ರಿಜ್ವಾನ್ ಆರೋಪ ಸತ್ಯಕ್ಕೆ ದೂರ

Contributed by: nagaraj.navimane@timesofindia.com|Vijaya Karnataka•
Vijay Karnataka
ರಿಜ್ವಾನ್ ಆರೋಪ ಸತ್ಯಕ್ಕೆ ದೂರ

- ಪೆಟ್ರೋಲ್ ಗುಣಮಟ್ಟದ ಪರೀಕ್ಷೆ ನಡೆಸಿ ಸಾಬೀತುಪಡಿಸಲಿ | ಮಾಜಿ ಸಚಿವ ಮುರುಗೇಶ್ ನಿರಾಣಿ ಸವಾಲು
ವಿಕ ಸುದ್ದಿಲೋಕ ಮೈಸೂರು

ಪೆಟ್ರೋಲ್ ಗುಣಮಟ್ಟದ ಕುರಿತು ಸಚಿವ ರಿಜ್ವಾನ್ ಅರ್ಷದ್ ಆರೋಪಗಳು ಸತ್ಯಕ್ಕೆ ದೂರವಾದವು. ಅವರು ದೇಶದ ಯಾವುದೇ ಮೂಲೆಯ ಪೆಟ್ರೋಲ್ ಬಂಕ್ ನಲ್ಲಿಪರೀಕ್ಷೆ ನಡೆಸಿ ತಮ್ಮ ಆರೋಪ ಸಾಬೀತುಪಡಿಸಲಿ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಸವಾಲು ಹಾಕಿದರು.

ನಗರದಲ್ಲಿಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘‘ಪೆಟ್ರೋಲ್ ಬಂಕ್ ಗಳಲ್ಲಿ65 ಸ್ಯಾಂಪಲ್ ಗಳನ್ನು ಸಂಗ್ರಹಿಸಲಾಗಿದೆ ಎಂದು ರಿಜ್ವಾನ್ ಅರ್ಷದ್ ಹೇಳುತ್ತಾರೆ. ಸ್ಯಾಂಪಲ್ ಸಂಗ್ರಹಣೆಗೆ ನಿರ್ದಿಷ್ಟ ನಿಯಮಾವಳಿಗಳಿವೆ. ಜಿಲ್ಲಾಧಿಕಾರಿ, ಆಹಾರ ಇಲಾಖೆ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಬಂಕ್ ಮಾಲೀಕರ ಸಮ್ಮುಖದಲ್ಲಿಯೇ ಮಾದರಿ ಸಂಗ್ರಹಿಸಬೇಕು. ಅದನ್ನು ಬಿಟ್ಟು ಸುಮ್ಮನೆ ಜನರ ದಿಕ್ಕು ತಪ್ಪಿಸುವ ರಾಜಕಾರಣ ಮಾಡಬಾರದು. ಅವರ ಆರೋಪದಲ್ಲಿಸತ್ಯವಿದ್ದರೆ ಒಂದು ಸಮಿತಿ ರಚನೆ ಮಾಡಿ ಮಾದರಿ ಸಂಗ್ರಹಿಸಿ ಸಾಬೀತುಪಡಿಸಲಿ,’’ ಎಂದು ಹೇಳಿದರು.

ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಬಿಜೆಪಿಗೆ ಅನುಕೂಲ ಮಾಡಿಕೊಡಲು ಪೆಟ್ರೋಲ್ ಗೆ ಎಥನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂಬ ಆರೋಪ ತಳ್ಳಿಹಾಕಿದ ಅವರು, ‘‘ಇದೊಂದು ಶುದ್ಧ ಸುಳ್ಳು ಆರೋಪ. ನಿತಿನ್ ಗಡ್ಕರಿ ಅವರ ಕಂಪನಿಯಲ್ಲಿದಿನಕ್ಕೆ ಕೇವಲ 2 ಲಕ್ಷ ಲೀಟರ್ ಎಥನಾಲ್ ಉತ್ಪಾದನೆಯಾಗುತ್ತಿದೆ. ಆದರೆ, ನಮ್ಮ ಸಂಸ್ಥೆಯಿಂದ ದಿನಕ್ಕೆ 28 ಲಕ್ಷ ಲೀಟರ್ ಎಥನಾಲ್ ಉತ್ಪಾದಿಸಲಾಗುತ್ತಿದ್ದು, ಏಷ್ಯಾದಲ್ಲೇ ಅತಿ ಹೆಚ್ಚು ಎಥನಾಲ್ ಉತ್ಪಾದಿಸುವ ಮೊದಲ ಸಂಸ್ಥೆ ನಮ್ಮದಾಗಿದೆ. ಹೀಗಿರುವಾಗ ಗಡ್ಕರಿ ಅವರಿಗೆ ಅನುಕೂಲ ಮಾಡಲು ಎಥನಾಲ್ ಮಿಶ್ರಣ ಮಾಡಲಾಗುತ್ತಿದೆ ಎನ್ನುವುದರಲ್ಲಿಯಾವುದೇ ಹುರುಳಿಲ್ಲ,’’ ಎಂದು ಸ್ಪಷ್ಟಪಡಿಸಿದರು.

