‘ಕಳಪೆ’ ಪಂಚಾಯಿತಿಗೆ ಟಾರ್ಗೆಟ್

Contributed by: aatish.kannale@timesofindia.com|Vijaya Karnataka•
targeting the kalape panchayat vb g ramji scheme fails to generate employment
- ವಿಬಿ-ಜಿ ರಾಮ್ ಜಿ ಯೋಜನೆಯಡಿ ಮಾನವ ದಿನ ಸೃಷ್ಟಿಸುವಲ್ಲಿ20 ಗ್ರಾ.ಪಂ. ವಿಫಲ

‘ಕಳಪೆ’ ಪಂಚಾಯಿತಿಗೆ ಟಾರ್ಗೆಟ್
ಆತೀಶ್ ಬಿ.ಕನ್ನಾಳೆ ಶಿವಮೊಗ್ಗ

ಘ್ಕಿaaಠಿಜಿsh.ka್ಞ್ಞa್ಝಛಿಃಠಿಜಿಞಛಿsಟ್ಛಜ್ಞಿdಜಿa.್ಚಟಞ

ಗ್ರಾಮೀಣ ಕುಟುಂಬಗಳಿಗೆ ಉದ್ಯೋಗ ನೀಡುವ ಮೂಲಕ ಕೃಷಿ ಕೆಲಸವಿಲ್ಲದ ಕಾರ್ಮಿಕರಿಗೆ ಆದಾಯದ ಮೂಲ ಒದಗಿಸುವ ಮಹತ್ವಾಕಾಂಕ್ಷೆಯೊಂದಿಗೆ ಮನರೇಗಾ (ವಿಬಿ-ಜಿ ರಾಮ್ ಜಿ) ಯೋಜನೆ ಜಾರಿಗೆ ತರಲಾಗಿದೆ. ಆದರೆ, ಈ ಯೋಜನೆಯಡಿ ಜಿಲ್ಲೆಯ 20 ಗ್ರಾಮ ಪಂಚಾಯಿತಿಗಳಲ್ಲಿಅತ್ಯಂತ ಕಡಿಮೆ ಸಾಧನೆ ಮಾಡಲಾಗಿದೆ.

ಕೇಂದ್ರ ಸರಕಾರ ಮನರೇಗಾ ಯೋಜನೆಯ ಹೆಸರನ್ನು ವಿಬಿ-ಜಿ ರಾಮ್ ಜಿಯಾಗಿ ಬದಲಿಸಿದ್ದರಿಂದ ನಾಲ್ಕು ತಿಂಗಳ ಲೆಕ್ಕಾಚಾರವನ್ನು ಪರಿಗಣಿಸಿದ್ದು, ಅದರಂತೆ 20 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿಅತಿ ಕಡಿಮೆ ಗುರಿ ಸಾಧಿಸಲಾಗಿದೆ. ಉದಾ: ತೀರ್ಥಹಳ್ಳಿ ತಾಲೂಕು ಹುಂಚದಕಟ್ಟೆ ಗ್ರಾಮ ಪಂಚಾಯಿತಿಯಲ್ಲಿ2025ರ ಜುಲೈಯಿಂದ ಅಕ್ಟೋಬರ್ ವರೆಗೆ 446 ಮಾನವ ದಿನಗಳನ್ನು ಸೃಷ್ಟಿಸಲಾಗಿತ್ತು. ಅದೇ ಅವಧಿಗೆ ಹೋಲಿಸಿದರೆ 2026ರಲ್ಲಿಬರೀ 22 ಮಾನವ ದಿನಗಳನ್ನು ಮಾತ್ರ ಸೃಷ್ಟಿಸಲಾಗಿದೆ. ಸಾಗರದ ಕಲ್ಮನೆಯಲ್ಲಿ684ರಷ್ಟಿದ್ದ ಸಂಖ್ಯೆ 99 ಇದೆ. ಅದೇ ರೀತಿ, ಜಿಲ್ಲೆಯ 20 ಪಂಚಾಯಿತಿಗಳು ಈ ಪಟ್ಟಿಯಲ್ಲಿವೆ.

ಈ ಸಲ ತೀವ್ರ ಬರಗಾಲವಿದ್ದು, ಹಲವೆಡೆ ಕರೆಕಟ್ಟೆಗಳು ಬತ್ತಿವೆ. ತೋಟಗಳಿಗೆ ನೀರಿಲ್ಲ. ದುಡಿಯಲು ಮಾರ್ಗವಿಲ್ಲದೇ ಜನರು ಸಂಕಷ್ಟದಲ್ಲಿದ್ದಾರೆ. ಈ ಪರಿಸ್ಥಿತಿಯಲ್ಲಿವಿಬಿ-ಜಿ ರಾಮ್ ಜಿ ಯೋಜನೆಯ ಮೂಲಕ ಕೈಹಿಡಿಯಬೇಕಿತ್ತು. ಆದರೆ, ಆಯಾ ಪಂಚಾಯಿತಿ ಮಟ್ಟದ ಅಧಿಕಾರಿಗಳ ನಿರಾಸಕ್ತಿಯಿಂದಾಗಿ ಸಕಾಲಕ್ಕೆ ಯೋಜನೆಯ ಲಾಭ ಜನರಿಗೆ ಸಿಕ್ಕಿಲ್ಲ.

