ವಿಕ ಸುದ್ದಿಲೋಕ ಬೆಂಗಳೂರುಮಳೆಗಾಲದಲ್ಲಿಉಂಟಾಗುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ 2,000 ಕೋಟಿ ರೂ. ವೆಚ್ಚದಲ್ಲಿರಾಜಕಾಲುವೆ ಮತ್ತು ಚರಂಡಿಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇನ್ನೂ ಹಲವೆಡೆ ತಡೆಗೋಡೆ ನಿರ್ಮಾಣ ಹಾಗೂ ಒತ್ತುವರಿ ತೆರವು ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ವಿಶ್ವಬ್ಯಾಂಕ್ ನೆರವಿನ ಕರ್ನಾಟಕ ಜಲ ಭದ್ರತೆ ಮತ್ತು ವಿಪತ್ತು ಸ್ಥಿತಿಸ್ಥಾಪಕತ್ವ ಕಾರ್ಯಕ್ರಮದಡಿ ಅಭಿವೃದ್ಧಿಗೊಳಿಸುತ್ತಿರುವ ರಾಜಕಾಲುವೆ ಮತ್ತು ಪ್ರವಾಹ ನಿಯಂತ್ರಣ ಕಾಮಗಾರಿಗಳಿಗೆ ಮಹದೇವಪುರ ವಿಧಾನಸಭಾ ಕ್ಷೇತ್ರದ ಗುಂಜೂರಿನಲ್ಲಿಮಂಗಳವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
‘‘ಮಳೆ ಬಂದಾಗ ಹಲವು ಪ್ರದೇಶಗಳಲ್ಲಿನೀರು ನುಗ್ಗಿ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಈ ಸಮಸ್ಯೆ ನಿವಾರಣೆಗಾಗಿಯೇ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ನಗರದ ಅಭಿವೃದ್ಧಿಗೆ ಸರಕಾರ ವಿಶೇಷ ಆದ್ಯತೆ ನೀಡಿದ್ದು, ಕಳೆದ ಮೂರು ವರ್ಷಗಳಲ್ಲಿಮೂಲಸೌಕರ್ಯ ಅಭಿವೃದ್ಧಿಗೆ ಮಹತ್ವದ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಬೆಂಗಳೂರು ಇತಿಹಾಸದಲ್ಲಿಅಭಿವೃದ್ಧಿಗಾಗಿ ಹಿಂದೆಂದೂ ಇಷ್ಟೊಂದು ಪ್ರಮಾಣದ ಹಣ ಹೂಡಿಕೆ ಮಾಡಿರುವ ಉದಾಹರಣೆ ಇಲ್ಲ,’’ ಎಂದು ಹೇಳಿದರು.
ಅಭಿವೃದ್ಧಿ ವಿಚಾರದಲ್ಲಿರಾಜಕೀಯ ಮಾಡಿಲ್ಲ:
‘‘ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅವಧಿಯಲ್ಲಿಜಾರಿಗೆ ಬಂದ ನಮ್ ರ್ ಯೋಜನೆಯಡಿ ಬೆಂಗಳೂರಿನಲ್ಲಿಹಲವು ಪ್ರಮುಖ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಹೊಸಕೋಟೆ ರಸ್ತೆ, ಕೆ.ಆರ್ .ಪುರ ಭಾಗದ ರಸ್ತೆ, ವಿಮಾನ ನಿಲ್ದಾಣ ಮೇಲ್ಸೇತುವೆ, ಎಲೆಕ್ಟ್ರಾನಿಕ್ ಸಿಟಿ ಹಾಗೂ ನೆಲಮಂಗಲ ಮೇಲ್ಸೇತುವೆ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳು ರಾಜಕೀಯ ಉದ್ದೇಶದಿಂದ ಮಾಡಿದ್ದಲ್ಲ. ನಗರದ ಅಭಿವೃದ್ಧಿಯ ದೃಷ್ಟಿಯಿಂದ ಕೈಗೊಂಡ ಕೆಲಸಗಳಾಗಿವೆ,’’ ಎಂದು ತಿಳಿಸಿದರು.
