ಉಪ್ಪಳ : ಬಾವಿಯಲ್ಲಿ ಪತ್ತೆಯಾದ ಉತ್ತರ ಭಾರತದ ವಲಸೆ ಕಾರ್ಮಿಕನ ಮೃತದೇಹವನ್ನು ಹಿಂದೂ ಸಂಪ್ರದಾಯದಂತೆ ಸೇವಾ ಭಾರತಿ ಮಂಗಲ್ಪಾಡಿ ವತಿಯಿಂದ ಅಂತ್ಯಸಂಸ್ಕಾರ ನಡೆಸಲಾಯಿತು. ಮಂಜೇಶ್ವರ ಠಾಣೆ ವ್ಯಾಪ್ತಿಯ ಸುಂಕದಕಟ್ಟೆಯ ಮರದ ಮಿಲ್ ನಲ್ಲಿದುಡಿಯುತ್ತಿದ್ದ ಒಡಿಶಾ ರಾಜ್ಯದ ಬಿಪಿನ್ ಮಲಿಕ್ (40) ಅಂತ್ಯ ಸಂಸ್ಕಾರ ನಡೆಸಲಾಯಿತು.
ಬಿಪಿನ್ ಮಲಿಕ್ ಆಕಸ್ಮಿಕವಾಗಿ ಬಾವಿಗೆ ಬಿದ್ದು ಸಾವಿಗೀಡಾಗಿದ್ದರು. ಮೃತದೇಹವನ್ನು ಅವರ ಊರಿಗೆ ಕೊಂಡೊಯ್ಯಲು ದುಬಾರಿ ವೆಚ್ಚ ತಗಲುವ ಕಾರಣ ಸಂಬಂಧಿಕರ ಒಪ್ಪಿಗೆಯಂತೆ ಮಂಜೇಶ್ವರ ಪೊಲೀಸರ ಶಿಫಾರಸಿನ ಮೇರೆಗೆ ಸೇವಾ ಭಾರತಿ ಮಂಗಲ್ಪಾಡಿ ಕಾರ್ಯಕರ್ತರು ಚೆರುಗೋಳಿ ರುದ್ರಭೂಮಿಯಲ್ಲಿಅಂತಿಮ ಕ್ರಿಯೆ ನಡೆಸಿದರು. ಈ ವೇಳೆ ಮೃತ ವ್ಯಕ್ತಿಯ ಸಹೋದ್ಯೋಗಿಗಳು ಭಾಗವಹಿಸಿದ್ದರು.16ಎಂಜೆಬಿಪಿನ್ ಮಲಿಕ್