ಜಿಲ್ಲೆಯ ಬಯಲು ಸೀಮೆಯ ತಾಲೂಕುಗಳಿಗೆ ಹೋಲಿಸಿದರೆ, ಮಲೆನಾಡಿನ ತಾಲೂಕುಗಳಲ್ಲಿಕೆರೆಗಳ ಸಂಖ್ಯೆ ಕಡಿಮೆ, ಅಧಿಕ ಪ್ರಮಾಣದಲ್ಲಿಕಾಡಿದೆ. ಹೀಗಾಗಿ, ಸಾಮೂಹಿಕ ಕೆಲಸಗಳಿಗೆ ಅವಕಾಶ ಕಡಿಮೆ. ಏನಿದ್ದರೂ ಕೊಟ್ಟಿಗೆ, ಕಾಂಪೌಂಡ್ ಗಳ ನಿರ್ಮಾಣ, ತೋಟಗಳಲ್ಲಿವೈಯಕ್ತಿಕ ಕೆಲಸಗಳಿಗೆ ಹೆಚ್ಚು ಅವಕಾಶವಿದೆ. ಹೀಗಾಗಿ, ತೀರ್ಥಹಳ್ಳಿಯಲ್ಲಿಕಡಿಮೆ ಮಾನವ ದಿನ ಸೃಷ್ಟಿಸಲಾಗಿದೆ ಎಂಬುದು ಅಧಿಕಾರಿಗಳ ಸಬೂಬು. ಆದರೆ, ಅದೇ ಪಂಚಾಯಿತಿ ವ್ಯಾಪ್ತಿಯಲ್ಲಿಕಳೆದ ವರ್ಷ ಉತ್ತಮ ಸಾಧನೆ ಮಾಡಿದ್ದು, ಈ ವರ್ಷ ಏಕೆ ಸಾಧ್ಯವಾಗಲಿಲ್ಲಎಂಬುದು ಪ್ರಜ್ಞಾವಂತರ ಪ್ರಶ್ನೆಯಾಗಿದೆ.

ಕೆಲವು ಇಒಗಳು ಹೇಳುವಂತೆ, ‘ಪಿಡಿಒಗಳಿಗೆ ಸೂಚನೆ ನೀಡಲಾಗಿದೆ. ಅವರು ಆಸಕ್ತಿ ವಹಿಸಿ ಕೆಲಸ ಮಾಡಬೇಕು. ತಮ್ಮ ವ್ಯಾಪ್ತಿಯಲ್ಲಿಹೆಚ್ಚೆಚ್ಚು ಮಾನವ ದಿನಗಳ ಸೃಷ್ಟಿಗೆ ಮುಂದಾಗಬೇಕು. ಆದರೆ, ಇಚ್ಛಾಶಕ್ತಿ ಕೊರತೆಯಿಂದಾಗಿ ನಿಗದಿತ ಗುರಿ ತಲುಪಲಾಗಿಲ್ಲ’ ಎನ್ನುತ್ತಾರೆ. ಇನ್ನೂ ಕೆಲವು ಪಂಚಾಯಿತಿಗಳಲ್ಲಿಹೊಸದಾಗಿ ಪಿಡಿಒಗಳು ಬಂದಿದ್ದರಿಂದಲೂ ಸಮಸ್ಯೆಯಾಗಿದೆ ಎಂಬ ಸ್ಪಷ್ಟನೆಯನ್ನು ಸಹ ನೀಡಲಾಗಿದೆ. ಅದೇನೇ ಇರಲಿ, ಕೆಲವರ ನಿರಾಸಕ್ತಿಯಿಂದಾಗಿ ಪಂಚಾಯಿತಿ ವ್ಯಾಪ್ತಿಯಲ್ಲಿಮಾನವ ದಿನಗಳ ಮೂಲಕ ಸಿಗಬೇಕಾದ ಕೂಲಿಯಿಂದ ಜನ ವಂಚಿತರಾಗಿದ್ದಾರೆ.