ರಸ್ತೆ ಅಭಿವೃದ್ಧಿಗೆ ಹೊಸ ಗ್ರಿಡ್ ವ್ಯವಸ್ಥೆ:
‘‘ಈ ಹಿಂದಿನ ಸರಕಾರಗಳ ಅವಧಿಯಲ್ಲಿನಗರ ಯೋಜನೆಯಲ್ಲಿಆಗಿರುವ ಲೋಪಗಳನ್ನು ಸರಿಪಡಿಸುವ ಉದ್ದೇಶದಿಂದ ರಸ್ತೆ ಗ್ರಿಡ್ ವ್ಯವಸ್ಥೆ ರೂಪಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿರಸ್ತೆ ಗ್ರಿಡ್ ಗಳ ವ್ಯಾಪ್ತಿಯಲ್ಲಿಅನಧಿಕೃತ ಕಟ್ಟಡಗಳು ನಿರ್ಮಾಣವಾಗದಂತೆ ಕ್ರಮ ಕೈಗೊಳ್ಳಲಾಗುವುದು,’’ ಎಂದು ಹೇಳಿದರು.
‘‘ಹೊಸಕೋಟೆ ಭಾಗದಿಂದ ನಂದಗುಡಿ ಕಡೆಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಸಂಬಂಧಿಸಿದಂತೆ ಬಿಜೆಪಿ ಸರಕಾರದ ಅವಧಿಯಲ್ಲಿ100 ಮೀಟರ್ ಅಗಲದ ರಸ್ತೆ ನಿರ್ಮಾಣಕ್ಕೆ ಅಧಿಸೂಚನೆ ಹೊರಡಿಸಲಾಗಿತ್ತು. ಇದರಿಂದ ಸುಮಾರು 5 ರಿಂದ 6 ಸಾವಿರ ಕಟ್ಟಡಗಳನ್ನು ತೆರವುಗೊಳಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ, ಅಗತ್ಯವಿರುವ ಕಡೆ 45 ಮೀಟರ್ ಅಗಲದಲ್ಲಿರಸ್ತೆ ಅಭಿವೃದ್ಧಿಪಡಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದ ಸಾವಿರಾರು ಕಟ್ಟಡಗಳನ್ನು ತೆರವುಗೊಳಿಸುವುದು ತಪ್ಪಿದೆ. ಜತೆಗೆ ಪರಿಹಾರ ಪಾವತಿಸುವ ಹೊರೆಯೂ ತಪ್ಪಿದೆ,’’ ಎಂದು ತಿಳಿಸಿದರು.
ಟನಲ್ ಗೆ ಅಡ್ಡಿ ಒಳ್ಳೆ ಪ್ರವೃತ್ತಿಯಲ್ಲ:
‘‘ನಗರದ ಸಂಚಾರ ದಟ್ಟಣೆ ನಿವಾರಣೆಗೆ ಟನಲ್ ರಸ್ತೆ ಯೋಜನೆ ಕೈಗೆತ್ತಿಕೊಂಡಿದ್ದು, ಅನುಭವವಿಲ್ಲದ ವ್ಯಕ್ತಿಗಳಿಂದ ವಿರೋಧ ಉಂಟಾಗುತ್ತಿದೆ. ನ್ಯಾಯಾಲಯದಲ್ಲಿಪ್ರಕರಣಗಳು ದಾಖಲಾಗಿವೆ. ಅಭಿವೃದ್ಧಿ ಯೋಜನೆಗಳಿಗೆ ಅನಗತ್ಯ ಅಡ್ಡಿಪಡಿಸುವ ಪ್ರವೃತ್ತಿ ಸರಿಯಲ್ಲ,’’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಭೂಮಾಫಿಯಾ ವಿರುದ್ಧ ಕ್ರಮ:
‘‘ಬೆಂಗಳೂರಿಗೆ ಹೊರರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿಜನರು ಬಂದು ವಾಸಿಸುತ್ತಿದ್ದಾರೆ. ಎಲ್ಲರನ್ನೂ ಒಳಗೊಳ್ಳುವ ರೀತಿಯಲ್ಲಿಅಭಿವೃದ್ಧಿ ಮಾಡಬೇಕಿದೆ. ಆದರೆ ಭೂಮಾಫಿಯಾಗಳಿಗೆ ಅವಕಾಶ ನೀಡಬಾರದು. ಮೂಲ ಭೂಮಾಲೀಕರಿಗೆ ತೊಂದರೆ ನೀಡುವ ಪ್ರಕರಣಗಳು ತಮ್ಮ ಗಮನಕ್ಕೆ ಬಂದಿದ್ದು, ಇಂತಹ ಪ್ರಕರಣಗಳಲ್ಲಿಪೊಲೀಸ್ ಅಧಿಕಾರಿಗಳು ಹೆಚ್ಚಿನ ನಿಗಾ ವಹಿಸಬೇಕು. ಭೂಮಾಫಿಯಾಗಳೊಂದಿಗೆ ರಾಜಕಾರಣಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಶಾಮೀಲಾಗಿರುವ ಆರೋಪಗಳ ಬಗ್ಗೆ ತನಿಖೆ ಮಾಡಬೇಕಾಗುತ್ತದೆ,’’ ಎಂದು ಎಚ್ಚರಿಕೆ ನೀಡಿದರು.
ಕೆಲ ಕ್ಷೇತ್ರಗಳಲ್ಲಿಅಕ್ರಮ ಮತದಾರರ ಸೇರ್ಪಡೆ:
‘‘ಎಸ್ ಐಆರ್ ಪ್ರಕ್ರಿಯೆಯಲ್ಲಿಬೆಂಗಳೂರಿನಲ್ಲಿಸುಮಾರು 45 ಲಕ್ಷ ಮತಗಳು ಕಡಿಮೆಯಾಗಿದೆ. ಮತದಾರರ ಪಟ್ಟಿಯಲ್ಲಿಹೆಸರುಗಳ ಸೇರ್ಪಡೆ ಮತ್ತು ತೆಗೆದುಹಾಕುವಿಕೆ ಕುರಿತು ಗಂಭೀರ ಪರಿಶೀಲನೆ ಅಗತ್ಯವಿದೆ. ಇದು ಕೇವಲ ಮತದಾನದ ಹಕ್ಕಲ್ಲ, ಸ್ವಾಭಿಮಾನದ ಹಕ್ಕು. ಕಾರ್ಯಕರ್ತರು ಮನೆಮನೆಗೆ ತೆರಳಿ ಮತದಾರರ ಪಟ್ಟಿಯನ್ನು ಪರಿಶೀಲಿಸಬೇಕು,’’ ಎಂದು ಕರೆ ನೀಡಿದರು.
ಮೆಟ್ರೊ ಜಾಲ 500 ಕಿ.ಮೀಗೆ ವಿಸ್ತರಣೆ:
‘‘ನಗರದಲ್ಲಿಮೆಟ್ರೊ ಜಾಲವನ್ನು 500 ಕಿ.ಮೀಗೆ ವಿಸ್ತರಿಸುವ ಉದ್ದೇಶವಿದೆ. ಈಗಾಗಲೇ ಸುಮಾರು 300 ಕಿ.ಮೀ ಮಾರ್ಗದ ಪ್ರಸ್ತಾವನೆಗಳು ಅನುಮೋದನೆಯ ವಿವಿಧ ಹಂತದಲ್ಲಿವೆ. ಉಳಿದ ಮಾರ್ಗಗಳಿಗೂ ಹಂತ ಹಂತವಾಗಿ ಯೋಜನೆ ರೂಪಿಸಿ ಅನುಷ್ಠಾನಗೊಳಿಸಲಾಗುವುದು,’’ ಎಂದು ತಿಳಿಸಿದರು.