ಬೆಳ್ತಂಗಡಿ : ಖಾಸಗಿ ಸಹಕಾರಿ ಸಂಘವೊಂದರ ಬೆಳ್ತಂಗಡಿ ಶಾಖೆಯಲ್ಲಿಪಿಗ್ಮಿ ಸಂಗ್ರಹಕರಾಗಿ ಕೆಲಸ ಮಾಡುತ್ತಿದ್ದ ಮಲವಂತಿಗೆ ಗ್ರಾಮದ ಬಾಳೆಹಿತ್ತಿಲು ನಿವಾಸಿ ಪುನೀತ್ ಯಾನೆ ಪುರುಷೋತ್ತಮ್ ಗೌಡ (34) ಬುಧವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೆಲಸಕ್ಕೆ ರಜೆ ಹಾಕಿದ್ದ ಅವರು ದೀಪಾವಳಿ ಹಬ್ಬದ ಸಂಭ್ರಮದಲ್ಲಿಸಂಬಂಧಿಕರು ಹಾಗೂ ಸಹೋದರರೊಂದಿಗೆ ಉತ್ಸಾಹದಿಂದ ಕಾಲ ಕಳೆದಿದ್ದರು. ಬಳಿಕ ರಾತ್ರಿ ಸುಮಾರು 9.30ರ ವೇಳೆಗೆ ಮನೆಯ ಸಮೀಪದ ತೋಟದಲ್ಲಿಆತ್ಮಹತ್ಯೆಗೆ ಶರಣಾಗಿದ್ದಾರೆ. ಅವಿವಾಹಿತರಾಗಿದ್ದ ಅವರಿಗೆ ತಂದೆ, ತಾಯಿ, ಸಹೋದರ ಹಾಗೂ ಸಹೋದರಿ ಇದ್ದಾರೆ.12ಎಂಜೆ ಪುನೀತ್