೇತರ ಸದಸ್ಯರ ನಾಮನಿರ್ದೇಶನ ಮಾಡಬೇಕಾಗಿದೆ. ಅಭ್ಯರ್ಥಿಯ ಭಾವಚಿತ್ರ, ಆಧಾರ್ ಕಾರ್ಡ್ ಪ್ರತಿ, ರಹವಾಸಿ ಹಾಗೂ ಜಾತಿಪ್ರಮಾಣಪತ್ರ, ಪಜಾ, ಪಪಂ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ ದಾಖಲೆಯೊಂದಿಗೆ ನ.30ರೊಳಗಾಗಿ ಅರ್ಜಿ ಸಲ್ಲಿಸಬೇಕು. ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರ(ಗ್ರೇಡ್ -1) ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಹಾವೇರಿ ಈ ವಿಳಾಸದಲ್ಲಿಪಡೆದುಕೊಳ್ಳಬಹುದು. ಮಾಹಿತಿಗೆ ಮೊ. 9480843149 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.