ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ ಸ್ಪರ್ಧೆಯಲ್ಲಿಬೆಂಗಳೂರು ನಗರ ಸ್ಪರ್ಧಿಗಳು ಮಿಂಚು
ವಿಕ ಸುದ್ದಿಲೋಕ ಬೆಂಗಳೂರುಬೆಂಗಳೂರು ನಗರದ ಹರಿಣಿ ಪಿ. ಮತ್ತು ಶಿವಮೊಗ್ಗದ ನಮಿಷ್ ಎ.ಪಿ ಇಲ್ಲಿನಡೆಯುತ್ತಿರುವ 5ನೇ ಮಿನಿ ಕರ್ನಾಟಕ ಕ್ರೀಡಾಕೂಟದ 400 ಮೀಟರ್ ಓಟದಲ್ಲಿಕ್ರಮವಾಗಿ ಬಾಲಕಿಯರ ಮತ್ತು ಬಾಲಕರ ವಿಭಾಗದಲ್ಲಿಚಿನ್ನದ ಪದಕ ಜಯಿಸಿದರು.
ಕೂಟದ 5ನೇ ದಿನವಾದ ಬುಧವಾರ ವಿವಿಧ ಜಿಲ್ಲೆಗಳ ಕ್ರೀಡಾಪಟುಗಳು 48 ಸ್ಪರ್ಧೆಗಳಲ್ಲಿತಲಾ 48 ಚಿನ್ನ ಮತ್ತು ಬೆಳ್ಳಿ ಹಾಗೂ 52 ಕಂಚಿನ ಪದಕಗಳನ್ನು ಗೆದ್ದುಕೊಂಡರು.
ಕಂಠೀರವ ಕ್ರೀಡಾಂಗಣದಲ್ಲಿಬುಧವಾರ ನಡೆದ ಬಾಲಕಿಯರ 400 ಮೀ. ಸ್ಪರ್ಧೆಯಲ್ಲಿಹರಿಣಿ(1:03.30 ಸೆ.) ಮೊದಲ ಸ್ಥಾನ ಗಳಿಸಿದರೆ, ತುಮಕೂರಿನ ಪುಣ್ಯ ಎನ್ .ಡಿ(1:03.60 ಸೆ.) ಮತ್ತು ದಕ್ಷಿಣ ಕನ್ನಡದ ಭೂಮಿಕಾ ರಾವ್ (1:03.70 ಸೆ.) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಜಯಿಸಿದರು.
ಇದೇ ಸ್ಪರ್ಧೆಯ ಬಾಲಕರ ವಿಭಾಗದಲ್ಲಿನಮಿಷ್ ಎ.ಪಿ (57.60 ಸೆ.) ಮೊದಲ ಸ್ಥಾನದೊಂದಿಗೆ ಚಿನ್ನಕ್ಕೆ ಕೊರಳೊಡ್ಡಿದರು. ತುಮಕೂರಿನ ಮಿಥುನ್ ಎಂ.ಎ. ಮತ್ತು ಧಾರವಾಡದ ಪ್ರವೀಣ್ ಎಲ್ . ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿದರು. ಬಾಲಕಿಯರ ಹೈಜಂಪ್ ಸ್ಪರ್ಧೆಯಲ್ಲಿಬಳ್ಳಾರಿಯ ವಿ. ಅಪೂರ್ವಾ(1.31 ಮೀಯ), ಇದೇ ಸ್ಪರ್ಧೆಯ ಬಾಲಕರ ವಿಭಾಗದಲ್ಲಿಉಡುಪಿಯ ಪ್ರಥಮ್ ಶೆಟ್ಟಿ(1.66 ಮೀ.), ಬಾಲಕಿಯರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿಬೆಂಗಳೂರು ನಗರದ ತನ್ವಿ ರವಿಕುಮಾರ್ (20.01 ಮೀ.), ಬಾಲಕರ ಶಾಟ್ ಪುಟ್ ಸ್ಪರ್ಧೆಯಲ್ಲಿಉಡುಪಿಯ ಆರ್ಯನ್ (11.20 ಮೀ.) ಚಿನ್ನದ ಪದಕ ಗೆದ್ದುಕೊಂಡರು.
ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ ತಂಡ ಚಾಂಪಿಯನ್ ಷಿಪ್ ನ ಬಾಲಕಿ ಮತ್ತು ಬಾಲಕಿಯರ ವಿಭಾಗಗಳಲ್ಲಿ ಬೆಂಗಳೂರು ನಗರ ಸ್ಪರ್ಧಿಗಳು ಚಾಂಪಿಯನ್ ಗಳಾಗಿ ಹೊರಹೊಮ್ಮಿದರು.
ಟೆನಿಸ್ ನಲ್ಲಿಬೆಂಗಳೂರು ನಗರ ಪ್ರಭುತ್ವ
ಟೆನಿಸ್ ಸ್ಪರ್ಧೆಯಲ್ಲಿ ಬೆಂಗಳೂರು ನಗರದ ಸಾನ್ವಿ ಮೋಹನ್ ಮತ್ತು ರಣವೀರ್ ಗಾವ್ಲಿಕ್ರಮವಾಗಿ ಬಾಲಕಿಯರ ಮತ್ತು ಬಾಲಕರ ಸಿಂಗಲ್ಸ್ ವಿಭಾಗದಲ್ಲಿಪ್ರಶಸ್ತಿ ಗೆದ್ದರೆ, ಡಬಲ್ಸ್ ವಿಭಾಗದಲ್ಲಿಬೆಂಗಳೂರು ನಗರದ ಪ್ರಿಯಾಲ್ ಮತ್ತು ಸಾನ್ವಿ ಹಾಗೂ ರಣ್ ವೀರ್ ಮತ್ತು ನಿಹಾಲ್ ಜೋಡಿ ಬಾಲಕರ ವಿಭಾಗದಲ್ಲಿಚಿನ್ನದ ಪದಕ ಗೆದ್ದುಕೊಂಡಿತು. ಈ ಮಧ್ಯೆ. ಈಜು ಸ್ಪರ್ಧೆಯ 4*100 ಮೀ. ಮೆಡ್ಲೆರಿಲೇ ಸ್ಪರ್ಧೆಯಲ್ಲಿಬಸವನಗುಡಿ ಈಜು ಕೇಂದ್ರ ಚಿನ್ನದ ಪದಕ ಗೆದ್ದುಕೊಂಡಿತು.