«±À್ಯ ್ದÀರ್ಢಿsÀರ್ದಿ್ಲರಿÃ್ಬÀ ್ಕೃತಿÁಘÀಜÀ್ಠ್ಲ «PÀ ¸Àರ್ಕಿೃಾನ್ಲಿಲÃPÀ ್ಢ್ಲÃ್ದÀ

Contributed by: sureshgowdajhl@gmail.com|Vijaya Karnataka•
diabetes day celebration importance of health practices and doctors advice
ವಿಶ್ವ ಮಧುಮೇಹ ದಿನಾಚರಣೆ

ವಿಕ ಸುದ್ದಿಲೋಕ ದೇವದುರ್ಗ
‘‘ ಪೌಷ್ಟಿಕ ಆಹಾರ ಸೇವನೆ, ನಿಯಮಿತ ವ್ಯಾಯಾಮದಿಂದ ಉತ್ತಮ ಆರೋಗ್ಯ ಪಡೆಯಲು ಸಾಧ್ಯವಾಗಲಿದ್ದು ಮಧುಮೇಹದ ಬಗ್ಗೆ ವೈದ್ಯರ ಸಲಹೆ ಪಡೆಯಬೇಕು,’’ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ.ಬನದೇಶ್ವರ ಹೇಳಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿಆಯೋಜಿಸಿದ್ದ ವಿಶ್ವ ಮಧುಮೇಹ ದಿನಾಚರಣೆ ಹಾಗೂ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಂಗಳವಾರ ಮಾತನಾಡಿದರು. ‘‘ ರಕ್ತದಲ್ಲಿಸಕ್ಕರೆ ಪ್ರಮಾಣ ಹೆಚ್ಚಾದ ಸ್ಥಿತಿಯನ್ನು ಮಧುಮೇಹ ಎನ್ನುತ್ತಾರೆ. ಅತಿ ಹೆಚ್ಚಿನ ಸಕ್ಕರೆ ಅಂಶವಿದ್ದರೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಲಿದೆ. ಹೃದಯ ಸಂಬಂಧಿತ ರೋಗ, ಕುರುಡುತನ, ಮೂತ್ರಪಿಂಡ ವೈಫಲ್ಯ, ಪಾದದ ನರಗಳಿಗೆ ಹಾನಿ ಮತ್ತು ಖಿನ್ನತೆ ಸೇರಿ ನಾನಾ ರೋಗ ಆವರಿಸಲಿವೆ,’’ ಎಂದರು.

ವೈದ್ಯಾಧಿಕಾರಿಗಳಾದ ಡಾ.ಗಂಗಾಧರ್ , ಡಾ. ನಾಗರಾಜ್ , ಡಾ.ನಿರ್ಮಲಾದೇವಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗೀತಾ, ಕ್ಷಯ ರೋಗ ಮೇಲ್ವಿಚಾರಕ ರವಿಶಂಕರ ಶುಕ್ಲ, ಸಿಬ್ಬಂದಿ ತಿಮ್ಮಪ್ಪ, ಶ್ರೀನಿವಾಸ್ , ಸೋಮಪ್ಪ, ಜ್ಯೋತಿ, ಓಂಕಾರ್ , ತ್ಯಾಗರಾಜ್ , ವಿಶ್ವನಾಥ್ , ಸುದೀಪ್ , ಪ್ರಭುರಾಜ್ , ಸಂತೋಷ, ಶರಣಬಸವ, ಹನುಮಂತ ಇತರರಿದ್ದರು.

ಆರ್ ಸಿಎಚ್ 17ಡಿವಿಡಿ01

ದೇವದುರ್ಗದ ಸಾರ್ವಜನಿಕ ಆಸ್ಪತ್ರೆಯಲ್ಲಿವಿಶ್ವಮಧುಮೇಹ ದಿನ ಆಚರಿಸಲಾಯಿತು.