ರಾಜಮನೆತನಕ್ಕೆ ಅಗೌರವ ಸಲ್ಲ: ರಾಜಮನೆತನದ ಕುರಿತು ಸಚಿವ ಯತೀಂದ್ರ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಖಂಡಿಸಿದ ನಿರಾಣಿ, ‘‘100 ವರ್ಷಗಳ ಹಿಂದೆಯೇ ದೇಶದ ಅಗ್ರ 10 ರಾಜಮನೆತನಗಳ ಪಟ್ಟಿಯಲ್ಲಿಮೈಸೂರು ಸ್ಥಾನ ಪಡೆದಿತ್ತು. ಕೆಆರ್ ಎಸ್ ಅಣೆಕಟ್ಟು ನಿರ್ಮಾಣದ ಜತೆಗೆ ಸಿಮೆಂಟ್ , ಸ್ಟೀಲ…, ಪೇಪರ್ , ಚಿನ್ನ ಸೇರಿದಂತೆ 151 ಕೈಗಾರಿಕೆಗಳು, ಬ್ಯಾಂಕ್ ಗಳು ಹಾಗೂ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ನಾಡಿಗೆ ಮಾದರಿಯಾದವರು ನಾಲ್ವಡಿ ಕೃಷ್ಣರಾಜ ಒಡೆಯರ್ . ಯತೀಂದ್ರ ಅವರು ಮೊದಲು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಇತಿಹಾಸ ಓದಿ ತಿಳಿದುಕೊಳ್ಳಲಿ. ಇದೇ ಜಿಲ್ಲೆಯವರಾಗಿ ರಾಜಮನೆತನಕ್ಕೆ ಅಗೌರವ ತೋರುವುದು ಸರಿಯಲ್ಲ,’’ ಎಂದು ಎಚ್ಚರಿಸಿದರು.

ಸೋನಿಯಾ ಗಾಂಧಿ ಅವರ ಪುಸ್ತಕದಲ್ಲಿದೇಶದಲ್ಲಿಹೇರಲಾಗಿದ್ದ ತುರ್ತು ಪರಿಸ್ಥಿತಿಯ ಅನಾಹುತಗಳು ಮತ್ತು ಅಂದಿನ ಕೆಟ್ಟ ಆಡಳಿತದ ಬಗ್ಗೆ ಎಲ್ಲಿಯೂ ಬರೆದಿಲ್ಲ. 2014ರಲ್ಲಿಭಾರತದ ಆರ್ಥಿಕ ಸ್ಥಿತಿ ಹೇಗಿತ್ತು? ಇಂದು ಜಾಗತಿಕ ಆರ್ಥಿಕತೆಯಲ್ಲಿಭಾರತ ಯಾವ ಸ್ಥಾನದಲ್ಲಿದೆ ಎಂಬುದನ್ನು ಗಮನಿಸಿದರೆ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದ ಸಾಧನೆ ತಿಳಿಯುತ್ತದೆ,’’ ಎಂದು ಹೇಳಿದರು.

ಮಾಜಿ ಶಾಸಕ ನಿರಂಜನ್ ಕುಮಾರ್ , ಮಾಜಿ ಮೇಯರ್ ಸಂದೇಶ್ ಸ್ವಾಮಿ, ಮುಖಂಡರಾದ ಅಶೋಕ್ , ವಸಂತಕುಮಾರ್ , ಮಹೇಶ್ ರಾಜೇ ಅರಸ್ ಸೇರಿದಂತೆ ಹಲವರು ಹಾಜರಿದ್ದರು.

----ಬಾಕ್ಸ್ -------

ರಾಜ್ಯಾಧ್ಯಕ್ಷ ರೇಸ್ ನಲ್ಲಿನಾನಿಲ್ಲ

‘‘ಬಿಜೆಪಿ ರಾಜ್ಯಾಧ್ಯಕ್ಷರ ಸ್ಥಾನದ ರೇಸ್ ನಲ್ಲಿನಾನಿಲ್ಲ, ಅದಕ್ಕಾಗಿ ಲಾಬಿಯನ್ನೂ ಮಾಡುತ್ತಿಲ್ಲ. ಪಕ್ಷ ನನ್ನನ್ನು ಗುರುತಿಸಿ ಶಾಸಕ, ಸಚಿವ ಸ್ಥಾನ ಸೇರಿದಂತೆ ಎಲ್ಲಾ ಜವಾಬ್ದಾರಿಗಳನ್ನು ನೀಡಿದೆ. ಹಾಲಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಹಲವು ಹೋರಾಟಗಳನ್ನು ಸಂಘಟಿಸಿದ್ದಾರೆ. ಅವರನ್ನೇ ಮುಂದುವರಿಸಿದರೂ ಸ್ವಾಗತಿಸುತ್ತೇನೆ. ಯಾರೇ ಅಧ್ಯಕ್ಷರಾದರೂ ಪಕ್ಷವನ್ನು ಬಲಪಡಿಸಿ ಎನ್ ಡಿಎ ಸರಕಾರ ಅಧಿಕಾರಕ್ಕೆ ತರಲು ಶ್ರಮಿಸುತ್ತೇನೆ,’’ ಎಂದರು.