‘ಉಚ್ಚಂಗೆಮ್ಮ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ಕ್ರಮ’

Contributed by: nagendrappaa3@gmail.com|Vijaya Karnataka•
Vijay Karnataka
‘ಉಚ್ಚಂಗೆಮ್ಮ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ಕ್ರಮ’

ವಿಕ ಸುದ್ದಿಲೋಕ ಹರಪನಹಳ್ಳಿ
‘‘ಉಚ್ಚಂಗಿದುರ್ಗ ಗ್ರಾಮದ ಉಚ್ಚಂಗೆಮ್ಮ ದೇವಿ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ಅಗತ್ಯ ಕ್ರಮ ವಹಿಸಲಾಗುವುದು,’’ ಎಂದು ಜಿಲ್ಲಾಉಸ್ತುವಾರಿ ಹಾಗೂ ಮುಜರಾಯಿ ಮತ್ತು ಬಂದರು ಒಳನಾಡು ಸಚಿವ ಕೆ.ಎಸ್ .ಬಸವಂತಪ್ಪ ಹೇಳಿದರು.

ತಾಲೂಕಿನ ಉಚ್ಚಂಗಿದುರ್ಗ ಗ್ರಾಮದ ಪಾದಗಟ್ಟೆ ಉಚ್ಚಂಗೆಮ್ಮ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಮಾತನಾಡಿದರು.

‘‘ದೇವಸ್ಥಾನಕ್ಕೆ ಗಣನೀಯ ಆದಾಯವಿದ್ದರೂ, ಸುಕ್ಷೇತ್ರ ಅಭಿವೃದ್ಧಿ ಹೊಂದಿಲ್ಲಎಂಬ ಮಾತಿದೆ. ಹೀಗಾಗಿ, ಶೀಘ್ರ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಿ ಕ್ಷೇತ್ರಕ್ಕೆ ಬೇಕಾದ ಮೂಲ ಸೌಕರ್ಯ ಒದಗಿಸಲಾಗುವುದು,’’ ಎಂದರು.

ಕುಡಿಯುವ ನೀರು ಕೊರತೆ ಸಂಬಂಧ ಸ್ಥಳೀಯರಿಂದ ಮನವಿ ಸ್ವೀಕರಿಸಿದ ಸಚಿವರು, ತಮ್ಮ ಅನುದಾನದಡಿ ಕೂಡಲೇ ಎರಡು ಕೊಳವೆ ಬಾವಿ ಕೊರೆಯಿಸಲು ಸೂಚಿಸಿದರು.

ಮುಖಂಡರಾದ ವಿಜಯಕೃಷ್ಣ, ಕೆ.ಕೆಂಚಪ್ಪ, ದಂಡಿಯಪ್ಪ, ಅಣಜಿ ಚಂದ್ರಪ್ಪ, ಕೆ.ಎಂ.ಶಿವಕುಮಾರ್ ಸ್ವಾಮಿ, ನಾಗರಾಜ್ ಸೇರಿ ಇತರರು ಇದ್ದರು.

ಫೋಟೋ ಕ್ಯಾಪ್ಷನ್ : 18ಎಚ್ ಆರ್ ಪಿ 3

ಉಚ್ಚಂಗಿದುರ್ಗ ಗ್ರಾಮದ ಪಾದಗಟ್ಟೆ ಉಚ್ಚಂಗೆಮ್ಮ ದೇವಿ ದೇವಸ್ಥಾನಕ್ಕೆ ಸಚಿವ ಕೆ.ಎಸ್ .ಬಸವಂತಪ್ಪ ಭೇಟಿ ನೀಡಿ ಮಾತನಾಡಿದರು.