===

ಶಿವಮೊಗ್ಗ ರಾಜ್ಯಕ್ಕೆ ಫಸ್ಟ್

ವಿಬಿ-ಜಿ ರಾಮ್ ಜಿ ಯೋಜನೆ ಅಡಿ ಮಾನವ ದಿನಗಳ ಸೃಷ್ಟಿಯಲ್ಲಿಶಿವಮೊಗ್ಗ ಜಿಲ್ಲೆರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. 2025ರ ಜುಲೈನಿಂದ ಅಕ್ಟೋಬರ್ ವರೆಗೆ 3.29 ಲಕ್ಷ ಮಾನವ ದಿನಗಳನ್ನು ಸೃಷ್ಟಿಸಲಾಗಿತ್ತು. 2026ರ ಇದೇ ಅವಧಿಯಲ್ಲಿ6.85 ಲಕ್ಷ ಗುರಿ ಸಾಧಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ದುಪ್ಪಟ್ಟು ಗುರಿ ಸಾಧಿಸಲಾಗಿದೆ. ಯೋಜನೆಯ ಹೆಸರು ಬದಲಾವಣೆ ಸೇರಿದಂತೆ ಅನೇಕ ತಾಂತ್ರಿಕ ತೊಡಕುಗಳ ನಡುವೆಯೂ ಹೆಚ್ಚುವರಿಯಾಗಿ 3.56 ಲಕ್ಷ ಮಾನವ ದಿನಗಳನ್ನು ಸೃಷ್ಟಿಸಲಾಗಿದೆ. ಜಿಲ್ಲೆಯಲ್ಲಿಇನ್ನಷ್ಟು ಮಾನವ ದಿನಗಳನ್ನು ಸೃಷ್ಟಿಸಲು ನಿರಂತರವಾಗಿ ಕೆಡಿಪಿ ಸಭೆಗಳನ್ನು ನಡೆಸಲಾಗುತ್ತಿದೆ. ಗ್ರಾಮೀಣ ಭಾಗಗಳಲ್ಲಿಜಾಗೃತಿ ಅಭಿಯಾನ ಏರ್ಪಡಿಸಲಾಗುತ್ತಿದೆ. ಇದರ ನಡುವೆ ಅತ್ಯಂತ ಕಡಿಮೆ ಮಾನವ ದಿನಗಳನ್ನು ಸೃಷ್ಟಿಸಿದ 10 ಪಂಚಾಯಿತಿಗಳ ಪಿಡಿಒಗಳಿಗೆ ನೋಟಿಸ್ ನೀಡಲಾಗಿದೆ. ಸರಿಯಾಗಿ ಕೂಲಿ ಪಾವತಿಸದೇ ಇರುವ 6 ಪಿಡಿಒಗಳು ಮತ್ತು ತಾಲೂಕು ಮಟ್ಟದಲ್ಲಿಎ.ಡಿ.ಗಳಿಗೂ ನೋಟಿಸ್ ನೀಡಲಾಗಿದೆ.

===

(ಬಾಕ್ಸ್ )

ಕಳಪೆ ಸಾಧನೆಯ ಪಂಚಾಯಿತಿಗಳು

ತೀರ್ಥಹಳ್ಳಿಯ ಹುಂಚದಕಟ್ಟೆ, ತ್ರಯಂಬಕಪುರ, ಅರೆಹಳ್ಳಿ, ಸಾಲೂರು, ಹೆದ್ದೂರು, ದೇಮ್ಲಾಪುರ, ಸಿಂಗನಬಿದರೆ, ಮುಳುಬಾಗಿಲು, ಹಣಗೆರೆ, ನೆರಟೂರು, ಮಂಡಗದ್ದೆ, ಸಾಲ್ಗಡಿ, ಗುಡ್ಡೆಕೊಪ್ಪ, ಕನ್ನಂಗಿ. ಸಾಗರ ತಾಲೂಕಿನ ಕಲ್ಮನೆ, ಅರಳಗೋಡು, ತಾಳಗುಪ್ಪ. ಹೊಸನಗರದ ತ್ರಿಣಿವೆ, ಭದ್ರಾವತಿಯ ಗುಡುಮಘಟ್ಟ.

===

(ಕೋಟ್ )

ಮಾನವ ದಿನ ಸೃಷ್ಟಿಯಲ್ಲಿಶಿವಮೊಗ್ಗ ಜಿಲ್ಲೆರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ದುಪ್ಪಟ್ಟು ಗುರಿ ಸಾಧಿಸಲಾಗಿದೆ. ಜತೆಗೆ, ಕಡಿಮೆ ಸಾಧನೆ ಮಾಡಿರುವ ಪಂಚಾಯಿತಿಗಳಲ್ಲಿಜಾಗೃತಿ ಮೂಡಿಸುವುದರೊಂದಿಗೆ ಸಂಬಂಧಪಟ್ಟ ಪಿಡಿಒಗಳಿಗೆ ನೋಟಿಸ್ ಸಹ ನೀಡಲಾಗಿದೆ.

- ರಿಷಿ ಆನಂದ್ , ಸಿಇಒ, ಜಿಪಂ

===

ಫೋಟೊ: 12ಎಸ್ ಎಂಜಿ50: ಸಾಂದರ್ಭಿಕ ಚಿತ್ರ